ಕೋವಿಡ್‌ಗೆ ಸಿಕ್ಕಿತಾ ಔಷಧಿ?; ಕುತೂಹಲ ಮೂಡಿಸಿದ ಡೊನಾಲ್ಡ್ ಟ್ರಂಪ್ ಟ್ವೀಟ್
ಅಮೆರಿಕ, ಜುಲೈ 15 : ಜಗತ್ತಿನ ವಿವಿಧ ದೇಶಗಳು ಕೊರೊನಾ ವೈರಸ್ ಸೋಂಕಿಗೆ ಔಷಧಿ ಕಂಡುಹಿಡಿಯಲು ಪ್ರಯತ್ನ ನಡೆಸಿದೆ. ಈ ಸಮಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಟ್ವೀಟ್ ಭಾರಿ ಚರ್ಚೆಗೆ ಕಾರಣವಾಗಿದೆ.
Recommended Video
ಡೊನಾಲ್ಡ್ ಟ್ರಂಪ್ ಮಾಡಿರುವ ಒಂದು ಲೈನ್ ಇರುವ ಟ್ವೀಟ್ ಜಗತ್ತಿನಲ್ಲಿ ಸಂಚಲನ ಉಂಟು ಮಾಡಿದೆ. ಅಮೆರಿಕ ಕೊರೊನಾ ವೈರಸ್ ಸೋಂಕಿಗೆ ಔಷಧಿ ಕಂಡುಹಿಡಿಯಿತೇ? ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಬುಧವಾರ ಡೊನಾಲ್ಡ್ ಟ್ರಂಪ್ 'Great News on Vaccines!' ಎಂದು ಕೇವಲ ಒಂದು ಲೈನ್ ಟ್ವೀಟ್ ಮಾಡಿದ್ದಾರೆ. ಕೇವಲ ಅರ್ಧಗಂಟೆಯಲ್ಲಿ ಈ ಟ್ವೀಟ್ ಅನ್ನು 7.4 ಸಾವಿರ ಜನರು ರೀ ಟ್ವೀಟ್ ಮಾಡಿದ್ದಾರೆ.
ಕೊರೊನಾ ವೈರಸ್ ಸೋಂಕಿತರು ಅತಿ ಹೆಚ್ಚು ಇರುವ ಜಗತ್ತಿನ ರಾಷ್ಟ್ರಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಅಮೆರಿಕದಲ್ಲಿ 3,547,450 ಸೋಂಕಿತರು ಇದ್ದಾರೆ. 2ನೇ ಸ್ಥಾನದಲ್ಲಿ ಬ್ರೆಜಿಲ್ ಇದ್ದು, 3ನೇ ಸ್ಥಾನದಲ್ಲಿ ಭಾರತವಿದೆ.
ಅಮೆರಿಕದಲ್ಲಿ ಕೊರೊನಾ ವೈರಸ್ ಸೋಂಕಿಗೆ ಔಷಧಿ ಕಂಡುಹಿಡಿಯುವ ಪ್ರಯತ್ನಗಳು ನಡೆದಿದ್ದವು. ಈ ಪ್ರಯತ್ನ ಯಶಸ್ವಿಯಾಗಿಯೇ? ಎಂದು ಟ್ರಂಪ್ ತಮ್ಮ ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿಲ್ಲ. ಡೊನಾಲ್ಡ್ ಟ್ರಂಪ್ ಮಾಡುವ ಮುಂದಿನ ಟ್ವೀಟ್ ಕುತೂಹಲ ಮೂಡಿಸಿದೆ.
ಭಾನುವಾರ ಡೊನಾಲ್ಡ್ ಟ್ರಂಪ್ ಮಾಸ್ಕ್ ಧರಿಸಿದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇಂದು ಅವರು ಔಷಧಿ ಬಗ್ಗೆ ಟ್ವೀಟ್ ಮಾಡಿದ್ದಾರೆ.
Great News on Vaccines!
— Donald J. Trump (@realDonaldTrump) July 15, 2020












Click it and Unblock the Notifications