• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ ಧ್ವಂಸಗೊಳಿಸಿದ ಕಿಡಿಗೇಡಿಗಳು

|

ಕರಾಕ್,ಡಿಸೆಂಬರ್ 31: ಪಾಕಿಸ್ತಾನದಲ್ಲಿ ಸ್ಥಳೀಯ ಮುಸ್ಲಿಂ ಧರ್ಮಗುರುಗಳ ನೇತೃತ್ವದಲ್ಲಿ ಹಿಂದೂ ದೇವಾಲಯವನ್ನು ಧ್ವಂಸ ಮಾಡಿರುವ ಘಟನೆ ನಡೆದಿದೆ.

ನೂರಕ್ಕೂ ಹೆಚ್ಚು ಜನರ ಗುಂಪು ಖೈಬರ್ ಪಖ್ತುಂಖಾವಾ ಪ್ರಾಂತ್ಯದ ಕರಕ್ ಜಿಲ್ಲೆಯ ಹಿಂದೂ ದೇವಾಲಯವೊಂದನ್ನು ನಾಶಪಡಿಸಿ ಬೆಂಕಿ ಹಚ್ಚಿದೆ.

ಇದು ಹೊಸ ಪಾಕಿಸ್ತಾನ, ಸರ್ಕಾರದ ಆಡಳಿತದಲ್ಲಿರುವ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಕಾರಕ್ ಎಂಬ ನಗರದಲ್ಲಿ ಹಿಂದೂ ದೇವಾಲಯವೊಂದು ನಾಶವಾಗಿದೆ. ಪೊಲೀಸರು ಅಥವಾ ಸ್ಥಳೀಯ ಪಡೆಗಳು ಜನಸಮೂಹವನ್ನು ತಡೆಯಲಿಲ್ಲ ಏಕೆಂದರೆ, ಅವರು ಅಲ್ಲಾಹ್-ಒ-ಅಕ್ಬರ್ ಎಂದು ಜಪಿಸುತ್ತಿದ್ದರು. ಇದೊಂದು ನಾಚಿಕೆಗೇಡಿನ ದಿನ, ಖಂಡನೆಗೂ ಮೀರಿದ್ದೂ ಎಂದು ಲಂಡನ್ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತ ಟ್ವೀಟ್ ಮಾಡಿದ್ದಾರೆ.

ಕರಕ್ ಜಿಲ್ಲೆಯ ಹಿಂದೂ ದೇವಾಲಯವನ್ನು ಸ್ಥಳೀಯ ಮುಸ್ಲಿಂ ಧರ್ಮಗುರುಗಳ ನೇತೃತ್ವದಲ್ಲಿ ಗಲಭೆಕೋರರು ನಾಶಪಡಿಸಿದ್ದಾರೆ, ದೇವಾಲಯವನ್ನು ವಿಸ್ತರಿಸಲು ಹಿಂದೂಗಳು ಸ್ಥಳೀಯ ಆಡಳಿತದಿಂದ ಅನುಮತಿ ಪಡೆದಿದ್ದರು.

ದೇವಾಲಯ ಧ್ವಂಸಗೊಳಿಸಿ ಬೆಂಕಿ ಹಚ್ಚಿರುವ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಈ ಗಲಭೆಕೋರರ ಗುಂಪು ದೇವಾಲಯದ ಗೋಡೆಗಳು ಮತ್ತು ಮೇಲ್ಛಾವಣಿಯನ್ನು ನಾಶಪಡಿಸಿದೆ, ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಸಮುದಾಯದ ವಿರುದ್ಧದ ಕೃತ್ಯವನ್ನು ಪ್ರಪಂಚದ ಇತರ ಭಾಗಗಳಲ್ಲಿ ನೆಲೆಸಿರುವ ಮಾನವ ಹಕ್ಕುಗಳ ಕಾರ್ಯಕರ್ತರು ವ್ಯಾಪಕವಾಗಿ ಖಂಡಿಸಿದ್ದಾರೆ.

ಆದರೆ ಸ್ಥಳೀಯ ಧರ್ಮಗುರುಗಳು ದೇವಾಲಯವನ್ನು ನಾಶಮಾಡಲು ಜನರ ಗುಂಪು ಕಟ್ಟಿಕೊಂಡು ನಾಶ ಪಡಿಸಿದ್ದಾರೆ, ಪೊಲೀಸರು ಮತ್ತು ಸ್ಥಳೀಯ ಆಡಳಿತ ಈ ಸಂಬಂಧ ಮೌನವಾಗಿದೆ ಎಂದು ಕರಾಚಿಯ ಪತ್ರಕರ್ತರೊಬ್ಬರು ಟ್ವೀಟ್ ಮಾಡಿದ್ದಾರೆ.

English summary
A Mob of over hundred people led by local muslim clerics reportedly destroyed and set on fire a Hindu temple in Karak district of Khyber Pakhtunkhwa province.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X