ಕಮಾಂಡರ್ ಮನೆಗೆ ನುಗ್ಗಿದ ಇಮ್ರಾನ್ ಖಾನ್ ಬೆಂಬಲಿಗರು!
ಇಸ್ಲಾಮಾಬಾದ್: ಇಮ್ರಾನ್ ಖಾನ್ ಬಂಧನ ಬಳಿಕ ಅಕ್ಷರಶಃ ನರಕವಾಗಿದೆ ಪಾಕಿಸ್ತಾನ. ರೊಚ್ಚಿಗೆದ್ದು ಕಂಡ ಕಂಡ ಕಡೆ ಕಲ್ಲು ತೂರುತ್ತಿರುವ ಇಮ್ರಾನ್ ಖಾನ್ ಬೆಂಬಲಿಗರು, ಸೀದಾ ಸೀದಾ ಪಾಕ್ ಕಮಾಂಡರ್ ಮನೆಗೆ ನುಗ್ಗಿದ್ದಾರೆ. ಪಾಕಿಸ್ತಾನ ಸೇನಾ ಕಮಾಂಡರ್ ಮನೆಗೆ ನುಗ್ಗಿ ಗಲಾಟೆ ನಡೆಸಿದ್ದಾರೆ ಎನ್ನಲಾಗಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗುತ್ತಿದೆ.
ಪತ್ರಕರ್ತನ ಹತ್ಯೆ ಸಂಬಂಧ ಇಮ್ರಾನ್ ಖಾನ್ ISI ಅಧಿಕಾರಿ ವಿರುದ್ಧ ಆರೋಪ ಮಾಡಿದ್ದರು. ಇಮ್ರಾನ್ ಖಾನ್ ಆರೋಪ ಮಾಡುತ್ತಿದ್ದಂತೆ ಐಎಸ್‌ಐ ಜೊತೆ ಪಾಕಿಸ್ತಾನ ಮಿಲಿಟರಿ ರೊಚ್ಚಿಗೆದ್ದು ಮೈಕೊಡವಿ ನಿಂತಿತ್ತು. ಅದರ ಪರಿಣಾಮವನ್ನ ಇಮ್ರಾನ್ ಅನುಭವಿಸುವ ಪರಿಸ್ಥಿತಿ ಎದುರಾಗಿದೆ. ಐಎಸ್‌ಐ ತೋಡಿದ ಬಲೆಗೆ ಬಿದ್ದು ಇಮ್ರಾನ್ ಅಂದರ್ ಆಗಿದ್ದಾರೆಂದು ಪಾಕಿಸ್ತಾನದ ಜನ ಆರೋಪಿಸುತ್ತಿದ್ದಾರೆ. ಇದರ ಪರಿಣಾಮ ನೇರವಾಗಿ ಪಾಕ್ ಸೇನಾ ಕಮಾಂಡರ್ ಮನೆಗೆ ನುಗ್ಗಿ ಬೆಂಕಿ ಹಚ್ಚಿದ್ದಾರಂತೆ ಪ್ರತಿಭಟನಾಕಾರರು.

ಪಾಕಿಸ್ತಾನ ಸೇನೆಯಿಂದ ಕಂಡಲ್ಲಿ ಗುಂಡು
ಇಮ್ರಾನ್ ಖಾನ್ ಕ್ರಿಕೆಟ್ ಆಡುವಾಗ ಎಷ್ಟು ಫೇಮಸ್ ಆಗಿದ್ರೋ, ಈಗಲೂ ಅಷ್ಟೇ ಬೆಂಬಲಿಗರು ಮತ್ತು ಅಭಿಮಾನಿ ಬಳಗ ಹೊಂದಿದ್ದಾರೆ. ಹೀಗಾಗಿ ಇಮ್ರಾನ್ ಅರೆಸ್ಟ್ ಆಗುತ್ತಿದ್ದಂತೆ ಪಾಕಿಸ್ತಾನದಲ್ಲಿ ಕಾಡ್ಗಿಚ್ಚು ಧಗ ಧಗಿಸುತ್ತಿದೆ. ಆದರೆ ಇದನ್ನ ಕಂಟ್ರೋಲ್ ಮಾಡಲು ಪಾಕ್ ಸೇನೆ ಕೈಯಲ್ಲಿ ಆಗುತ್ತಿಲ್ಲ. ಹೀಗಾಗಿ ಅಮಾಯಕ ಜನರ ಮೇಲೂ ಗುಂಡು ಹಾರಿಸುತ್ತಾ, ಪ್ರತಿಭಟನೆ ಕಂಟ್ರೋಲ್ ಮಾಡಲು ಉಗ್ರ ದಾರಿ ಕಂಡುಕೊಂಡಿದೆ. ಪಾಕ್ ಸೇನೆ ಹಾರಿಸಿದ ಗುಂಡಿಗೆ ಹಲವರು ಜೀವ ಕಳೆದುಕೊಂಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
Visuals of large-scale violence, arson, clashes and riots are unfolding in many parts of Pakistan following the arrest of Imran Khan.
— #जयश्रीराधे 🚩🙏 (@gayatrigkhurana) May 9, 2023
PTI supporters attack corps commander's house in Lahore, set fire to a police vehicle in Karachi
- Actually, This is called Karma!#ImranKhan pic.twitter.com/FFItD6cBgk
ಇಮ್ರಾನ್ ಖಾನ್ ಕಥೆ ಮುಂದೇನು?
ಜೈಲು ಸೇರಿರುವ ಇಮ್ರಾನ್ ಖಾನ್ ಜೀವಂತವಾಗಿ ಹೊರಗೆ ಬರ್ತಾರಾ? ಇಮ್ರಾನ್ ಖಾನ್ ಕಥೆ ಮುಂದೇನು? ಹೀಗೆ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಅಭಿಮಾನಿಗಳು, ಬೆಂಬಲಿಗರು ಭಯದಲ್ಲೇ ಪ್ರಶ್ನೆ ಕೇಳುತ್ತಿದ್ದಾರೆ. ಆದರೆ ಉತ್ತರ ಹೇಳುವ ಮುಖಗಳು ಮಾತ್ರ ಕಾಣುತ್ತಲೇ ಇಲ್ಲ. ಈ ನಡುವೆ ವಿಚಾರಣೆಗೆ ಬಂದ ಇಮ್ರಾನ್ ಖಾನ್ ಅವರನ್ನ ಪಾಕಿಸ್ತಾನದ ಅರೆಸೇನಾ ಪಡೆ ಬಂಧಿಸಿದ್ದು ಯಾಕೆ? ಇದು ಹೇಗೆ ಸಾಧ್ಯ? ಎಂಬ ಪ್ರಶ್ನೆ ತೀವ್ರವಾಗಿದೆ. ಉತ್ತರ ಸಿಗದ ಪ್ರಶ್ನೆ ಹಿಡಿದು ಇಮ್ರಾನ್ ಖಾನ್ ಬೆಂಬಲಿಗರು ಹಿಂಸೆಗೆ ಇಳಿದಿದ್ದಾರೆ.
Scary scenes in Mianwali this is twitter by Lawayer forum of Pakistan it seems f 16 #PakistanArmy imran khan arrest laid to large scale violence . Core commander house also been attacked . 23 crore Pakistani future is pushed into darkness . #savepakidtan pic.twitter.com/67mAuxXW2V
— | Kewal Kapoor| केवल कपूर । (@KewalKapoor) May 9, 2023
ಇಮ್ರಾನ್ ಹೊರಗೆ ಬಂದರೆ ISI ನಾಶ?
ಈಗ ಪಾಕ್ ಮಾಜಿ ಪ್ರಧಾನಿ ಬಂಧನದ ಹಿಂದೆ ISI ಕೈವಾಡ ಇದೆ ಎಂಬ ಆರೋಪಕ್ಕೆ ಮತ್ತೊಂದು ಬಲ ಸಿಕ್ಕಿದೆ. ಅದೇನೆಂದರೆ, ಇಮ್ರಾನ್ ಖಾನ್ ಇತ್ತೀಚೆಗೆ ಐಎಸ್‌ಐ ಹಾಗೂ ಪಾಕಿಸ್ತಾನದ ಮಿಲಿಟರಿ ಅಧಿಕಾರಿಗಳ ವಿರುದ್ಧ ಕೆಂಡಕಾರುತ್ತಿದ್ದರು. ಹೀಗಾಗಿ ಇಮ್ರಾನ್ ಖಾನ್ ಜೈಲಿನಿಂದ ಹೊರಗೆ ಬಂದು, ಮತ್ತೊಮ್ಮೆ ಪಾಕ್ ಪ್ರಧಾನಿ ಪಟ್ಟಕ್ಕೆ ಏರಿದರೆ ISI ಭ್ರಷ್ಟ ಅಧಿಕಾರಿಗಳ ಕಥೆ ಮುಗಿಸೋದು ಗ್ಯಾರಂಟಿ. ಈ ಕಾರಣಕ್ಕೆ ಇಮ್ರಾನ್ ಖಾನ್ ಲಾಕ್ ಆಗಿದ್ದಾರೆ ಎನ್ನಲಾಗುತ್ತಿದೆ. ಇದು ಹಿಂಸೆ ಭುಗಿಲೆದ್ದಿರುವ ಪಾಕಿಸ್ತಾನದಲ್ಲಿ ಮತ್ತಷ್ಟು ಭಯ ತರಿಸಿದೆ.

ಒಟ್ನಲ್ಲಿ ಹೊತ್ತಿ ಉರಿಯುತ್ತಿರುವ ಪಾಕ್ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಈಗಿನ ಸ್ಥಿತಿ ಗಮನಿಸಿದರೆ ಇನ್ನೂ ಹಲವು ದಿನಗಳ ಕಾಲ ಪಾಕಿಸ್ತಾನದಲ್ಲಿ ಹಿಂಸೆ ಭುಗಿಲೇಳುವ ಲಕ್ಷಣ ಎದುರಾಗಿದೆ. ಇತ್ತ ಪಾಕ್ ಸೇನೆ ದುರುದ್ದೇಶ ಇಟ್ಟುಕೊಂಡೆ ಇಮ್ರಾನ್ ಅರೆಸ್ಟ್ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಮತ್ತೊಂದ್ಕಡೆ ಪಾಕ್ ಜನರು ಬೀದಿಗೆ ಇಳಿದು ಇಮ್ರಾನ್ ಖಾನ್ ಪರ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಪಾಕಿಸ್ತಾನ ಸೇನೆ ಭಾರಿ ಪ್ರಮಾಣದಲ್ಲಿ ಭದ್ರತಾ ಪಡೆಗಳನ್ನ ನಿಯೋಜನೆ ಮಾಡಿ, ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುತ್ತಿದೆ.












Click it and Unblock the Notifications