Gaza War: ಗಾಜಾ ಯುದ್ಧಕ್ಕೆ ಬ್ರೇಕ್ ಹಾಕಲು ಡೊನಾಲ್ಡ್ ಟ್ರಂಪ್ ಎಂಟ್ರಿ?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಜಗತ್ತಿನಾದ್ಯಂತ ದೊಡ್ಡ ಸದ್ದು ಮಾಡುತ್ತಾ ಇದ್ದಾರೆ. ಇದಕ್ಕೆ ಕಾರಣ ಆಗಿರುವುದು ಡೊನಾಲ್ಡ್ ಟ್ರಂಪ್ ಅವರ ಅಂತಾರಾಷ್ಟ್ರೀಯ ನೀತಿ ಎನ್ನಬಹುದು. ಯಾಕಂದ್ರೆ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ದೊಡ್ಡ ದೊಡ್ಡ ಯುದ್ಧ & ಹಿಂಸಾಚಾರಕ್ಕೆ ಡೊನಾಲ್ಡ್ ಟ್ರಂಪ್ ಬ್ರೇಕ್ ಹಾಕುತ್ತಿದ್ದಾರೆ. ಈಗಾಗಲೇ ಭಾರತ & ಪಾಕ್ ನಡುವಿನ ಯುದ್ಧದಲ್ಲಿ ಕೂಡ ಡೊನಾಲ್ಡ್ ಟ್ರಂಪ್ ಎಂಟ್ರಿ ಹಾಕಿ ಬ್ರೇಕ್ ಹಾಕಿದ್ದು, ಉಕ್ರೇನ್ & ರಷ್ಯಾ ಯುದ್ಧ ಕೂಡ ನಿಲ್ಲಿಸಲು ಸಜ್ಜಾಗಿದ್ದಾರೆ. ಇದೇ ಸಮಯದಲ್ಲಿ ಗಾಜಾ ಪಟ್ಟಿ ವಿಚಾರ ಕೂಡ ಮುನ್ನೆಲೆಗೆ ಬಂದಿದೆ.

ಗಾಜಾ ಪಟ್ಟಿಯಲ್ಲಿ ಇಸ್ರೇಲ್ & ಹಮಾಸ್ ನಡುವೆ ಘೋರ ಯುದ್ಧ ನಡೆಯುತ್ತಿದೆ. ಹೀಗಾಗಿ ಈ ಬಡಿದಾಟಕ್ಕೆ ಹೇಗಾದರೂ ಬ್ರೇಕ್ ಹಾಕಬೇಕು ಎಂಬ ಪ್ರಯತ್ನ ಸಾಗಿದೆ. ಹೀಗಿದ್ದಾಗಲೇ ಡೊನಾಲ್ಡ್ ಟ್ರಂಪ್ ನೆರವು ಕೋರಿ ಹಮಾಸ್ ಇದೀಗ ಸಂಪರ್ಕ ಮಾಡಿದೆ. ಇಸ್ರೇಲ್ ದಾಳಿ ನಿಲ್ಲಿಸಲು & ಶಾಂತಿ ಕಾಪಾಡುವ ಜೊತೆಗೆ ಮಾನವೀಯ ನೆರವು ಗಾಜಾ ಜನರಿಗೆ ಸಿಗುವಂತೆ ಮಾಡುವುದು ಹಮಾಸ್ ಪ್ಲಾನ್. ಹೀಗಾಗಿ ಅಮೆರಿಕದ ನಾಯಕರ ಜೊತೆಗೆ ಹಮಾಸ್ ಇದೀಗ ಚರ್ಚೆ ನಡೆಸುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಈ ಮೂಲಕ ಡೊನಾಲ್ಡ್ ಟ್ರಂಪ್ ಯುದ್ಧಗಳನ್ನು ನಿಲ್ಲಿಸುವ ಹೀರೋ ಆಗುತ್ತಿದ್ದಾರೆ!

Hamas Engages with US for Gaza Ceasefire and Aid Entry

ಅಮೆರಿಕದ ಮಧ್ಯಸ್ಥಿತಿಕೆಗೆ ಎಲ್ಲಾ ಓಕೆ?

ಜಾಗತಿಕ ಮಟ್ಟದಲ್ಲಿ ದೊಡ್ಡಣ್ಣ ಅನ್ನೋ ಬಿರುದು ಪಡೆದಿರುವ ಅಮೆರಿಕ ಸದಾ ತನ್ನ ಶಕ್ತಿ ತೋರಿಸಲು ಕಾಯುತ್ತಾ ಕೂತಿರುತ್ತದೆ. ಅದರಲ್ಲೂ ಆಧುನಿಕ ಕಾಲದಲ್ಲಿ ಯುದ್ಧ ನಿಲ್ಲಿಸಿ, ಶಾಂತಿ ಸ್ಥಾಪನೆ ಮಾಡುವ ವಿಚಾರದಲ್ಲಿ ಅಮೆರಿಕದ ಪಾತ್ರ ದೊಡ್ದದಾಗಿದೆ ಎಂಬುದು ಈಗ ಡೊನಾಲ್ಡ್ ಟ್ರಂಪ್ ಕಾಲದಲ್ಲಿ ಮತ್ತೆ ಪ್ರೂವ್ ಆಗುತ್ತಿದೆ. ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಡೊನಾಲ್ಡ್ ಟ್ರಂಪ್ ದೊಡ್ಡ ದೊಡ್ಡ ಬದಲಾವಣೆಗೆ ನಾಂದಿ ಹಾಡಿದ್ದು, ಅದೇ ರೀತಿ ಇದೀಗ ಗಾಜಾ ವಿಚಾರದಲ್ಲೂ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಒಟ್ನಲ್ಲಿ ಗಾಜಾ ಯುದ್ಧ ಮಧ್ಯಪ್ರಾಚ್ಯ ಭಾಗದಲ್ಲಿ ಸಂಚಲನ ಸೃಷ್ಟಿ ಮಾಡಿದ್ದು, ನೆಮ್ಮದಿ ಕೂಡ ಹಾಳಾಗುತ್ತಿದೆ ಎಂಬ ಆರೋಪ ಕೂಡ ಕೇಳಿ ಬರುತ್ತಲೇ ಇದೆ. ಹೀಗಿದ್ದಾಗ ಡೊನಾಲ್ಡ್ ಟ್ರಂಪ್ ಎಂಟ್ರಿ ಕೊಟ್ಟು, ಯುದ್ಧಕ್ಕೆ ಬ್ರೇಕ್ ಹಾಕುತ್ತಾರಾ ಎಂಬ ಚರ್ಚೆ ಶುರುವಾಗಿದೆ. ಅಮೆರಿಕ ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ, ಹೀಗಾಗಿ ಕುತೂಹಲ ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+