ವ್ಯಂಗ್ಯಚಿತ್ರ ಪತ್ರಿಕೆ ಕಚೇರಿ ಮೇಲೆ ಉಗ್ರರ ದಾಳಿ ; 11 ಸಾವು
ಪ್ಯಾರಿಸ್, ಜ. 7: ಫ್ರೆಂಚ್ ವಾರ ಪತ್ರಿಕೆ ಚಾರ್ಲಿ ಹೆಡ್ಬೊ ಕಚೇರಿ ಮೇಲೆ ಬುಧವಾರ ದಾಳಿ ನಡೆಸಿದ ಮುಸುಕುಧಾರಿ ಭಯೋತ್ಪಾದಕರು ಸುಮಾರು 11 ಜನರನ್ನು ಹತ್ಯೆಗೈದಿದ್ದಾರೆ.
ಹತ್ಯೆಗೈದ ಭಯೋತ್ಪಾದಕರು ತಕ್ಷಣ ಎರಡು ವಾಹನಗಳಲ್ಲಿ ಪರಾರಿಯಾಗಿದ್ದಾರೆ. ಪ್ಯಾರಿಸ್ ಪೊಲೀಸ್ ಮುಖ್ಯಸ್ಥರು ಇದೊಂದು ಭಯೋತ್ಪಾದನೆ ಕೃತ್ಯ ಎಂದು ದೃಢಪಡಿಸಿದ್ದಾರೆ. [ಕೋಸ್ಟ್ ಗಾರ್ಡ್ ಕಣ್ಣಿಗೆ ಪಾಕ್ ಹಾವು ಬಿದ್ದಿದ್ದು ಹೇಗೆ?]

ಪದೇ ಪದೆ ಇಸ್ಲಾಂ ಧರ್ಮದ ದೇವಧೂತ ಮೊಹಮ್ಮದ್ ಕುರಿತ ವ್ಯಂಗ್ಯಚಿತ್ರ ರಚಿಸಿ ಪ್ರಕಟಿಸುತ್ತಿದ್ದ ಈ ಪತ್ರಿಕೆ ಸ್ಥಳೀಯ ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಗುರಿಯಾಗಿತ್ತು. ಇದು ಭಯೋತ್ಪಾದಕರ ದಾಳಿಗೆ ಕಾರಣ ಎನ್ನಲಾಗಿದೆ. [ಸಿಮಿ ಉಗ್ರವಾದ ತಳೆದದ್ದೇ ಕರ್ನಾಟಕದಲ್ಲಿ]
2011ರಲ್ಲಿಯೂ ಇದೇ ಪತ್ರಿಕಾ ಕಚೇರಿ ಮೇಲೆ ಭಯೋತ್ಪಾದಕರು ದಾಳಿ ನಡೆದಿತ್ತು. ಆದರೂ, ಮೊಹಮ್ಮದ್ ಕುರಿತ ವ್ಯಂಗ್ಯಚಿತ್ರ ಪ್ರಕಟಣೆಯನ್ನು ನಿಲ್ಲಿಸಿರಲಿಲ್ಲ. [ಪಾಲಕರ ಮೇಲಿನ ಸೇಡಿಗೆ ಮಕ್ಕಳನ್ನು ಕೊಂದರಂತೆ]
The murders in Paris are sickening. We stand with the French people in the fight against terror and defending the freedom of the press.
— David Cameron (@David_Cameron) January 7, 2015 











Click it and Unblock the Notifications