ಎಚ್ಚರಾ! ಭೂಮಿ ಮೇಲೆ ಉಪಗ್ರಹ ಅಪ್ಪಳಿಸಲಿದೆ
ಬೆಂಗಳೂರು, ನ.7: ಯುರೋಪಿಯನ್ ಉಪಗ್ರಹವೊಂದು ಭೂಭಾಗದ ಮೇಲೆ ಪತನಗೊಳ್ಳುವ ಸಾಧ್ಯತೆಯಿದೆ. ಭೂ ಕಕ್ಷೆಯಿಂದ ಮೇಲಕ್ಕೆ ಕ್ರಮಿಸಲು ಅಸಮರ್ಥವಾಗಿ ಉಳಿದಿದೆ. ಮುಂದಿನ ಕೆಲ ದಿನಗಳಲ್ಲಿ ಭೂಮಿಗೆ ಅಪ್ಪಳಿಸಲಿದೆ. ಆದರೆ, ಎಲ್ಲಿ? ಯಾವಾಗ? ಎಂಬುದಕ್ಕೆ ತಕ್ಷಣಕ್ಕೆ ಉತ್ತರವಿಲ್ಲ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಭೂ ಕಕ್ಷೆಯಿಂದ ಮೇಲಿರುವ ಯುರೋಪಿನ ಉಪಗ್ರಹದಿಂದ ಏನಾದರೂ ಅಪಾಯ ಸಂಭವಿಸಬಹುದೆಂಬ ಆತಂಕ ವಿಜ್ಞಾನಿಗಳಲ್ಲೂ ಇದೆ. ಈ ಉಪಗ್ರಹ ಎಲ್ಲಿ, ಯಾವಾಗ ಭೂಮಿಗೆ ಅಪ್ಪಳಿಸಲಿದೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಲಾಗುತ್ತಿಲ್ಲ. ಭೂಖಂಡದ ಯಾವುದೇ ಸ್ಥಳದಲ್ಲಾದರೂ ಯಾವುದೇ ಕ್ಷಣ ಅಪ್ಪಳಿಸಬಹುದು. ಒಂದು ಟನ್ ತೂಕವಿರುವ ಈ ಬಾಹ್ಯಾಕಾಶ ನೌಕೆ ತುಂಡು ತುಂಡಾಗಿ ಭೂಮಿಗೆ ಬೀಳಬಹುದು ಎನ್ನಲಾಗಿದೆ.
ಬಾಹ್ಯಾಕಾಶಕ್ಕೆ ಅನಿಯಂತ್ರಿತವಾಗಿ ಪ್ರವೇಶ ಮಾಡಿದ ಕೆಲವು ಉಪಗ್ರಹಗಳಲ್ಲಿ ಇದು ಇತ್ತೀಚಿನದು ಎಂದು ಹೇಳಲಾಗಿದೆ. ಈ ವರ್ಷದಲ್ಲೇ ಇಂಥ ಉಪಗ್ರಹಗಳು ಧರೆಗೆ ಅಪ್ಪಳಿಸಿರುವ ಅವಶೇಷಗಳು ಒಂದು ನೂರು ಟನ್ ಗಳಿಗೂ ಅಧಿಕವಾಗಿವೆ. ಆದರೆ ಈವರೆಗೂ ಈ ಅವಶೇಷಗಳು ಯಾವುದೇ ವ್ಯಕ್ತಿಗಳ ಮೇಲೆ ಬಿದ್ದು ಗಾಯಗೊಂಡಿರುವ ಅಥವಾ ಸಾವನ್ನಪ್ಪಿರುವ ಉದಾಹರಣೆಗಳಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇಂಥ ಉಪಗ್ರಹ ಎಲ್ಲಿ ಹೇಗೆ ಭೂಮಿಯತ್ತ ಧಾವಿಸಲಿದೆ ಎಂಬುದನ್ನು ನಿರ್ದಿಷ್ಟವಾಗಿ ಹೇಳುವುದು ಕಷ್ಟ ಎನ್ನುತ್ತಾರೆ. ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಮ್ಯಾನೇಜರ್ ರುನೆ ಫ್ಲೋಬರ್ ಘಾಗೆನ್. ಆದರೆ ಇಂಜಿನಿಯರ್ ಗಳ ಅಭಿಪ್ರಾಯದ ಪ್ರಕಾರ ಬರುವ ಭಾನುವಾರ ರಾತ್ರಿ ಅಥವಾ ಸೋಮವಾರ ಮುಂಜಾನೆ ಇದು ಸಂಭವಿಸಬಹುದಂತೆ.
ಒಂದು ದಿನಕ್ಕೆ 2.5 ಮೈಲುಗಳ ನಿಧಾನಗತಿಯಲ್ಲಿ ಆ ಉಪಗ್ರಹ ಬುಧವಾರ (ನಿನ್ನೆ)ದವರೆಗೆ ಭೂಮಿಯಿಂದ 115 ಮೈಲು ಅಂತರದಲ್ಲಿ ಭೂಕಕ್ಷೆಯಲ್ಲಿ ಗಿರಕಿ ಹೊಡೆಯುತ್ತಿದೆ. ಪ್ರತಿ 88 ನಿಮಿಷಕ್ಕೊಂದಾವರ್ತಿಯಂತೆ ಭೂಮಿಯನ್ನು ಪ್ರದಕ್ಷಿಣೆ ಹಾಕುತ್ತಿದೆ.
ಕಳೆದ ಎರಡು ವರ್ಷಗಳ ಹಿಂದೆ ನಾಸಾ ಕಳುಹಿಸಿದ್ದ ಒಂದು ಉಪಗ್ರಹ ಸಂಪರ್ಕ ಕಡಿದುಕೊಂಡಿತ್ತು. ಆ ಬಳಿಕ ಯಾರಿಗೂ ತೊಂದರೆಯಾಗದಂತೆ ಪೆಸಿಫಿಕ್ ಸಾಗರಕ್ಕೆ ಬಿದ್ದಿತ್ತು. ಅದೇ ವರ್ಷ ಸ್ವಲ್ಪ ಸಮಯದ ನಂತರ ರಷ್ಯಾ ಉಡಾಯಿಸಿದ ಉಪಗ್ರಹ ಮಂಗಳನತ್ತ ಹೋಗದೆ ಗುರಿತಪ್ಪಿ ಭೂಮಿಯ ಕಡೆಗೇ ಧಾವಿಸಿತ್ತು. ಆದರೆ ಅದೂ ಕೂಡ ಪೆಸಿಫಿಕ್ ಸಾಗರದಲ್ಲೇ ಪತನವಾಯಿತು. ಯಾರಿಗೂ ಅಪಾಯ ಮಾಡಲಿಲ್ಲ. ಆದರೆ ಈ ಉಪಗ್ರಹದ ಪತನ ಹೇಗೆ ಆದೀತು ಎಂಬುದು ಜಟಿಲವಾಗಿಯೇ ಇದೆ ಎಂಬುದು ರುನೆ ಫ್ಲೋಬರ್‌ಘಾಗೆನ್ ಅಭಿಮತ.
ಈ ಉಪಗ್ರಹ Gravity Field and Steady-State Ocean Circulation Explorer, or GOCEವನ್ನು 2009ರ ಮಾರ್ಚ್ ನಲ್ಲಿ ಉಡಾಯಿಸಲಾಗಿತ್ತು. ಈ ಎಲ್ಲ ಅವಘಡಗಳ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ, ಇಂತಹ ಅಪಾಯಕಾರಿ ಪ್ರಕರಣಗಳನ್ನು ಕಡಿಮೆ ಮಾಡಲು 2008ರಲ್ಲೇ ಒಂದು ಮಾರ್ಗಸೂಚಿಯನ್ನು ಅಂಗೀಕರಿಸಿತ್ತು. ವಿಶ್ವಸಂಸ್ಥೆಯ ಈ ಕ್ರಮದ ನಂತರ ಜಿಒಸಿಇ ಬಾಹ್ಯಾಕಾಶ ಸಂಸ್ಥೆ ಕೂಡ ಹಲವು ಕ್ರಮಗಳನ್ನು ರೂಪಿಸಿದೆ.












Click it and Unblock the Notifications