Hindenburg: ಅದಾನಿಗೆ ಶಾಕ್ ನೀಡಿದ ಹಿಂಡೆನ್‌ಬರ್ಗ್‌ನಿಂದ ಮತ್ತೊಂದು ವರದಿ?, US ಬ್ಯಾಂಕ್‌ದಾಗಿದ್ದರೆ ಭಾರಿ ಕುತೂಹಲ
ಬೆಂಗಳೂರು, ಆಗಸ್ಟ್ 12:: ಫೆಬ್ರವರಿ ಮೊದಲ ವಾರ ವಿಶ್ವದ ಶ್ರೀಮಂತರ ಪೈಕಿ ಒಬ್ಬರಾಗಿರುವ ಗೌತಮ್ ಅದಾನಿ ಅವರಿಗೆ ವರದಿಯೊಂದನ್ನು ಪ್ರಕಟಿಸಿ ಶಾಕ್ ನೀಡಿದ್ದ 'ಹಿಂಡೆನ್‌ಬರ್ಗ್' ಸಂಸ್ಥೆ ಆದಷ್ಟು ಶೀಘ್ರವೇ ಇನ್ನೊಂದು ವರದಿ ಪ್ರಕಟಿಸುವುದಾಗಿ ತಿಳಿಸಿ ಕುತೂಹಲ ಹುಟ್ಟು ಹಾಕಿದೆ.
New report soon—another big one.
— Hindenburg Research (@HindenburgRes) March 22, 2023
ಫೆಬ್ರವರಿ 1ರಂದು ಹಿಂಡೆನ್‌ಬರ್ಗ್ ವರದಿ ಬಿಡಗಡೆ ಮಾಡಿತ್ತು. ಅದರಲ್ಲಿ ಶ್ರೀಮಂತ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಗೌತಮ್ ಅದಾನಿಯ ಆಸ್ತಿ ಕುಸಿಯಲು ಕಾರಣವಾಯಿತು. ವರದಿಯ ಬಿಡುಗಡೆಯ ನಂತರ ಷೇರು ಮಾರುಕಟ್ಟೆ ಕುಸಿತದ ಪರಿಣಾಮ ಗೌತಮ್ ಅದಾನಿ ಅವರ ಸಂಪತ್ತು ಸೆಪ್ಟೆಂಬರ್ 2022 ರಲ್ಲಿ $150 ಶತಕೋಟಿಯ ಗರಿಷ್ಠ ಮಟ್ಟದಿಂದ $53 ಶತಕೋಟಿಗೆ ಇಳಿಕೆ ಆಯಿತು.

ಫೋರ್ಬ್ಸ್‌ನ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿಯವರನ್ನು ಟಾಪ್ 35ರ ಪಟ್ಟಿ ಇಳಿಸಿತು. ಇದಾದ ಬಳಿಕ ಅವರ ಸಂಘಟಿತ ಸಂಸ್ಥೆಯು $120 ಬಿಲಿಯನ್ ನಷ್ಟು ನಷ್ಟ ಅನುಭವಿಸಬೇಕಾಯಿತು. ಅದಾನಿಯವರನ್ನು ಸಾಲದ ಚಿಂತೆಗೀಡು ಮಾಡಿತು.
ಇದೀಗ ಮತ್ತೆ ಅಂತದ್ದೆ ಮತ್ತೊಂದು ಅಧ್ಯಯನದ ವರದಿಯೊಂದನ್ನು ಪ್ರಕಟಿಸುವುದಾಗಿ ಹೇಳಿಕೊಂಡಿದೆ. ಈ ಸಂಬಂಧ ಗುರುವಾರ ಹಿಂಡೆನ್‌ಬರ್ಗ್ ಟ್ವಿಟ್ ಮಾಡಿದೆ. ಅದರಲ್ಲಿ 'ಆದಷ್ಟು ಶೀಘ್ರವೇ ಇನ್ನೊಂದು ಹೊಸ ವರದಿ-ದೊಡ್ಡ ವರದಿ' ನೀಡುವುದಾಗಿ ತಿಳಿಸಿದೆ.
ನಿಮ್ಮ ವರದಿ 'ಆಶಾದಾಯಕ' ಎಂದ ಭಾರತೀಯ
ಅವರ ಈ ಟ್ವಿಟ್‌ಗೆ ಕೆಲವರು ಪ್ರತಿಕ್ರಿಯಿಸಿದ್ದು, ಅದರಲ್ಲಿ ಭಾರತೀಯರೊಬ್ಬರು, ನಿಮ್ಮ ವರದಿ "ಆಶಾದಾಯಕವಾಗಿ"ದೆ. ಇದು ಮತ್ತೊಂದು ಭಾರತೀಯ ಕಂಪನಿಯ ಬಗ್ಗೆ ಅಲ್ಲ ಎಂದುಕೊಂಡಿದ್ದೇನು ಎಂದು ತಿಳಿಸಿದ್ದಾರೆ. ಮತ್ತೊಬ್ಬರು ಈ ಬಾರಿ ಚೀನಾದ ಕಂಪನಿಯೊಂದರ ಕುರಿತು ವರದಿ/ಅಧ್ಯಯನ ಕೈಗೊಳ್ಳಲು ಹಿಂಡೆನ್‌ಬರ್ಗ್ ಅವರನ್ನು ಕೋರಿದ್ದಾರೆ.

ಗುಜರಾತ್ ಉದ್ಯಮಿ ಮತ್ತು ಅವರ ಸಂಘಟಿತ ಸಂಸ್ಥೆಯನ್ನು ಗುರಿಯಾಗಿಸಿದ ನಂತರ, ಹಿಂಡೆನ್‌ಬರ್ಗ್ ರಿಸರ್ಚ್ 'ಮತ್ತೊಂದು ದೊಡ್ಡ' ಬಹಿರಂಗಪಡಿಸುವುದಾಗಿ ತಿಳಿಸಿದೆ. ಅಮೇರಿಕನ್ ಶಾರ್ಟ್-ಸೆಲ್ಲರ್ ಟ್ವೀಟ್ ಹಿಂಡೆನ್‌ಬರ್ಗ್ ಟ್ವೀಟ್ ಅನ್ನು ಮರುಟ್ವೀಟ್ ಮಾಡಿ, ನಿಮ್ಮ ಈ ವರದಿ ಅಮೆರಿಕದ (US) ಬ್ಯಾಂಕ್ ಬಗ್ಗೆ ಆಗಿದ್ದರೆ ಅದು ಪ್ರಪಂಚದಾದ್ಯಂತ ಕುತೂಹಲ ಹುಟ್ಟುಹಾಕುತ್ತದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ವಿರುದ್ಧ ಖರ್ಗೆ ಕಿಡಿ
ಹಿಂಡೆನ್‌ಬರ್ಗ್ ವರದಿ ಪ್ರತಿ ಭಾರಿ ಸಾಕಷ್ಟು ಚರ್ಚೆ, ಕುತೂಹಲ ಸೃಷ್ಟಿಸುತ್ತದೆ. ಆದರೆ ಪ್ರತಿಪಕ್ಷ ಕಾಂಗ್ರೆಸ್ ಮಾತ್ರ ತನ್ನ ಗಮನವನ್ನು ಅದಾನಿ ಗ್ರೂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಡುವಿನ ಆಪಾದಿತ ಸಂಬಂಧದತ್ತ ಬದಲಾಯಿಸಿದೆ. ಫೆಬ್ರವರಿಯಲ್ಲಿ ಶಾಸಕಾಂಗ ಸಭೆಯಲ್ಲಿ ಹಿಂಡನ್‌ಬರ್ಗ್-ಅದಾನಿ ವಿವಾದದ ಕುರಿತು ಪ್ರಶ್ನೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿರಾಕರಿಸಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು.
ಅಲ್ಲದೇ 2.5 ವರ್ಷಗಳಲ್ಲಿ ಒಬ್ಬರ ಸಂಪತ್ತು ಶೇಕಡಾ 13ಪಟ್ಟು ಹೆಚ್ಚಾಗಿದೆ. 2014ರಲ್ಲಿ ₹50,000 ಕೋಟಿಯಷ್ಟಿತ್ತು, ಅದು 2019ರ ವೇಳೆಗೆ ₹1 ಲಕ್ಷ ಕೋಟಿಗೆ ಏರಿಕೆ ಆಯಿತು. ಏನೆಲ್ಲಾ ಮ್ಯಾಜಿಕ್ ನಡೆದಿದೆ ಎಂದರೆ ಎರಡು ವರ್ಷಗಳಲ್ಲಿ ಏಕಾಏಕಿ ₹12 ಲಕ್ಷ ಕೋಟಿಗೆ ಏರಿಕೆ ಆಗಿದೆ ಎಂದು ಅವರು ಆರೋಪಿಸಿದ್ದರು.
2020ರ ಸೆಪ್ಟೆಂಬರ್ ತಿಂಗಳಲ್ಲಿ ಎಲೆಕ್ಟ್ರಿಕ್ ಟ್ರಕ್‌ಗಳ ತಯಾರಕರಾದ ನಿಕೋಲಾ ಕಾರ್ಪ್ ವಿರುದ್ಧ ಹಿಂಡೆನ್‌ಬರ್ಗ್ ಗಮನಾರ್ಹ ಗೆಲುವು ಸಾಧಿಸಿತ್ತು. ಸಾರ್ವಜನಿಕ ವ್ಯಾಪಾರಿ ಸಂಸ್ಥೆ ನಿಕೋಲಾವು ಜೂನ್ 2020 ರಲ್ಲಿ ಮಾರುಕಟ್ಟೆಗೆ ಪಾದಾರ್ಪಣೆ ಮಾಡಿತು. ಕೆಲವು ದಿನಗಳ ನಂತರ ಇದು 34 ಶತಕೋಟಿ ಡಾಲರ್‌ಗೆ ತಲುಪಿ, ಮೌಲ್ಯಮಾಪನದ ವಿಷಯದಲ್ಲಿ ಫೋರ್ಡ್ ಮೋಟರ್ ಅನ್ನು ಮೀರಿ ಬೆಳೆಯಿತು. ಜನವರಿ 2023ರಲ್ಲಿ ಆ ಕಂಪನಿಯ ಮೌಲ್ಯವು $ 1.34 ಶತಕೋಟಿಗೆ ಕುಸಿಯಿತು. ಹಿಂಡೆನ್‌ಬರ್ಗ್ ಪ್ರಕಾರ ಮಾಜಿ ಉದ್ಯೋಗಿಗಳು ತನ್ನ ಸಂಶೋಧನೆಗೆ ಸಹಾಯ ಮಾಡಿದರು ಎಂದು ಹೇಳಿಕೊಂಡಿತ್ತು ಎಂದು ಹಿಂಡೆನ್‌ಬರ್ಗ್ ಕಂಪನಿಯೊಂದರ ವರದಿ ಕುರಿತು ಇಲ್ಲಿ ಪ್ರಸ್ತಾಪಿಸಲಾಗಿದೆ.
{document1}












Click it and Unblock the Notifications