ಗಾಜಾ ಪಟ್ಟಿಯಲ್ಲಿ ಮತ್ತೆ ಯುದ್ಧದ ಕಿಚ್ಚು? ಹಮಾಸ್ & ಇಸ್ರೇಲ್ ನಡುವೆ ಹೊಸ ಕಿರಿಕ್ ಶುರು!
ಇಸ್ರೇಲ್ & ಹಮಾಸ್ ದೊಡ್ಡ ಮಟ್ಟಿಗೆ ಕಿತ್ತಾಡಿಕೊಂಡು, ಗಾಜಾ ಪಟ್ಟಿ ಎಂಬ ನಗರವನ್ನೇ ನಾಶ ಮಾಡಿ ಹಾಕಿವೆ. ಸುಮಾರು 1 ವರ್ಷಕ್ಕೂ ಹೆಚ್ಚು ಕಾಲ ಇಬ್ಬರ ನಡುವೆ ಘೋರವಾದ ಯುದ್ಧ ನಡೆದು ಹೋದ ಕಾರಣ ಇಡೀ ಗಾಜಾ ಪಟ್ಟಿ ಸರ್ವನಾಶವಾಗಿ ಹೋಗಿದೆ. ಇಂತಹ ಸಮಯದಲ್ಲಿ ಯುದ್ಧ ನಿಂತಿದ್ದರೂ ಮತ್ತೆ ಮತ್ತೆ ಕಿರಿಕ್ ಆಗುತ್ತಿದೆ. ಅದೇ ರೀತಿ, ಹಮಾಸ್ ಈಗ ಇಸ್ರೇಲ್ ವಿರುದ್ಧ ಗರಂ ಆಗಿದೆ.
ಗಾಜಾ ಪಟ್ಟಿ ಮೇಲೆ ಯುದ್ಧ ನಡೆಸುತ್ತಿದ್ದ ಇಸ್ರೇಲ್ ಕದನ ವಿರಾಮ ಒಪ್ಪಂದಕ್ಕೆ ಜೈ ಎಂದಿತ್ತು. ಹೀಗೆ ಮಾಡಿಕೊಂಡಿದ್ದ ಕದನ ವಿರಾಮ ಒಪ್ಪಂದದ ಪ್ರಕಾರ ಹಮಾಸ್ ಬಂಡುಕೋರರು ತಮ್ಮ ಬಳಿ ಇದ್ದ ಇಸ್ರೇಲ್ ಒತ್ತೆಯಾಳುಗಳನ್ನು ರಿಲೀಸ್ ಮಾಡಬೇಕಿತ್ತು. ಇದಕ್ಕೆ ಪ್ರತಿಯಾಗಿ ಅತ್ತ ಇಸ್ರೇಲ್ ತನ್ನ ಬಳಿ ಇದ್ದ ಪ್ಯಾಲೆಸ್ತೇನಿ ಖೈದಿಗಳನ್ನು ರಿಲೀಸ್ ಮಾಡಲು ಒಪ್ಪಿಗೆ ಸೂಚಿಸಿ, ಕದನ ವಿರಾಮ ಜಾರಿಗೆ ತರಲಾಗಿತ್ತು. ಆದರೆ ಇದೀಗ ಹಮಾಸ್ ಗರಂ ಆಗಿದ್ದು, ಇಸ್ರೇಲ್ ಸೇನೆ ವಿರುದ್ಧ ಹೊಸ ಆರೋಪ ಹೊರಿಸಿದೆ.

ಗಾಜಾ ಪಟ್ಟಿಯಲ್ಲಿ ಮತ್ತೆ ಯುದ್ಧ?
ಹಮಾಸ್ ಇದೀಗ ಮಾಡಿರುವ ಆರೋಪದ ಪ್ರಕಾರ, ಇಸ್ರೇಲ್ ಸೇನೆ ತಾನು ಮಾತು ಕೊಟ್ಟ ರೀತಿ ಪ್ಯಾಲೆಸ್ತೇನಿ ಖೈದಿಗಳನ್ನು ರಿಲೀಸ್ ಮಾಡುತ್ತಿಲ್ಲವಂತೆ. ಹೀಗಾಗಿ ತಾನು ಕದನ ವಿರಾಮ ನಿಯಮ ಪಾಲನೆ ಮಾಡುವುದಿಲ್ಲ ಎಂದು ಹಮಾಸ್ ಬೆದರಿಕೆ ಹಾಕಿದೆ. ಈ ಮೂಲಕ ಮತ್ತೆ ಇಸ್ರೇಲ್ & ಹಮಾಸ್ ನಡುವೆ ವಾರ್ ಶುರುವಾಗುತ್ತಾ? ಎನ್ನುವ ಅನುಮಾನ ಈಗ ಮೂಡಿದೆ. ಮತ್ತೊಂದು ಕಡೆ ಗಾಜಾ ಪಟ್ಟಿ ನಗರ ಈಗಾಗಲೇ ಸಂಪೂರ್ಣ ನಾಶವಾಗಿದ್ದು, ಜನರ ಬದುಕು ಬೀದಿಗೆ ಬಿದ್ದಿದೆ.
ಹಮಾಸ್ ಹಿಂಸಾಚಾರ ನಡೆಸುತ್ತಿದೆಯಾ?
ಇಸ್ರೇಲ್ ಒತ್ತೆಯಾಳುಗಳ ಪೈಕಿ ಈಗಾಗಲೇ ತನ್ನ ಬಳಿ ಇರುವ ಎಲ್ಲರನ್ನೂ ಹಮಾಸ್ ರಿಲೀಸ್ ಮಾಡಿದೆ ಎಂದು ಹೇಳಲಾಗುತ್ತಿದೆ. ಆದರೆ ಇನ್ನೊಂದು ಕಡೆ ಹಮಾಸ್ ಕೂಡ ಕದನ ವಿರಾಮ ಉಲ್ಲಂಘನೆ ಮಾಡಿ ಹಿಂಸಾಚಾರ ನಡೆಸುತ್ತಿದೆ ಎಂದು ಆರೋಪ ಮಾಡಿದೆ ಇಸ್ರೇಲ್. ಹೀಗಾಗಿ ದೊಡ್ಡ ತಿಕ್ಕಾಟ ಶುರುವಾಗಿದೆ. ಇವರಿಬ್ಬರ ಈ ತಿಕ್ಕಾಟದಲ್ಲಿ ಮತ್ತೆ ಗಾಜಾ ನಗರದ ಜನರು ಓಡಿ ಹೊಗುವ ಪರಿಸ್ಥಿತಿ ನಿರ್ಮಾಣ ಆಗುತ್ತಾ? ಎಂಬ ಅನುಮಾನ ಕೂಡ ಮೂಡಿದೆ.
ಈ ನಡುವೆ ಡೊನಾಲ್ಡ್ ಟ್ರಂಪ್ ಅವರು ಗಾಜಾ ಪಟ್ಟಿಯನ್ನು ಅಮೆರಿಕದ ವಶಕ್ಕೆ ನೀಡಿ ಎಂಬ ಬೇಡಿಕೆ ಕೂಡ ಇಟ್ಟಿರುವುದು ವಿವಾದ ಭುಗಿಲೇಳುವಂತೆ ಮಾಡಿದೆ. ಇಸ್ರೇಲ್ ನಡೆಯ ಕುರಿತು ಇದೀಗ ಇಡೀ ಜಗತ್ತಿನಾದ್ಯಂತ ಚರ್ಚೆ ಆರಂಭವಾಗಿದೆ. ಮತ್ತೊಂದು ಕಡೆ, ಕೆಲವು ದಿನಗಳ ಹಿಂದಷ್ಟೇ ಗಾಜಾ ಪಟ್ಟಿಯಲ್ಲಿ ಜನರು ವಾಪಸ್ ಬಂದು, ತಮ್ಮ ತಮ್ಮ ಮನೆಗಳನ್ನು ಸೇರಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ ಹೀಗೆಲ್ಲಾ ಮತ್ತೆ ತಿಕ್ಕಾಟ ಶುರುವಾದರೆ ಇನ್ನಷ್ಟು ಸಂಕಷ್ಟ ಗ್ಯಾರಂಟಿ.












Click it and Unblock the Notifications