Pakistan: ಪಾಕಿಸ್ತಾನ ಮಾಜಿ ಪ್ರಧಾನಿಗೆ ಜೈಲಿನಲ್ಲಿ ಸೌಲಭ್ಯ ಲಭ್ಯ!

ಲಾಹೋರ್‌: ಪಾಕಿಸ್ತಾನದಲ್ಲಿ ವಿವಾದದ ಕಿಡಿ ಹೊತ್ತಿಸಿದ್ದ ಇಮ್ರಾನ್ ಖಾನ್ ವಿಚಾರ ಈಗ ಸುಖಾಂತ್ಯ ಕಂಡಿದೆ. ಸೌಲಭ್ಯ ಇಲ್ಲದ ಜೈಲಲ್ಲಿ, ಇಮ್ರಾನ್ ಖಾನ್ ನರಳಾಡುತ್ತಿರುವ ಬಗ್ಗೆ ವಿವಾದ ಎದ್ದಿತ್ತು. ಹಾಗೇ ಖುದ್ದು ಇಮ್ರಾನ್ ಖಾನ್ ಪತ್ನಿ, ಇಮ್ರಾನ್‌ಗೆ ಊಟದಲ್ಲಿ ವಿಷ ಹಾಕುತ್ತಾರೆ ಎಂದು ಆರೋಪಿಸಿದ್ದರು. ಇಷ್ಟೆಲ್ಲಾ ಆತಂಕದ ಮಧ್ಯೆ ಗುಡ್ ನ್ಯೂಸ್ ಒಂದು ಸಿಕ್ಕಿದ್ದು, ಇಮ್ರಾನ್ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಹೌದು, ಪಾಕಿಸ್ತಾನ ಮಾಜಿ ಪ್ರಧಾನಿಗೆ ಜೈಲಿನಲ್ಲಿ ಕಳಪೆ ವ್ಯವಸ್ಥೆ ಮತ್ತು ಖಾಸಗೀತನಕ್ಕೆ ಧಕ್ಕೆ ಆಗುತ್ತಿರುವ ಬಗ್ಗೆ ದೂರು ನೀಡಲಾಗಿತ್ತು. ಹೀಗಾಗಿ ಅಟಕ್‌ ಜೈಲಿನಲ್ಲಿ ಹೊಸ ಸ್ನಾನದ ಕೋಣೆ ನಿರ್ಮಿಸಲಾಗಿದೆ ಎಂದು ಪಂಜಾಬ್ ಸರ್ಕಾರದ ಕಾರಾಗೃಹ ಅಧಿಕಾರಿ ಮಾಹಿತಿ ನೀಡಿದ್ದಾರೆ. ಕೋಣೆ ಗೋಡೆ 5 ಅಡಿ ಎತ್ತರವಿದ್ದು, ಪಾಶ್ಚಾತ್ಯ ಶೈಲಿ ಕಮೋಡ್‌ & ವಾಶ್ ಬೇಸಿನ್‌ ಕೂಡ ಹೊಸ ಸ್ತಾನ ಕೋಣೆಯಲ್ಲಿ ಅಳವಡಿಸಿದೆ ಎಂದು ತಿಳಿಸಲಾಗಿದೆ. ಈ ಮೂಲಕ ಇಮ್ರಾನ್ ಖಾನ್‌ಗೆ ಅಗತ್ಯ ಇರುವ ವ್ಯವಸ್ಥೆ ನೀಡಲಾಗಿದ್ದು, ವಿವಾದಕ್ಕೆ ಬ್ರೇಕ್ ಹಾಕಲಾಗಿದೆ.

Imran Khan gets facilities in Jail room finally

ಜೈಲಿನಲ್ಲಿ ಯಾವ ಯಾವ ಸೌಲಭ್ಯ?

ಅಂದಹಾಗೆ ಉಡುಗೊರೆ ಮಾರಾಟ ಆರೋಪದಡಿ 14 ಕೋಟಿ ರೂಪಾಯಿ ಹಣ ಗಳಿಸಿದ್ದಕ್ಕಾಗಿ ಇಮ್ರಾನ್ ಖಾನ್ ಜೈಲು ಸೇರಿದ್ದಾರೆ. 3 ಜೈಲು ಶಿಕ್ಷೆ ಮಾಜಿ ಪ್ರಧಾನಿ ಇಮ್ರಾನ್‌ಗೆ ಫಿಕ್ಸ್ ಆಗಿದೆ. ಇಮ್ರಾನ್‌ಗೆ ಹಗಲಲ್ಲಿ ನೊಣ, ರಾತ್ರಿ ಸೊಳ್ಳೆ & ಹುಳಗಳ ಕಾಟ ಇರುವ ಜೈಲಿನ ಕೋಣೆಯಲ್ಲಿ ಟಾರ್ಚರ್ ಕೊಡುತ್ತಿರುವ ಆರೋಪ ಕೇಳಿಬಂದಿತ್ತು. ಹೀಗಾಗಿ ಪಾಕಿಸ್ತಾನ ಕಾರಾಗೃಹ ಕಾಯ್ದೆ ಸೆಕ್ಷನ್‌ 257 ಮತ್ತು 771ರ ಅಡಿ ಲಭ್ಯವಿರುವ ಸೌಲಭ್ಯಗಳನ್ನ ಖಾನ್ ಅವರಿಗೆ ಒದಗಿಸಲಾಗಿದೆ ಎಂದು ಪಂಜಾಬ್‌ ಕಾರಾಗೃಹ ಇಲಾಖೆಯ ವಕ್ತಾರರು ಮಾಹಿತಿ ನೀಡಿದ್ದಾರೆ. ಹೀಗೆ ಪಾಕ್‌ನ ಮಾಜಿ ಪ್ರಧಾನಿಗೆ ಅಗತ್ಯ ಇರುವ ಸೌಲಭ್ಯ ಸಿಕ್ಕಿದೆ.

ಜೈಲಿನಲ್ಲಿ ಇಮ್ರಾನ್‌ ಖಾನ್‌ಗೆ ನರಕ?

ತನ್ನ ಪತಿ ಇಮ್ರಾನ್ ಖಾನ್‌ರ ಜೀವ ಅಪಾಯಕ್ಕೆ ಸಿಲುಕಿದೆ ಎಂಬ ಆರೋಪವನ್ನ ಕೆಲ ದಿನಗಳ ಹಿಂದಷ್ಟೇ ಬುಶ್ರಾ ಮಾಡಿದ್ದಾರೆ. ಈ ಕುರಿತು ಪಂಜಾಬ್ ಗೃಹ ಕಾರ್ಯದರ್ಶಿಗೂ ಬುಶ್ರಾ ಪತ್ರ ಬರೆದಿದ್ದರು. ತನ್ನ ಪತಿಯನ್ನ ಅಟಕ್‌ ಜೈಲಿನಿಂದ ರಾವಲ್ಪಿಂಡಿಯ ಅಡಿಯಾಲ ಜೈಲಿಗೆ ಶಿಫ್ಟ್ ಮಾಡಲು ಕೋರ್ಟ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಕಾನೂನು ಪ್ರಕಾರ ಇಮ್ರಾನ್‌ರನ್ನು ಅಡಿಯಾಲ ಜೈಲಿಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದ್ದರು.

ಇದರ ಜೊತೆ ಇಮ್ರಾನ್ ಖಾನ್‌ ಅವರ ಸಾಮಾಜಿಕ ಮತ್ತು ರಾಜಕೀಯ ಸ್ಥಾನಮಾನ ಪರಿಗಣಿಸಿ ಜೈಲಲ್ಲಿ 'ಬಿ-ದರ್ಜೆ' ಸೌಲಭ್ಯ ಕಲ್ಪಿಸಿ ಎಂದು ಇಮ್ರಾನ್ ಪತ್ನಿ ಬುಶ್ರಾ ಒತ್ತಾಯಿಸಿದ್ರು. ಈ ಎಲ್ಲಾ ಒತ್ತಡಗಳ ಬೆನ್ನಲ್ಲೇ ಇದೀಗ ಇಮ್ರಾನ್ ಪತ್ನಿ ಮನವಿಗೆ ಮನ್ನಣೆ ಸಿಕ್ಕಿದೆ. ಇಮ್ರಾನ್ ಇರುವ ಜೈಲು ಕೋಣೆಗೆ ಅಗತ್ಯ ಇರುವ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗೇ ಪಾಕಿಸ್ತಾನದಲ್ಲಿ ಅಸ್ತಿತ್ವಕ್ಕೆ ಬಂದಿರುವ ಹಂಗಾಮಿ ಸರ್ಕಾರ ಇಮ್ರಾನ್ ಮೇಲೆ ಒಂದಷ್ಟು ಮೃದು ನಿಲುವು ತಳೆದಂತೆ ಕಾಣುತ್ತಿದೆ.

Imran Khan gets facilities in Jail room finally

ಮನೆ ಊಟಕ್ಕೂ ಸಿಕ್ಕಿಲ್ಲ ಪರ್ಮಿಷನ್

ಭ್ರಷ್ಟಾಚಾರದ ಕೂಪ ಪಾಕಿಸ್ತಾನದಲ್ಲಿ, ಮಾಜಿ ಪ್ರಧಾನಿ ಜೈಲಿಗೆ ಹೋಗುವುದು ಮಾಮೂಲು. ಅದರಲ್ಲೂ ಇಮ್ರಾನ್ ಖಾನ್ ವಿಚಾರದಲ್ಲಿ ಗಂಭೀರ ಆರೋಪ ಇದೆ. ಇಷ್ಟಿದ್ದರೂ ಇಮ್ರಾನ್‌ಗೆ ಉತ್ತಮ ಸೌಕರ್ಯ ಕಲ್ಪಿಸಿ ಎಂಬ ಆಗ್ರಹ ಕೇಳಿಬರುತ್ತಿದೆ. ಇಮ್ರಾನ್ ಪತ್ನಿ, ಇಮ್ರಾನ್ ಮೇಲೆ ಎರಡು ಬಾರಿ ಹತ್ಯೆ ಪ್ರಯತ್ನ ನಡೆದಿದೆ. ಆದರೆ ಹತ್ಯೆಗೆ ಯತ್ನಿಸಿದವರನ್ನ ಇನ್ನೂ ಬಂಧಿಸಿಲ್ಲ. ಹೀಗಾಗಿ ಇದೀಗ ಇಮ್ರಾನ್‌ಗೆ ವಿಷ ಹಾಕುವ ಭಯವಿದೆ ಎಂದಿದ್ದರು. ಜೈಲು ನಿಯಮದ ಪ್ರಕಾರ ಖಾಸಗಿ ವೈದ್ಯರಿಂದ ವೈದ್ಯಕೀಯ ಪರೀಕ್ಷೆಗೆ ಒಳಗಾಗಲು ಅವಕಾಶ ನೀಡಬೇಕು ಎಂದು ಪಾಕ್ ಮಾಝಿ ಪ್ರಧಾನಿ ಪತ್ನಿ ಮನವಿ ಮಾಡಿದ್ದರು. ಹೀಗೆ ಇಮ್ರಾನ್ ಪತ್ನಿ ಆರೋಪ ಮಾಡಿದ ಕೆಲವೇ ದಿನದಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+