Hurricane Milton: ಓಡ್ರೋ.. ಓಡ್ರೋ.. ಓಡ್ರೋ ಇದು ‘ಮಿಲ್ಟನ್’ ಅಡ್ಡಾ!
ಅಮೆರಿಕದಲ್ಲಿ ಮತ್ತೆ ಪ್ರಕೃತಿ ದೇವಿ ಆಘಾತ ನೀಡಲು ಸಜ್ಜಾಗಿದ್ದು, ಭಯದ ವಾತಾವರಣ ಇದೀಗ ನಿರ್ಮಾಣ ಆಗಿದೆ. ಅಂದಹಾಗೆ ಅತ್ಯಂತ ಪ್ರಬಲ ಚಂಡಮಾರುತ ಅಂತಾ ಕರೆಯುವ ಸೈಕ್ಲೋನ್ ಇದೀಗ ಅಮೆರಿಕದ ಕರಾವಳಿಗೆ ಅಪ್ಪಳಿಸಲು ಸಜ್ಜಾಗಿದೆ. ಈ ಹಿನ್ನೆಲೆ ಜನರು & ಸರ್ಕಾರ ಬೆಚ್ಚಿಬಿದ್ದಿದೆ. ಫ್ಲೋರಿಡಾ ಕಡಲ ತೀರಕ್ಕೆ ಅಪ್ಪಳಿಸಲಿರುವ ಭೀಕರ ಚಂಡಮಾರುತ, ಇದೀಗ ಇಡೀ ಅಮೆರಿಕ ಬೆಚ್ಚಿ ಬೀಳುವಂತೆ ಮಾಡಿದೆ. ಹಾಗಾದ್ರೆ ಈ ಚಂಡಮಾರುತದ ವೇಗ ಎಷ್ಟು? ಇದರಿಂದ ಆಗಬಹುದಾದ ಹಾನಿ ಎಂತಹದ್ದು? ಬನ್ನಿ ತಿಳಿಯೋಣ.
ಅಮೆರಿಕದಲ್ಲಿ ಒಂದಲ್ಲ ಒಂದು ರೀತಿಯ ಪ್ರಾಕೃತಿಕ ಸಮಸ್ಯೆ ಎದುರಾಗುತ್ತಲೇ ಇರುತ್ತೆ. ಈ ರೀತಿ ಎದುರಾಗುವ ಪ್ರಕೃತಿ ವಿಕೋಪಗಳ ಪೈಕಿ ಚಂಡಮಾರುತ ಭಯವೇ ದೊಡ್ಡದು ಅಂತ ಹೇಳಬಹುದು. ಹೀಗೆ ಇದೀಗ ಮತ್ತೊಂದು ಭೀಕರ ಚಂಡಮಾರುತ ಇದೀಗ ಅಮೆರಿಕ ಕಡಲ ತೀರಕ್ಕೆ ಅಪ್ಪಳಿಸಲು ಸಜ್ಜಾಗಿದೆ. 'ಮಿಲ್ಟನ್' ಎಂದು ಹೆಸರು ಇಟ್ಟಿರುವ ಈ ಭೀಕರವಾದ, ಪ್ರಬಲವಾದ ಚಂಡಮಾರುತ ನೂರಾರು ಜನರ ಜೀವ ತೆಗೆಯುವ ಭಯ ಕೂಡ ಇದೆ. ಅರೆ ಹಾಗಾದ್ರೆ ಈ ಚಂಡಮಾರುತದ ವೇಗ ಎಷ್ಟು ಇರಬಹುದು? ಮುಂದೆ ಓದಿ.

250 ಕಿಲೋ ಮೀಟರ್ ವೇಗದಲ್ಲಿ...
ಒಂದು ತಿಂಗಳ ಹಿಂದಷ್ಟೇ, ಅಮೆರಿಕದ ಫ್ಲೊರಿಡಾ ರಾಜ್ಯದಲ್ಲಿ ದೊಡ್ಡ ಚಂಡಮಾರುತವೇ ಅಪ್ಪಳಿಸಿತ್ತು. ಸೆಪ್ಟೆಂಬರ್ 26 ರಂದು ಅಮೆರಿಕದ ಫ್ಲೊರಿಡಾ ರಾಜ್ಯದ ಕರಾವಳಿಗೆ ಈ ರೀತಿಯ ಸೈಕ್ಲೋನ್ ಅಪ್ಪಳಿಸಿತ್ತು. ಬಿಗ್ ಬೆಂಡ್ ಪ್ರದೇಶಕ್ಕೆ ಅಪ್ಪಳಿಸಿದ್ದ 'ಹೆಲೆನ್' ಚಂಡಮಾರುತ 200 ಜನರ ಜೀವ ತೆಗೆದಿತ್ತು. ಆದರೆ ಇದಕ್ಕಿಂತಲೂ ಭಯಾನಕ ಸಂಗತಿ ಇದೀಗ ಹೊರ ಬಿದ್ದಿದೆ. ಅದು ಏನು ಅಂದ್ರೆ ಕಳೆದ ತಿಂಗಳು ಅಪ್ಪಳಿಸಿದ್ದ 'ಹೆಲೆನ್' ಚಂಡಮಾರುತ ಸುಮಾರು 140 ಕಿಲೋ ಮೀಟರ್ ವೇಗದಲ್ಲಿ ಇತ್ತು. ಆದರೆ ಇದೀಗ ಅಪ್ಪಳಿಸುತ್ತಿರುವ 'ಮಿಲ್ಟನ್' ಸೈಕ್ಲೋನ್ ಬರೋಬ್ಬರಿ 250 ಕಿಲೋ ಮೀಟರ್ ವೇಗದಲ್ಲಿ ಫ್ಲೊರಿಡಾ ಕರಾವಳಿಗೆ ಅಪ್ಪಳಿಸುವ ಭಯವು ಕಾಡುತ್ತಿದೆ.
'ಮಿಲ್ಟನ್' ಮಹಾ ಚಂಡಮಾರುತ
ಅಂದಹಾಗೆ ಅಮೆರಿಕದ ಇತಿಹಾಸದಲ್ಲಿ ಸಾಲು ಸಾಲು ದೊಡ್ಡ ಚಂಡಮಾರುತ ಅಪ್ಪಳಿಸಿವೆ ಎನ್ನಬಹುದು. ಹೀಗಿದ್ದಾಗ ಮತ್ತೊಂದು ಮಹಾ ವಿಪತ್ತಿಗೆ ಅಮೆರಿಕದ ಕರಾವಳಿ ಪ್ರದೇಶವು ಸಜ್ಜಾಗುತ್ತಿದೆ. ಅದರಲ್ಲೂ ಚಂಡಮಾರುತದ ಹಿನ್ನೆಲೆ ಅಕ್ಟೋಬರ್ 6ಕ್ಕೆ ಚಂಡಮಾರುತದ ವೇಗವು 100 ಕಿಲೋ ಮೀಟರ್ ಇತ್ತು, ಇದೀಗ ಅದು ಸುಮಾರು 200 ಕಿಲೋ ಮೀಟರ್‌ನ ದಾಟಿದೆ. ಇನ್ನು ಕೆಲವೇ ಗಂಟೆಗಳಲ್ಲಿ 'ಮಿಲ್ಟನ್' ಮಹಾ ಚಂಡಮಾರುತದ ವೇಗ ಮತ್ತಷ್ಟು ಹೆಚ್ಚಾಗಲಿದೆ.
ಈ ರೀತಿ ಸುಮಾರು 250 ಕಿಲೋ ಮೀಟರ್ ವೇಗದಲ್ಲಿ ಫ್ಲೊರಿಡಾ ಕರಾವಳಿಗೆ ಅಪ್ಪಳಿಸಿ ವಿನಾಶ ಸೃಷ್ಟಿ ಮಾಡುವ ಆತಂಕ ಕಾಡುತ್ತಿದೆ. ಮೆಕ್ಸಿಕೋ ಕೊಲ್ಲಿ ಕಡೆಯಿಂದ ಇದೀಗ ಈ ಭೀಕರ ಚಂಡಮಾರುತ ಅಮೆರಿಕದ ಫ್ಲೊರಿಡಾಗೆ ಓಡೋಡಿ ಬಂದು ಅಪ್ಪಳಿಸಲಿದೆ. ಹೀಗಾಗಿ ಹತ್ತಾರು ಲಕ್ಷ ಜನರು ಇದೀಗ ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗಿದ್ದಾರೆ.












Click it and Unblock the Notifications