ಜಗತ್ತಿನ ಅತಿದೊಡ್ಡ ದ್ವೀಪದ ಮೇಲೆ ಟ್ರಂಪ್ ಕಣ್ಣು, ಯುರೋಪ್ ನೆಲದಲ್ಲಿ ಭಯ ಶುರು! Donald Trump
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಒಂದಾದ ನಂತರ ಒಂದೊಂದು ವಿವಾದ ಮೈಮೇಲೆ ಹಾಕಿಕೊಂಡು, ಇಡೀ ಜಗತ್ತಿನಲ್ಲಿ ಸಂಚಲನ ಸೃಷ್ಟಿ ಮಾಡುತ್ತಿದ್ದಾರೆ. ಅದರಲ್ಲೂ ವೆನಿಜುಯೆಲಾ ಘಟನೆ ನಂತರ ಇಡೀ ಪ್ರಪಂಚಕ್ಕೆ ಟ್ರಂಪ್ ಅವರ ಕ್ಷಣಕ್ಷಣದ ನಿರ್ಧಾರದ ಬಗ್ಗೆಯೂ ಕುತೂಹಲ ಮೂಡುವ ರೀತಿ ಮಾಡಿದೆ. ಯಾವ ಕ್ಷಣದಲ್ಲಿ ಅಮೆರಿಕ ಮತ್ತೊಂದು ದೇಶದ ಮೇಲೆ ಎರಗುತ್ತೋ? ಎಂಬ ಚರ್ಚೆ ಕೂಡ ಶುರುವಾಗಿದೆ. ಇಷ್ಟೆಲ್ಲದರ ನಡುವೆ ಜಗತ್ತಿನ ಅತಿದೊಡ್ಡ ದ್ವೀಪದ ಮೇಲೆ ಟ್ರಂಪ್ ಕಣ್ಣು ಬಿದ್ದಿದ್ದು, ಇಡೀ ಯುರೋಪ್ ನೆಲದಲ್ಲಿ ಭಯ ಶುರುವಾಗಿದೆ.
ಹೌದು, ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಹಲವು ಕಿರಿಕ್ ಆಗಿ ಹೋಗಿದೆ. ಇದರ ಪರಿಣಾಮ ಈಗಾಗಲೇ ಜಾಗತಿಕ ಮಟ್ಟದಲ್ಲಿ ಅಮೆರಿಕ ವಿಲನ್ ಆಗುತ್ತಿದೆ. ಇದೇ ಸಮಯ ಬಳಸಿ ವಿರೋಧಿಗಳು ಅಮೆರಿಕದ ಮಾನ ಕಳೆಯುತ್ತಿದ್ದಾರೆ ಎಂಬ ಆಕ್ರೋಶ ಸ್ವತಃ ಅಮೆರಿಕ ನೆಲದಲ್ಲೇ ಮೊಳಗಿದೆ. ಪರಿಸ್ಥಿತಿ ಹೀಗೆ ಕೈಮೀರಿ ಹೋಗುತ್ತಿರುವ ಸಮಯದಲ್ಲೇ ವೆನಿಜುಯೆಲಾ ಮೇಲೆ ದಾಳಿ ಮಾಡಿದ ಡೊನಾಲ್ಡ್ ಟ್ರಂಪ್ ಅವರ ಆಡಳಿತದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇಷ್ಟೆಲ್ಲಾ ನಡೆಯುವಾಗಲೇ ಗ್ರೀನ್‌ಲ್ಯಾಂಡ್ ವಿಚಾರವಾಗಿ ಕೂಡ ತಲ್ಲಣ ಸೃಷ್ಟಿಯಾಗಿದೆ.

ಯುರೋಪ್ ನಾಯಕರಿಂದ ಒಗ್ಗಟ್ಟಿನ ಮಂತ್ರ
ಗ್ರೀನ್‌ಲ್ಯಾಂಡ್ ಖರೀದಿ ಮಾಡುವ ಬಗ್ಗೆ ಈ ಹಿಂದೆ ಹೇಳಿಕೆ ನೀಡಿದ್ದ ಡೊನಾಲ್ಡ್ ಟ್ರಂಪ್ ಅವರು ಇದೀಗ ಈ ವಿಚಾರವಾಗಿ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಕುರಿತು ಚರ್ಚೆ ಶುರುವಾಗಿದೆ. ಇದು ತಲ್ಲಣ ಸೃಷ್ಟಿ ಮಾಡುವ ಜೊತೆಗೆ ಸ್ವತಃ ಯುರೋಪ್ ಖಂಡದಲ್ಲಿ ಭಾರಿ ದೊಡ್ಡ ಸಂಚಲನಕ್ಕೂ ಕಾರಣವಾಗಿದೆ. ಏಕೆಂದರೆ ಅಕಸ್ಮಾತ್ ಡೊನಾಲ್ಡ್ ಟ್ರಂಪ್ ನೇರವಾಗಿ ಗ್ರೀನ್‌ಲ್ಯಾಂಡ್ ವಿಚಾರಕ್ಕೆ ಕೈಹಾಕಿದರೆ ಅದು ನೇರ ಯುರೋಪ್ ಖಂಡವನ್ನೇ ಅಲುಗಾಡಿಸಲಿದೆ. ಇದೇ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಯುರೋಪ್ ದೇಶಗಳ ನಾಯಕರು ಗ್ರೀನ್‌ಲ್ಯಾಂಡ್ ಬೆನ್ನಿಗೆ ನಿಂತಿದ್ದಾರೆ. ಮತ್ತೊಂದು ಕಡೆ ಡೆನ್‌ಮಾರ್ಕ್ ಕೂಡ ಈ ವಿಚಾರವಾಗಿ ಅಲರ್ಟ್ ಆಗಿದೆ.
ಪರಿಸ್ಥಿತಿ ಹೀಗೆ ಮುಂದುವರಿದರೆ...
ಒಟ್ಟಾರೆ ಹೇಳುವುದಾದರೆ ಡೊನಾಲ್ಡ್ ಟ್ರಂಪ್ ಅವರ ಈ ರೀತಿಯ ವರ್ತನೆಗಳು ಸಾಕಷ್ಟು ದೊಡ್ಡ ಚರ್ಚೆಗೆ ವೇದಿಕೆ ಸೃಷ್ಟಿ ಮಾಡುತ್ತಿವೆ. ಕೊರೊನಾ ಅಪ್ಪಳಿಸಿದ ನಂತರ ಮೊದಲೇ ಸಾಲು ಸಾಲು ಸಂಕಷ್ಟ ಎದುರಿಸುತ್ತಿರುವ ಯುರೋಪ್ ದೇಶಗಳಲ್ಲಿ ಹೊಸ ಸವಾಲು ಎದುರುವಾಗುವುದು ಬೇಡ ಎಂಬಂತಾಗಿದೆ. ಹೀಗಾಗಿಯೇ ಟ್ರಂಪ್ ಅವರ ನಿರ್ಧಾರಕ್ಕೂ ಮೊದಲೇ ಅಲರ್ಟ್ ಆಗಿರುವ ಇದೇ ಯುರೋಪ್ ದೇಶಗಳ ನಾಯಕರು ಗ್ರೀನ್‌ಲ್ಯಾಂಡ್ ಮೇಲೆ ಅಮೆರಿಕ ಯಾವುದೇ ಕ್ರಮ ಕೈಗೊಳ್ಳದ ರೀತಿ ಕಟ್ಟೆಚ್ಚರ ವಹಿಸಿದ್ದಾರೆ. ಆದರೆ ಟ್ರಂಪ್ ನಿರ್ಧಾರವೇ ಇದೀಗ ಕುತೂಹಲ ಕೆರಳಿಸಿದೆ.












Click it and Unblock the Notifications