ಸುರಕ್ಷತಾ ವಂಚನೆ: ಹಿಂಡನ್ ಬರ್ಗ್, ನಾಟೆ ಆ್ಯಂಡರ್ಸನ್ ವಿರುದ್ಧ ತನಿಖೆ
ಅಮೆರಿಕ ಮೂಲದ ಸಂಸ್ಥೆ ಹಿಂಡನ್ ಬರ್ಗ್ ಮತ್ತು ಅದರ ಸಂಸ್ಥಾಪಕ ನಾಟೆ ಆ್ಯಂಡರ್ಸನ್ ತನಿಖೆಯನ್ನು ಎದುರಿಸಬೇಕಾಗಿದೆ. ಸುರಕ್ಷತಾ ವಂಚನೆ, ದೋಷ ಪೂರಿತವಾದ ಮಾಹಿತಿಗಳ ಬಹಿರಂಗ ಆರೋಪದಲ್ಲಿ ಸಾಕ್ಷ್ಯಗಳು ಸಿಗುತ್ತಿದ್ದು, ಕೆನಡಾದ ಒಂಟಾರಿಯೊದ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಅಲ್ಲದೇ ಹಿಂಡನ್ ಬರ್ಗ್ ರಹಸ್ಯ ಒಪ್ಪಂದಗಳು, ಸಂಭಾವ್ಯ ಭದ್ರತೆ, ದೋಷಪೂರಿತ ಮಾಹಿತಿ ಹಂಚಿಕೆ ಆರೋಪದ ಕುರಿತು ಸಂಸ್ಥೆ, ಸಂಸ್ಥಾಪಕರ ವಿರುದ್ಧ ಆರೋಪ ಮಾಡಲಾಗಿದೆ ಎಂದು ವರದಿಗಳು ಹೇಳಿವೆ.
ಕೆನಡಾದ ಮಾರ್ಕೆಟ್ ಫ್ರಾಡ್ಸ್ ಎಂಬ ತನಿಖಾ ಸುದ್ದಿ ಸಂಸ್ಥೆ ಈ ಕುರಿತು ವರದಿಯಲ್ಲಿ ಹೇಳಿದೆ, "ನಾಟೆ ಆ್ಯಂಡರ್ಸನ್ ಮತ್ತು ಆನ್ಸನ್ ಫಂಡ್ಸ್ ಎರಡರ ವಿರುದ್ಧವೂ ಹಲವಾರು ವಂಚನೆ ಆರೋಪಗಳಿವೆ. ನಾವು ವರದಿಯನ್ನು ಬರೆಯುವ ಹೊತ್ತಿಗೆ ಕೇವಲ ಶೇ 5ರಷ್ಟನ್ನು ಮಾತ್ರ ಪರಿಶೀಲಿಸಲಾಗಿದೆ" ಎಂದು ಹೇಳಿದೆ.

"ಹಿಂಡನ್ ಬರ್ಗ್ ಮತ್ತು ಆನ್ಸನ್ ನಡುವಿನ ಸಂಪೂರ್ಣ ವಿನಿಮಯದ ಮಾಹಿತಿ ಎಸ್‌ಇಸಿಗೆ ತಲುಪಿದಾಗ, ನಾಟೆ ಆ್ಯಂಡರ್ಸನ್ 2025ರ ಭದ್ರತಾ ವಂಚನೆಯ ಆರೋಪಕ್ಕೆ ಒಳಗಾಗುವುದು ಖಚಿತವಾಗಿದೆ" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರವಹಿಸಿಕೊಳ್ಳುವ ಮೂರು ದಿನಗಳ ಮೊದಲು ಹಿಂಡನ್ ಬರ್ಗ್ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸುವುದಾಗಿ ಘೋಷಣೆ ಮಾಡಿದ್ದು, ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿತ್ತು.
2024ರ ನವೆಂಬರ್‌ನಲ್ಲಿ ಬ್ಲೂಂಬರ್ಗ್‌ನ ಕ್ರಾಕ್ ರಿಸರ್ಚ್ ತಂಡ ಒಂದು ವಿಸ್ತೃತ ವರದಿಯನ್ನು ಪ್ರಕಟಿಸಿತ್ತು. ಇದರಲ್ಲಿ ಹಿಂಡನ್ ಬರ್ಗ್ ಸೇರಿದಂತೆ ಶಾರ್ಟ್ ಸೆಲ್ಲರ್ ಮತ್ತು ಸಂಶೋಧನಾ ಸಂಸ್ಥೆಗಳನ್ನು ಹೆಸರಿಸಲಾಗಿತ್ತು. ಈ ವರದಿಯು "ಶಾರ್ಟ್ ಸೆಲ್ಲರ್‌ಗಳ ಗುಪ್ತ ಮಾತುಕತೆಗಳು ಮತ್ತು ಒಪ್ಪಂದಗಳು ನ್ಯಾಯಾಲಯದ ಹೋರಾಟದಲ್ಲಿ ಹೊರ ಹೊಮ್ಮಲಿವೆ" ಎಂಬ ಶೀರ್ಷಿಕೆಯನ್ನು ಒಳಗೊಂಡಿತ್ತು. ಈ ವರದಿ ಹಿಂಡನ್ ಬರ್ಗ್ ಮತ್ತು ಆನ್ಸನ್ ಫಂಡ್ಸ್ ಅನ್ನು ಕೇಂದ್ರಿಕರಿಸಿತ್ತು.
ಕೆನಡಾ ಮೂಲದ ಮೋಯೆಜ್ ಕಸ್ಸಾಮ್ ಎಂಬ ಭಾರತೀಯ ಮೂಲದವರಿಂದ ನಿರ್ವಹಿಸಲ್ಪಡುವ ಅನ್ಸನ್ ಫಂಡ್ಸ್ ಈ ಸಂಬಂಧಗಳನ್ನು ತಳ್ಳಿಹಾಕಿತ್ತು. ಪ್ರತಿ ವರ್ಷ ವಿವಿಧ ಮೂಲಗಳಿಂದ ಹಲವಾರು ಅಂಶಗಳು ತಮಗೆ ಲಭ್ಯವಾಗುತ್ತದೆ ಎಂದು ಬ್ಲೂಂಬರ್ಗ್‌ಗೆ ಹಿಂಡನ್ ಬರ್ಗ್ ಹೇಳಿತ್ತು. "ನಾವು ಪ್ರತಿ ಮೂಲಗಳಿಂದ ಬರುವ ಮಾಹಿತಿಯನ್ನು ಕಟ್ಟುನಿಟ್ಟಾಗಿ ಪೂರ್ಣ ಸಂಪಾದಕೀಯ ಸ್ವತಂತ್ರ್ಯದಲ್ಲಿ ನಿರ್ವಹಿಸುತ್ತೇವೆ" ಎಂದು ತಿಳಿಸಿತ್ತು.
ಈ ವರದಿ ಬಳಿಕ ಆ್ಯಂಡರ್ಸನ್ ಸಹ ಬಹಿರಂಗವಾಗಿ ಆನ್ಸನ್ ಫಂಡ್ಸ್ ಸೇರಿದಂತೆ ಇತರ ಯಾವುದೇ ಸಂಸ್ಥೆಗಳ ಜೊತೆ ಪಾಲುದಾರಿಕೆ ಹೊಂದಿಲ್ಲ ಎಂದು ಆರೋಪ ಅಲ್ಲಗಳೆದಿತ್ತು. ಆದರೆ ಸೋರಿಕೆಯಾದ ಇ-ಮೇಲ್‌ಗಳು ಬೇರೆಯದ ಆದ ಮಾಹಿತಿ ನೀಡಿದವು. ಡಜನ್‌ಗಟ್ಟಲೇ ಇ-ಮೇಲ್‌ಗಳು 2019ರಲ್ಲಿಯೇ ಆನ್ಸನ್ ಫಂಡ್ಸ್‌ನ ಸಂಜೀವ್ ಪುರಿ ಮತ್ತು ಹಿಂಡನ್ ಬರ್ಗ್ ನಡುವಿನ ಸಂಬಂಧದ ಕುರಿತು ಹೇಳುತ್ತಿವೆ. ಆನ್ಸನ್ ಫಂಡ್ಸ್ ಸಂಪಾದಕೀಯತ್ವದ ನಿಯಂತ್ರಣವಿದಲ್ಲೇ ಹಿಂಡನ್ ಬರ್ಗ್ ಜೊತೆ ಇದೆ ಎಂಬುವಂತೆ ಗುರುತಿಸಲಾಯಿತು. ಆದರೆ ಇವೆರಡರ ನಡುವೆ ಹಣಕಾಸಿನ ಒಪ್ಪಂದವಿದೆಯೇ? ಎಂಬ ಬಗ್ಗೆ ಅಂತಿಮ ಚಿತ್ರಣ ಸಿಕ್ಕಿಲ್ಲ.
ಮೂಲಗಳ ಮಾಹಿತಿ ಪ್ರಕಾರ ಅದಾನಿ ಗ್ರೂಪ್ ಕಳೆದ ವರ್ಷ ಶಾರ್ಟ್ ಸೆಲ್ಲರ್ ಕಂಪನಿ ವಿರುದ್ಧ ತನಿಖೆಯನ್ನು ವಿದೇಶಿ ಗುಪ್ತಚರ ಸಂಸ್ಥೆಗಳ ಜೊತೆ ಸೇರಿ ಪ್ರಾರಂಭಿಸಿತು. ಗ್ರೂಪ್ ವಿರುದ್ಧ ಕಂಪನಿ ಕೆಲಸ ಮಾಡುತ್ತಿತ್ತು, ಅದಾನಿ ಗ್ರೂಪ್ ವಿರುದ್ಧ 2023ರ ಜನವರಿಯಲ್ಲಿ ಮೊದಲ ವರದಿಯನ್ನು ಹಿಂಡನ್ ಬರ್ಗ್ ಬಿಡುಗಡೆ ಮಾಡಿತು, ಸುಮಾರು $150 ಬಿಲಿಯನ್ ನಷ್ಟ ಉಂಟಾಯಿತು.
ಅದಾನಿ ಗ್ರೂಪ್ ವಿರುದ್ಧದ ದಾಳಿಯಲ್ಲಿ ಅನ್ಸನ್ ಫಂಡ್ಸ್ ಪಾತ್ರ ಇರುವ ಕುರಿತು ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ, ಆದರೆ ಕೆಲವು ವರದಿಗಳ ಪ್ರಕಾರ ಇದೊಂದು ಸಂಘಟಿತ ಅಪರಾಧ. ಅನ್ಸನ್‌ನ ಸಂಸ್ಥಾಪಕರ ಪತ್ನಿ ಮರಿಸ್ಸಾ ಸಿಗಲ್ ಕಸ್ಸಾಮ್ ಮತ್ತು ಮಹುವಾ ಮೈತ್ರಾ ಜೆಪಿ ಮೋರ್ಗಾನ್‌ನಲ್ಲಿ ಸಹೋದ್ಯೋಗಿಗಳಾಗಿದ್ದರು, ಮೈತ್ರಾ ಸುಮಾರು 12 ವರ್ಷ ಕೆಲಸ ಮಾಡಿದ್ದರು. ಅದಾನಿ ಗ್ರೂಪ್ ವಿಚಾರದಲ್ಲಿ ಲೋಕಸಭೆಯಲ್ಲಿ ಆರೋಪ ಮಾಡಿದವರಲ್ಲಿ ಮಹುವಾ ಮೈತ್ರಾ ಸಹ ಪ್ರಮುಖರು.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications