Mecca Rain: ಸೌದಿ ಅರೇಬಿಯಾದಲ್ಲಿ ಭಾರಿ ಮಳೆ; ಮೆಕ್ಕಾ ಮತ್ತು ಮದೀನಾದಲ್ಲಿ ಪ್ರವಾಹ ಪರಿಸ್ಥಿತಿ

ಮರುಭೂಮಿ ಎಂದೇ ಹೆಸರಾಗಿರುವ ಸೌದಿ ಅರೇಬಿಯಾದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಭಾರಿ ಮಳೆಯಾಗುತ್ತಿದೆ. ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿರುವ ಪ್ರಕಾರ, ಜೆಡ್ಡಾ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಸೇರಿ, ಮೆಕ್ಕಾ ಮತ್ತು ಮದೀನಾದಲ್ಲಿ ಗುಡುಗ ಸಹಿತ ಆಲಿಕಲ್ಲು ಮಳೆಯಾಗಿದೆ ಎಂದು ಮಾಹಿತಿ ನೀಡಿದೆ.

ಸೌದಿ ಅರೇಬಿಯಾದ ಪರಿಸರ, ನೀರು ಮತ್ತು ಕೃಷಿ ಸಚಿವಾಲಯದ ಪ್ರಕಾರ, ಅಲ್ ಶಫಿಯಾದಲ್ಲಿ 49.2 ಮಿ.ಮೀ ಮಳೆಯಾಗಿದ್ದು ಅತ್ಯಧಿಕ ಮಳೆ ದಾಖಲಾಗಿದೆ. ಜೆಡ್ಡಾದ ಅಲ್-ಬಸತೀನ್‌ನಲ್ಲಿ 38 ಮಿ.ಮೀ ಮಳೆಯಾಗಿದೆ. ಮದೀನಾದಲ್ಲಿರುವ ಪ್ರವಾದಿ ಮಸೀದಿ ಇರುವ ಸೆಂಟ್ರಲ್ ಹರಮ್ ಪ್ರದೇಶದಲ್ಲಿ 36.1 ಮಿಮೀ ಮಳೆಯಾಗಿದ್ದು, ಕುಬಾ ಮಸೀದಿ ಬಳಿ 28.4 ಮಿ.ಮೀ ಮಳೆಯಾಗಿದೆ.

Heavy rainfall sweeps mecca and madina

ಮೆಕ್ಕಾ, ಮದೀನಾ, ಖಾಸಿಮ್, ತಬೂಕ್, ಅಲ್‌-ಜೌಫ್ ಪ್ರದೇಶಗಳಲ್ಲಿ ಮಂಗಳವಾರ ಬೆಳಗಿನವರೆಗೆ ಮಳೆಯಾಗಲಿದೆ ಎಂದು ಸಚಿವಾಲಯ ಮುನ್ಸೂಚನೆಯಲ್ಲಿ ತಿಳಿಸಿದೆ. ರಾಷ್ಟ್ರೀಯ ಹವಾಮಾನ ಕೇಂದ್ರ (NCM) ಕೂಡ ವ್ಯಾಪಕ ಮಳೆಯಾಗಿರುವುದನ್ನು ದೃಢಪಡಿಸಿದೆ. ಪ್ರವಾಹ ಪರಿಸ್ಥಿತಿ ಉಂಟಾಗುವ ಕಾರಣ ಮುನ್ನೆಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡಿದೆ.

ವಿಮಾನ ಸೇವೆಗಳು ಕೂಡ ವ್ಯತ್ಯಯ

ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಸೇವೆಗಳಲ್ಲಿ ಕೂಡ ವ್ಯತ್ಯಯ ಉಂಟಾಗಿದ್ದು, ಜೆಡ್ಡಾದಲ್ಲಿರುವ ಕಿಂಗ್ ಅಬ್ದುಲಜೀಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ವಿಮಾನ ವೇಳಾಪಟ್ಟಿ ನವೀಕರಣದ ಬಗ್ಗೆ ತಿಳಿಯಲು ತಮ್ಮ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸುವಂತೆ ಸಲಹೆ ನೀಡಿದೆ.

ರಾಷ್ಟ್ರೀಯ ಹವಾಮಾನ ಕೇಂದ್ರದ ಮುಖ್ಯಸ್ಥ ಅಲ್‌-ಕಹ್ತಾನಿ ಸೌದಿ ಅರೇಬಿಯಾದಲ್ಲಿ ಮಳೆಯಾಗುತ್ತಿರುವುದನ್ನು ದೃಢಪಡಿಸಿದ್ದು, ಎಚ್ಚರಿಕೆಯಿಂದ ಇರುವಂತೆ ಒತ್ತಾಯಿಸಿದ್ದಾರೆ. ಜಜಾನ್ ನಗರ, ಫರಸನ್ ದ್ವೀಪಗಳು, ಅಲ್-ದರ್ಬ್ ಮತ್ತು ಬೀಶ್‌ನ ಗವರ್ನೆರೇಟ್‌ಗಳಲ್ಲಿ ಬಲದವಾದ ಬಿರುಗಾಳಿ ಬೀಸುತ್ತದೆ ಎಂದು ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ.

ಜೆಡ್ಡಾ ಸೇರಿದಂತೆ ಸೌದಿ ಅರೇಬಿಯಾದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು ರಸ್ತೆಗಳು ತುಂಬಿಹರಿಯುತ್ತಿರುವ ರಸ್ಯೆಗಳ ವಿಡಿಯೋಗಳು ಎಕ್ಸ್‌ನಂತಹ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಜೆಡ್ಡಾ ಮತ್ತು ಯಾನ್‌ಬು ನಡುವೆ ಇರುವ ರಾಬಿಗ್ ಕರಾವಳಿಯಲ್ಲಿ ಮಳೆಯ ಅಬ್ಬರದ ವಿಡಿಯೋಗಳು ವೈರಲ್ ಆಗಿದೆ.

ಜೆಡ್ಡಾದಲ್ಲಿ ಮಳೆಯ ಪರಿಸ್ಥಿತಿಯನ್ನು ನಿರ್ವಹಿಸಲು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 4,032 ಸಿಬ್ಬಂದಿ ಮತ್ತು 1,811 ಉಪಕರಣಗಳ ಜೊತೆಗೆ ಪರಿಸ್ಥಿತಿ ನಿಭಾಯಿಸಲು ಕೆಲಸ ಮಾಡುತ್ತಿವೆ. ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲು ಮತ್ತು ಜಲಾವೃತ ಪ್ರದೇಶಗಳು ಮತ್ತು ವಿದ್ಯುತ್ ಅಪಾಯ ತಪ್ಪಿಸಲು ತುರ್ತು ಸಂಖ್ಯೆಗೆ ಕರೆ ಮಾಡಲು ತಿಳಿಸಲು ಒತ್ತಾಯಿಸಿದೆ. ಜೆಡ್ಡಾದಲ್ಲಿ ಭಾರಿ ಮಳೆಯಾಗುತ್ತಿದ್ದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಮೆಕ್ಕಾದಲ್ಲಿ ಕಟ್ಟೆಚ್ಚರ

ಹವಾಮಾನ ಇಲಾಖೆ ಎಚ್ಚರಿಕೆ ನಿಡಿದ ಬಳಿಕ ಮೆಕ್ಕಾದಲ್ಲಿರುವ ಸೌದಿ ರೆಡ್ ಕ್ರೆಸೆಂಟ್ ಪ್ರಾಧಿಕಾರ 1420 ಸಿಬ್ಬಂದಿಗಳು 149 ವಾಹನಗಳು ಮತ್ತು ಏರ್ ಆಂಬುಲೆನ್ಸ್‌ಗಳನ್ನು ಸಜ್ಜಾಗಿಟ್ಟುಕೊಂಡಿದೆ. ವ್ಯಾಪಕ ಮಳೆಯಾಗುತ್ತಿರುವ ಕಾರಣ ಅಲ್-ಮುಹಮ್ಮದಿಯಾ ಪಾಸ್ ಅನ್ನು ಮುಚ್ಚಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+