ಉಕ್ರೇನ್‌ಗೆ ತಕ್ಷಣ ಸಿಗುತ್ತದೆಯೇ "ಯುರೋಪಿಯನ್ ಒಕ್ಕೂಟ"ದ ಸದಸ್ಯತ್ವ?: ಝೆಲೆನ್ಸ್ಕಿ ಉತ್ತರ

ಕೀವ್, ಫೆಬ್ರವರಿ 28: ಉಕ್ರೇನ್ ಮೇಲೆ ರಷ್ಯಾದ ನಡೆಸುತ್ತಿರುವ ಯುದ್ಧವು ಐದನೇ ದಿನಕ್ಕೆ ಕಾಲಿಟ್ಟಿದೆ. ಯುರೋಪಿಯನ್ ರಾಷ್ಟ್ರದ ಪರವಾಗಿರುವ ಉಕ್ರೇನ್ ದೇಶಕ್ಕೆ ತಕ್ಷಣವೇ ಯುರೋಪಿಯನ್ ಒಕ್ಕೂಟದ ಸದಸ್ಯತ್ವ ನೀಡಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮನವಿ ಮಾಡಿಕೊಂಡಿದ್ದಾರೆ.

ಉಕ್ರೇನ್ ರಾಷ್ಟ್ರಕ್ಕೆ ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳು ತಕ್ಷಣವೇ ಸದಸ್ಯತ್ವವನ್ನು ನೀಡಬೇಕು. ಏಕೆಂದರೆ ಯುರೋಪಿಯನ್ ದೇಶಗಳ ಜೊತೆಗೆ ಒಂದಾಗಿರುವುದೇ ನಮ್ಮ ಮುಖ್ಯ ಗುರಿಯಾಗಿದೆ. ಮುಖ್ಯವಾಗಿ ಸಮಾನ ಪಾದದಲ್ಲಿರಬೇಕಾಗಿದೆ. ನ್ಯಾಯಯುತವಾದ ನಮ್ಮ ಉದ್ದೇಶವು ಸಾಕಾರಗೊಳ್ಳಲಿದೆ ಎಂದು ಝೆಲೆನ್ಸ್ಕಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಷ್ಯಾ ದಾಳಿ ನಡೆಸಿದ ಮೊದಲ ನಾಲ್ಕು ದಿನಗಳಲ್ಲಿ 16 ಮಕ್ಕಳು ಮೃತಪಟ್ಟಿದ್ದು, ಅವರನ್ನು ಉಕ್ರೇನ್ ವೀರರು ಎಂದು ಝೆಲೆನ್ಸ್ಕಿ ಶ್ಲಾಘಿಸಿದ್ದಾರೆ. ಇದೇ ವೇಳೆ 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದರು.

Im Sure Its Possible: Ukraine President Appeals For Immediate EU Membership

ಉಕ್ರೇನ್ ನೆಲದಲ್ಲಿ ಏಳು ಮಕ್ಕಳು ಸೇರಿದಂತೆ ಕನಿಷ್ಠ 102 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ಮಿಚೆಲ್ ಬ್ಯಾಚೆಲೆಟ್ ಸೋಮವಾರ ಹೇಳಿದ್ದಾರೆ. ಆದರೆ ನೈಜ ಸಂಖ್ಯೆಗಳು ಬಹುಶಃ ಇನ್ನೂ ಹೆಚ್ಚಾಗಿರಬಹುದು ಎಂದಿದ್ದಾರೆ.

ಉಕ್ರೇನಿಯನ್ನರು ತಮ್ಮ ಶಕ್ತಿ ತೋರಿದ್ದಾರೆ ಎಂದ ಅಧ್ಯಕ್ಷ:

"ಉಕ್ರೇನಿಯನ್ನರು ನಾವು ಯಾರೆಂದು ಜಗತ್ತಿಗೆ ತೋರಿಸಿದ್ದಾರೆ. ರಷ್ಯಾವು ಜಗತ್ತಿನ ಎದುರಿಗೆ ಏನಾಯಿತು ಎಂಬುದನ್ನು ತೋರಿಸಿದೆ," ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದರು.

ಶಸ್ತ್ರಾಸ್ತ್ರ ತ್ಯಾಗಕ್ಕೆ ಸೂಚಿಸಿದ ಝೆಲೆನ್ಸ್ಕಿ:

ರಷ್ಯಾ ಸೈನಿಕರು ತಮ್ಮ ಶಸ್ತ್ರಾಸ್ತ್ರ ತ್ಯಾಗ ಮಾಡುವಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮನವಿ ಮಾಡಿಕೊಂಡಿದ್ದಾರೆ. "ನಿಮ್ಮ ಉಪಕರಣಗಳನ್ನು ತ್ಯಜಿಸಿ. ಇಲ್ಲಿಂದ ಹೊರ ಹೋಗಿ. ನಿಮ್ಮ ಕಮಾಂಡರ್‌ಗಳನ್ನು ನಂಬಬೇಡಿ. ನಿಮ್ಮ ಪ್ರಚಾರಕರನ್ನು ನಂಬಬೇಡಿ. ನಿಮ್ಮ ಜೀವಗಳನ್ನು ಉಳಿಸಿಕೊಳ್ಳಿ" ಎಂದು ಝೆಲೆನ್ಸ್ಕಿ ಕರೆ ನೀಡಿದ್ದಾರೆ.

ರಷ್ಯಾ-ಉಕ್ರೇನ್ ಮಧ್ಯೆ ಸಂಧಾನ ಮಾತುಕತೆ:

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಪರಮಾಣು ದಾಳಿ ಬೆದರಿಕೆಯ ಬಳಿಕ ಉಕ್ರೇನ್​ ಶಾಂತಿ ಮಾತುಕತೆಗೆ ಒಪ್ಪಿಗೆ ನೀಡಿದ್ದು, ಬೆಲಾರಸ್​ ಗಡಿಯಲ್ಲಿ ಉಭಯ ರಾಷ್ಟ್ರಗಳ ನಿಯೋಗ ಮಾತುಕತೆಗೆ ಮುಂದಾಗಲಿವೆ. ರಷ್ಯಾ-ಉಕ್ರೇನ್ ಮಧ್ಯೆ ಯುದ್ಧ ಸಂಧಾನ ನಡೆಸಲು ಎಲ್ಲವೂ ಸಿದ್ಧವಾಗಿದೆ. ಉಭಯ ರಾಷ್ಟ್ರಗಳ ನಿಯೋಗಗಳ ಬರುವಿಕೆಗಾಗಿ ಕಾಯಲಾಗುತ್ತಿದೆ ಎಂದು ಬೆಲಾರಸ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟ್ವೀಟ್​ ಮಾಡಿದೆ. ಬೆಲಾರಸ್​ ಗಡಿಯಲ್ಲಿ ನಡೆಯುತ್ತಿರುವ ಸಂಧಾನ ಸಭೆಯಲ್ಲಿ ಉಕ್ರೇನ್ ರಕ್ಷಣಾ ಸಚಿವರು ಭಾಗಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+