ಕೆನಡಾ ಸೇನೆ ವೆಬ್‌ಸೈಟ್ ಹ್ಯಾಕ್ ಮಾಡಿದ ಭಾರತದ ಹ್ಯಾಕರ್ಸ್?

ಕೆನಡಾ ಪ್ರಧಾನಿ ಟ್ರುಡೋ ಯಾವಾಗ ಭಾರತದ ವಿರುದ್ಧ ತಲೆಬುಡ ಇಲ್ಲದಂತೆ ಆರೋಪ ಹೊರಿಸಿದ್ದರೋ, ಆ ಕ್ಷಣದಿಂದಲೇ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹಾಳಾಗಿ ಹೋಗಿದೆ. ಪರಿಸ್ಥಿತಿ ಹೀಗಿದ್ದಾಗ ಭಾರತ ಮೂಲದ ಹ್ಯಾಕರ್ಸ್ ಗುಂಪು ಕೆನಡಾ ಸೇನೆ ವೆಬ್ ಸೈಟ್ ಹ್ಯಾಕ್ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಹಾಗಾದ್ರೆ ನಿಜಕ್ಕೂ ಆಗಿರುವುದು ಏನು?

ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್‌ನ ಈ ವರ್ಷದ ಜೂನ್ 18ರಂದು ಕೆನಡಾದ ಸರ್ರೆಯಲ್ಲಿ ಗುಂಡಿಟ್ಟು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಆದರೆ ಈ ಕೊಲೆಯನ್ನ ಭಾರತದ ಮೂಲದ ಏಜೆಂಟ್‌ಗಳೇ ಮಾಡಿದ್ದಾರೆ ಎಂಬ ಆರೋಪವನ್ನು ಜಸ್ಟಿನ್ ಟ್ರುಡೋ ಮಾಡಿದ್ದರು. ಇದು ಭಾರತ ಸರ್ಕಾರವನ್ನು ಕೂಡ ಕೋಪಗೊಳ್ಳುವಂತೆ ಮಾಡಿತ್ತು. ಸೂಕ್ತ ಸಾಕ್ಷ್ಯ ಇಲ್ಲದೆ ಇಂಥ ಆರೋಪ ಸರಿಯಲ್ಲ ಎಂದು ಭಾರತ ಕೂಡ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿತ್ತು. ಇದಿಷ್ಟು ಗೊಂದಲದ ನಡುವೆ ಮತ್ತೊಂದು ಎಡವಟ್ಟು ನಡೆದು ಹೋಗಿದೆ.

canada-army-website-got-hacked

ಕೆನಡಾ ವೆಬ್ ಹ್ಯಾಕ್ ಮಾಡಿದ್ದು ಯಾರು?

ಅಂದಹಾಗೆ ಕೆನಡಾ ಸಶಸ್ತ್ರ ಪಡೆಯ ವೆಬ್‌ಸೈಟ್ ದಿಢೀರ್ ಹ್ಯಾಕ್ ಆಗಿದೆ. ಆದರೆ ಹ್ಯಾಕ್ ಮಾಡಿರುವುದು ಭಾರತ ಮೂಲದ ಹ್ಯಾಕರ್ಸ್ ಗುಂಪು ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಟೆಲಿಗ್ರಾಫ್ ವರದಿ ಮಾಡಿದ್ದು, ದಿಢೀರ್ ವೆಬ್ ಹ್ಯಾಕ್ ಆಗಿರುವುದನ್ನು ನೋಡಿರುವ ಕೆನಡಾ ಸೇನೆ ಅಧಿಕಾರಿಗಳು ಕಂಗಾಲಾಗಿ ಹೋಗಿದ್ದಾರೆ. ಹಾಗೇ ಸೆಪ್ಟೆಂಬರ್ 21 ರಂದು ಈ ಬಗ್ಗೆ ಹ್ಯಾಕರ್ಸ್ ಗುಂಪು ಕೆನಡಾಗೆ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ. ಇದೀಗ ಕೆನಡಾ ಸೇನೆ ವೆಬ್ ಸೈಟ್ ಹ್ಯಾಕ್ ಆಗಿರುವುದು ಎರಡೂ ದೇಶಗಳ ನಡುವಿನ ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟಾಗಿಸಿದೆ.

ಭಾರತ ಮೂಲದ ಹ್ಯಾಕರ್ಸ್ ಮಾಡಿದ್ರಾ?

ಕೆನಡಾ ಸೇನೆಯ ವೆಬ್‌ಸೈಟ್ ಹ್ಯಾಕ್ ಆಗಿರುವುದರ ಹಿಂದೆ ಭಾರತ ಮೂಲದ ಹ್ಯಾಕರ್ಸ್ ಕೈವಾಡ ಇದೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಹೀಗಾಗಿ ಕೆನಡಾ ಸೇನಾಧಿಕಾರಿಗಳು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ನೌಕಾಪಡೆ, ವಿಶೇಷ ಕಮಾಂಡ್ ಗ್ರೂಪ್‌, ವಾಯುಪಡೆ ಈ ಬಗ್ಗೆ ತನಿಖೆ ಆರಂಭಿಸಿದೆ ಎನ್ನಲಾಗಿದೆ. ಹೀಗಾಗಿ ತನಿಖೆಯ ಬಳಿಕ ಎಲ್ಲದಕ್ಕೂ ಉತ್ತರ ಸಿಗಲಿದೆ. ಅದನ್ನು ಬಿಟ್ಟು ಕೆನಡಾ ಮತ್ತೊಮ್ಮೆ ಬಾಯಿಗೆ ಬಂದಂತೆ ಹೇಳಿಕೆ ಕೊಟ್ಟಿದ್ದೇ ಆದರೆ, ಈಗ ಸ್ವಲ್ಪ ಹಳಸಿರುವ ಕೆನಡಾ ಹಾಗೂ ಭಾರತದ ಸಂಬಂಧ ಪೂರ್ತಿ ಹಳಾಗಿ ಹೋಗುವುದು ಪಕ್ಕಾ. ಹೀಗಾಗಿ ಸೂಕ್ತ ತನಿಖೆಗೆ ಮುಂದಾಗಿದೆ ಕೆನಡಾ ಸರ್ಕಾರ.

ಒಟ್ನಲ್ಲಿ ಜಗತ್ತಿನ ಬಲಿಷ್ಠ ಸೇನೆ ಎಂದು ಕರೆಸಿಕೊಳ್ಳುವ ಕೆನಡಾಗೆ ಇಂಥ ಆಘಾತ ಸಿಕ್ಕಿದೆ. ಅದರಲ್ಲೂ ನ್ಯಾಟೋ ಒಕ್ಕೂಟದಲ್ಲಿ ಇರುವ ಕೆನಡಾಗೆ ಇಂತಹ ಶಾಕ್ ಸಿಕ್ಕಿರುವುದು ಈಗ ದೊಡ್ಡ ಪ್ರಶ್ನೆ ಹುಟ್ಟುಹಾಕಿದೆ. ಆದರೆ ಈ ಕೃತ್ಯದ ಹಿಂದೆ ಯಾರ ಕೈವಾಡ ಇದೆ? ಎಂಬ ಬಗ್ಗೆ ಸೂಕ್ತ ತನಿಖೆ ನಡೆಯಬೇಕಿದೆ. ಕೆನಡಾ ಅಧಿಕಾರಿಗಳು ವಿಶೇಷ ಸಭೆ ನಡೆಸಿ, ಘಟನೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ತಾತ್ಕಾಲಿಕವಾಗಿ ಹ್ಯಾಕ್ ಆಗಿದ್ದ ವೆಬ್ ಸಾಕಷ್ಟು ಆತಂಕ ಹುಟ್ಟುಹಾಕಿತ್ತು. ಕೆನಡಾ ಮಾತ್ರವಲ್ಲ ಅಮೆರಿಕ ಕೂಡ ಇದೇ ರೀತಿ ಹ್ಯಾಕರ್ಸ್ ಕಾಟಕ್ಕೆ ನಲುಗಿ ಹೋಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+