ಶಿಶು ಆರೋಗ್ಯ ಪರಿಮಾಣದ ಸಂಶೋಧಕಿ ಡಾ. ಅಪ್ಗರ್‌ಗೆ ಗೂಗಲ್ ಗೌರವ

ಬೆಂಗಳೂರು, ಜೂನ್ 7: ನವಜಾತ ಶಿಶು ಜನ್ಮವೆತ್ತಿದ ಕೂಡಲೇ ಅದರ ಹೃದಯ ಬಡಿತ, ಉಸಿರಾಟದ ವೇಗ, ಬಾಹ್ಯ ಪ್ರಪಂಚಕ್ಕೆ ಅದು ಸ್ಪಂದಿಸುವ ರೀತಿ, ದೈಹಿಕ‌ ಅಂಗಾಗಗಳ ಬೆಳವಣಿಗೆಯ ಪ್ರಮಾಣ ಇದೆಲ್ಲವನ್ನೂ ಅಳೆಯುವ ಮಾನದಂಡಕ್ಕೆ ವೈದ್ಯಕೀಯ ಭಾಷೆಯಲ್ಲಿ ಅಪ್ಗರ್ ಪರಿಮಾಣ ಎನ್ನುತ್ತಾರೆ. ಈ ಪರಿಮಾಣದ ರೂವಾರಿಯೇ ಡಾ.ವಿರ್ಜೀನಿಯಾ ಅಪ್ಗರ್.

ಇಂದು ಡಾ.ಅಪ್ಗರ್ ಜನ್ಮದಿನ. ಜಗತ್ತು ಇಂದು ಡಾ.ಅಪ್ಗರ್ ಸ್ಮರಿಸಲೇಬೇಕಾದ ದಿನ. ಗೂಗಲ್ ತನ್ನ ಡೂಡಲ್ ನಲ್ಲಿ ಡಾ.ಅಪ್ಗರ್ ಸ್ಮರಣೆಯ ಮೂಲಕ ಗೌರವ ಸಲ್ಲಿಸಿದೆ. 1909ರಲ್ಲಿ ನ್ಯೂ ಜೆರ್ಸಿಯಲ್ಲಿ ಸಂಗೀತ ಹಿನ್ನೆಲೆಯಲ್ಲಿ ಜನಿಸಿದ ಡಾ.ವಿರ್ಜೀನಿಯಾ ಅಪ್ಗರ್ ನಂತರ ವಿಜ್ಞಾನದಲ್ಲಿ ಆಸಕ್ತಿಯನ್ನು ಹೊಂದು ವೈದ್ಯರಾಗಲು ಬಯಸಿದ್ದರು.

ಅರಂಭದಲ್ಲಿ ಪ್ರಾಣಿಶಾಸ್ತ್ರ, ರಸಾಯನಶಾಸ್ತ್ರದಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದ ಕಾಲೇಜ್‌ ಆಫ್‌ ಫಿಜಿಶಿಯನ್ ಅಂಡ್ ಸರ್ಜನ್ಸ್‌ನಲ್ಲಿ ಅಧ್ಯಯನ ನಡೆಸಿದರು.

Google pays tribute to Dr Virginia

ನಂತರ ಡಾ. ಅಲ್ವೆನ್ ವಿಪಲ್ ಎನ್ನುವ ಕೊಲಂಬಿಯಾ ಮೆಡಿಕಲ್ ಸೆಂಟರ್‌ನ ವೈದ್ಯರಿಂದ ಪ್ರೇರೇಪಿತರಾಗಿ ಅನಸ್ತೇಶಿಯಾ ಅಧ್ಯಯನ ಕಡೆಗೆ ಹೆಚ್ಚು ಒಲವು ತೋರಿದರು.ಇದೇ ಅವರ ಬದುಕಿನಲ್ಲಿ ಬಹುದೊಡ್ಡ ತಿರುವವನ್ನು ಪಡೆಯಿತು. ಕಾಲಕ್ರಮೇಣ ಅನಸ್ತೇಶಿಯಾದಲ್ಲಿ ಬಹುದೊಡ್ಡ ಹೆಸರು ಮಾಡಿದ ಡಾ. ಅಪ್ಗರ್ ನವಜಾತ ಶಿಶುವಿನ ಜನನ ನಂತರ ಬೆಳವಣಿಗೆ ಪರಿಮಾಣ ಕುರಿತಂತೆ ಅಧ್ಯಯನ ನಡೆಸಿದರು.

Google pays tribute to Dr Virginia

ಹೀಗಾಗಿ ಅವರ ಅಧ್ಯಯನ ಪ್ರತಿಫಲವಾಗಿ ಅಮೇರಿಕಾದಲ್ಲಿ 1930 ದಶಕದಲ್ಲಿ ನವಜಾತ ಶಿಶುಗಳ ಸಾವಿನ ಪ್ರಮಾನ ಗಣನೀಯವಾಗಿ ತಗ್ಗಿತ್ತು. 1933ರಲ್ಲಿ ನ್ಯೂಯಾರ್ಕ್ ನಲ್ಲಿ ಈ ಅಧ್ಯಯನ ನಡೆಸಿದ ಡಾ. ಅಪ್ಗರ್ ಅವರು ನಡೆಸಿದ ಅಧ್ಯಯನಕ್ಕೆ ಅಪ್ಗರ್ ಪರಿಮಾಣ ಎಂದೇ ಹೆಸರಿಡಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+