ಅಯ್ಯಯ್ಯೋ.. ಪಾಕಿಸ್ತಾನ ಮಾಜಿ ಪ್ರಧಾನಿ ಪರಿಸ್ಥಿತಿ ಯಾಕ್ ಹಿಂಗಾಯ್ತು?

ಇಮ್ರಾನ್ ಖಾನ್ ವಿರುದ್ಧ ದಿನಕ್ಕೊಂದು ರೀತಿ ಶಿಕ್ಷೆ ಪ್ರಕಟವಾಗುತ್ತಿದೆ. ಇನ್ನೇನು ಪಾಕ್‌ನ ಸಂಸತ್‌ಗೆ ಚುನಾವಣೆ ನಡೆಯಲಿದೆ, ಆದ್ರೆ ಇದೇ ಸಮಯದಲ್ಲಿ ಇಮ್ರಾನ್‌ಗೆ ಹೊಸ ಹೊಸ ಸಂಕಷ್ಟ ಎದುರಾಗುತ್ತಿದೆ. ಈಗಾಗಲೇ 150ಕ್ಕೂ ಹೆಚ್ಚು ಕೇಸ್ ಎದುರಿಸುತ್ತಿರುವ ಪಾಕಿಸ್ತಾನ ಮಾಜಿ ಪ್ರಧಾನಿಗೆ ಮತ್ತೊಂದು ಕೇಸ್‌ನಲ್ಲಿ ಶಿಕ್ಷೆ ಪ್ರಕಟವಾಗಿದೆ!

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಾಲು, ಸಾಲು ಸಂಕಷ್ಟಗಳಲ್ಲಿ ಸಿಲುಕಿ ನರಳುತ್ತಿದ್ದಾರೆ ತೋಷಖಾನಾ ಭ್ರಷ್ಟಾಚಾರ ಕೇಸ್ ಹಿನ್ನೆಲೆ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಅವರ ಹೆಂಡತಿ ಬುಶ್ರಾ ಬೀಬಿ ಅವರಿಗೆ, 14 ವರ್ಷ ಜೈಲು ಶಿಕ್ಷೆ ಪ್ರಕಟ ಆಗಿತ್ತು. ಈ ಆಘಾತವು ಸಾಲುತ್ತಿಲ್ಲ ಎನ್ನುವಂತೆ ಮತ್ತೊಂದು ಶಾಕ್ ಎದುರಾಗಿದೆ. ಇಮ್ರಾನ್ ಖಾನ್ ಅವರಿಗೆ ಇದೀಗ ತಮ್ಮ ಮದುವೆ ವಿಚಾರವೇ ದೊಡ್ಡ ಕಂಟಕ ತಂದೊಡ್ಡಿದೆ. ಹಾಗಾದರೆ, ಅಸಲಿಗೆ ಆಗಿದ್ದು ಏನು? ಮುಂದೆ ಓದಿ.

Imran Khan And His Wife In Trouble In Another Case

ಇಮ್ರಾನ್ ಖಾನ್ ಮತ್ತೆ ಲಾಕ್!

ಹೌದು, ಪಾಕ್‌ನ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಮತ್ತೊಂದು ದೊಡ್ಡ ಹಿನ್ನಡೆಯಾಗಿದ್ದು. ಮತ್ತೊಂದು ಕೇಸ್‌ನಲ್ಲಿ ಅವರು ಲಾಕ್ ಆಗಿದ್ದಾರೆ. ಇಮ್ರಾನ್ ಅವರಿಗೆ ಹಾಗೂ ಅವರ ಪತ್ನಿ ಬುಶ್ರಾ ಬೀಬಿಗೆ ರಾವಲ್ಪಿಂಡಿ ವಿಚಾರಣಾ ನ್ಯಾಯಾಲಯ 'ಇಸ್ಲಾಮಿನ' ವಿವಾಹ ಪ್ರಕರಣದಲ್ಲಿ 07 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದು ಇಮ್ರಾನ್ ಖಾನ್ ವಿರುದ್ಧ ನೀಡುತ್ತಿರುವ 3ನೇ ಅತಿ ದೊಡ್ಡ ಜೈಲು ಶಿಕ್ಷೆ ಆಗಿದೆ. ಅಷ್ಟಕ್ಕೂ ಬುಶ್ರಾ ಬೀಬಿ ಅವರ ಮಾಜಿ ಪತಿ ಖಾವರ್ ಮೇನಕಾ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ನ್ಯಾಯಾಧೀಶರು ಈ ತೀರ್ಪು ನೀಡಿದ್ದಾರೆ.

ಇಮ್ರಾನ್ ಖಾನ್ ಜೈಲಿನಲ್ಲೇ ಲಾಕ್!

ಪಾಕಿಸ್ತಾನದಲ್ಲಿ ಚುನಾವಣೆ ಹತ್ತಿರ ಬರುತ್ತಿರುವ ವೇಳೆ ಇಮ್ರಾನ್ ಖಾನ್ ಬೆಂಬಲಿಗರಿಗೆ ಸಂತಸ ಹೆಚ್ಚಾಗಿತ್ತು. ಹೇಗಾದರೂ ಇಮ್ರಾನ್ ಬಿಡುಗಡೆ ಆಗೋದರೆ, ಈ ಬಾರಿಯು ಕೂಡ ಇಮ್ರಾನ್ ಖಾನ್ ಗೆಲ್ಲುವುದು ಗ್ಯಾರಂಟಿ ಅಂತಾ ಅಂದುಕೊಂಡಿದ್ದರು. ಆದ್ರೆ ಅವರ ಕನಸು ಕನಸಾಗಿಯೇ ಉಳಿದಿದೆ. ಇಮ್ರಾನ್ ಹೊರಗೆ ಬರುವುದು ಬಿಡಿ ಜೈಲಿನಲ್ಲೂ ನೆಮ್ಮದಿಯಾಗಿ ಇರಲು ಆಗುತ್ತಿಲ್ಲ ಹೀಗಿದ್ದಾಗಲೇ ಮತ್ತೊಂದು ಕೇಸ್‌ನಲ್ಲಿ ಇಮ್ರಾನ್ ಲಾಕ್ ಆಗಿದ್ದಾರೆ.

ಪಾಕಿಸ್ತಾನ ಚುನಾವಣೆ ಯಾವಾಗ?

2024ರ ಫೆಬ್ರವರಿ 8 ಕ್ಕೆ ಪಾಕಿಸ್ತಾದ ಸಂಸತ್‌ಗೆ ಚುನಾವಣೆ ಫಿಕ್ಸ್ ಆಗಿದ್ದು. ಹೀಗಾಗಿ ಸಕಲ ಸಿದ್ಧತೆ ನಡೆಯುತ್ತಿರುವ ಸಮಯಕ್ಕೆ ಇಮ್ರಾನ್ ಹೊರಗೆ ಬರ್ತಾರಾ? ಅನ್ನೋ ಕುತೂಹಲ ಮೂಡಿತ್ತು. ಆದರೆ ಇಮ್ರಾನ್ ಖಾನ್ ವಿರುದ್ಧ ಈಗ ಬರುತ್ತಿರುವ ತೀರ್ಪುಗಳನ್ನ ನೋಡಿದ್ರೆ ಇನ್ನೂ ಹಲವು ವರ್ಷ ಇಮ್ರಾನ್ ಹೊರಗೆ ಬರುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಇಮ್ರಾನ್‌ರ ಅಭಿಮಾನಿಗಳಿಗೂ ಆತಂಕ ಶುರುವಾಗಿದೆ.

Imran Khan And His Wife In Trouble In Another Case

ಒಟ್ನಲ್ಲಿ ಇಮ್ರಾನ್ ಖಾನ್ ಈಗ ಪ್ರತಿ ಕ್ಷಣಕ್ಕೂ ಒಂದೊಂದು ಕಂಟಕದಲ್ಲಿ ಲಾಕ್ ಆಗ್ತಿದ್ದು ಮುಂದಿನ ದಿನದಲ್ಲಿ ಮತ್ತಷ್ಟು ಸಂಕಷ್ಟ ಎದುರಿಸುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿಯೇ ಪಾಕಿಸ್ತಾನದ ಹಂಗಾಮಿ ಸರ್ಕಾರ ಆ ದೇಶದಲ್ಲಿ ಭದ್ರತೆಯನ್ನ ಮತ್ತಷ್ಟು ಬಿಗಿ ಮಾಡುತ್ತಿದೆ. ಇಷ್ಟಾದರೂ ಚುನಾವಣೆ ಸಮಯದಲ್ಲಿ ಪಾಕಿಸ್ತಾನದಲ್ಲಿ ಹಿಂಸಾಚಾರ ನಡೆಯುವ ಭಯವು ಆವರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+