ಇರಾನಿನಲ್ಲಿ ಸಂಸತ್, ಮಸೀದಿ ಮೇಲೆ ಐಸಿಸ್ ದಾಳಿ, ಸಾವಿನ ಸಂಖ್ಯೆ 12ಕ್ಕೆ ಏರಿಕೆ
ತೆಹ್ರಾನ್, ಜೂನ್ 7: ಇರಾನ್ ರಾಜಧಾನಿ ತೆಹ್ರಾನ್ ನಲ್ಲಿರುವ ಸಂಸತ್ತಿನಲ್ಲಿ ಗುಂಡಿನ ಮೊರೆತ ಕೇಳಿಸಿದೆ. ಇಂದು ಬೆಳಿಗ್ಗೆ ನಾಲ್ವರು ಬಂಧೂಕುದಾರಿಗಳು ಸಂಸತ್ ಭವನದ ಕಟ್ಟಡದೊಳಗೆ ನುಗ್ಗಿ ಗುಂಡಿನ ದಾಳಿ ಆರಂಭಿಸಿದ್ದು ಓರ್ವ ತನ್ನನ್ನು ತಾನು ಸ್ಪೋಟಿಸಿಕೊಂಡಿದ್ದಾನೆ.
ಇನ್ನು ಇಮಾಮ್ ಅಯಾತುಲ್ಲಾಹ್ ಖೊಮೇನಿ ಮೌಸೋಲಿಯಂ (ಮಸೀದಿ)ಯಲ್ಲೂ ಆತ್ಮಾಹುತಿ ಬಾಂಬ್ ಸ್ಟೋಟಿಸಿದ ಪರಿಣಾಮ ಒಟ್ಟು 12 ಜನ ಸಾವನ್ನಪ್ಪಿದ್ದು, 39 ಜನ ಗಾಯಗೊಂಡಿದ್ದಾರೆ.

ಇನ್ನು ಓರ್ವ ಉಗ್ರ ತನ್ನನ್ನು ತಾನು ಸ್ಪೋಟಿಸಿಕೊಂಡಿದ್ದು ಸಾವನ್ನಪ್ಪಿದ್ದಾನೆ. ಇನ್ನುಳಿದ ಮೂವರನ್ನು ಭದ್ರತಾ ಸಿಬ್ಬಂದಿಗಳು ಕೊಂದಿದ್ದಾರೆ. ಬಂಧೂಕುದಾರಿಗಳಲ್ಲಿ ಇಬ್ಬರು ಎಕೆ-47 ಗನ್ ಹಾಗೂ ಓರ್ವ ಪಿಸ್ತೂಲಿನೊಂದಿಗೆ ದಾಳಿ ನಡೆಸಿದ್ದರು ಎಂದು ಸರಕಾರಿ ಮಾಧ್ಯಮಗಳು ವರದಿ ಮಾಡಿವೆ.

ಇನ್ನು ಇಮಾಮ್ ಅಯಾತುಲ್ಲಾಹ್ ಖೊಮೇನಿ ಮೌಸೋಲಿಯಂ (ಮಸೀದಿ) ಯಲ್ಲಿಯೂ ಭಯೋತ್ಪಾದಕಿಯೊಬ್ಬಳು ತನ್ನನ್ನು ತಾನು ಸ್ಪೋಟಿಸಿಕೊಂಡಿದ್ದಾಳೆ.

ಭಯತ್ಪಾದಕ ಸಂಘಟನೆ ಐಸಿಸ್ ದಾಳಿಯ ಹೊಣೆ ಹೊತ್ತುಕೊಂಡಿದೆ. ಇರಾನಿನ ಸುಪ್ರಿಂ ನಾಯಕ ಅಯಾತುಲ್ಲಾಹ್ ಖೊಮೇನಿ ಮಸೀದಿ ಹಾಗೂ ಸಂಸತ್ ಮೇಲೆ ನಡೆದ ದಾಳಿ ಇರಾನನ್ನು ಬೆಚ್ಚಿ ಬೀಳಿಸಿದೆ.
#BREAKING: Audio/video: Shooting heard from within the Iranian Parliament in #Tehran #Iran pic.twitter.com/AsCoaTjS0e
— Amichai Stein (@AmichaiStein1) June 7, 2017












Click it and Unblock the Notifications