Microsoft Outage: ಮೈಕ್ರೋಸಾಫ್ಟ್ ಸ್ಥಗಿತದಿಂದ ಬೆಚ್ಚಿಬಿದ್ದ ಜಗತ್ತು! ಏನೆಲ್ಲಾ ಸಮಸ್ಯೆಯಾಗಿದೆ?
ಆಧುನಿಕ ಜಗತ್ತು ತಂತ್ರಜ್ಞಾನದ ಮೇಲೆ ಎಷ್ಟು ಅವಲಂಬಿತವಾಗಿದೆ ಎಂದರೆ ಒಂದು ಕ್ಷಣ ತಂತ್ರಜ್ಞಾನ ಕೈಕೊಟ್ಟರು ಜಗತ್ತು ನಿಂತಲ್ಲೇ ನಿಂತುಬಿಡುತ್ತದೆ. ಇಂದು ಕೂಡ ಆಗಿದ್ದು ಇದೇ. ಮೈಕ್ರೋಸಾಫ್ಟ್ ಜಗತ್ತಿನಾದ್ಯಂತ ಕೈಕೊಟ್ಟ ಕಾರಣ ಸೂಪರ್ ಮಾರ್ಕೆಟ್‌ನಿಂದ ಹಿಡಿದು ಬ್ಯಾಂಕಿಂಗ್ ಕ್ಷೇತ್ರದವರೆಗೆ ಹಲವು ಕ್ಷೇತ್ರಗಳು ಬೆಚ್ಚಿಬಿದ್ದಿವೆ.
ಟೆಕ್ ದೈತ್ಯ ಮೈಕ್ರೋಸಾಫ್ಟ್‌ನ ವಿಂಡೋಸ್ ಏಕಾಏಕಿ ಕೈಕೊಟ್ಟಿದ್ದು ಇಷ್ಟಕ್ಕೆಲ್ಲಾ ಕಾರಣವಾಗಿದೆ. ಲಕ್ಷಾಂತರ ಜನ ಕಂಪ್ಯೂಟರ್, ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವಾಗಿ ದಿಢೀರ್ ಎಂದು ಸಿಸ್ಟಮ್ ಆಫ್ ಆಗುವುದು ಅಥವಾ ರೀಸ್ಟಾರ್ಟ್ ಆಗುವುದು ಸಮಸ್ಯೆಗೆ ಕಾರಣವಾಗಿದೆ.

ಬ್ಲೂ ಸ್ಕ್ರೀನ್ ಡೆತ್ (BSOD)ಯಿಂದ ವಿಂಡೋಸ್ ಕಂಪ್ಯೂಟರ್ ಬಳಕೆದಾರರು ಆತಂಕಗೊಂಡಿದ್ದು ಹಲವು ಕ್ಷೇತ್ರಗಳ ಮೇಲೆ ಪ್ರಭಾವ ಬೀರಿದೆ. ಬ್ಯಾಂಕ್, ಸರ್ಕಾರಿ ಕಚೇರಿ ಮತ್ತು ವಿಮಾನಯಾನ ಸಂಸ್ಥೆಗಳ ಮೇಲೆ ಪರಿಣಾಮ ಬೀರಿದೆ.
ವಿಮಾನಗಳ ಸೇವೆಗಳು ವ್ಯತ್ಯಯ
ಇಂಡಿಗೋ, ಸ್ಪೈಸ್‌ಜೆಟ್ ಮತ್ತು ಆಕಾಶ ಏರ್ - ಬುಕಿಂಗ್, ಚೆಕ್-ಇನ್ ಮತ್ತು ಫ್ಲೈಟ್‌ಗಳ ಮೇಲೆ ಪರಿಣಾಮ ಬೀರಿದೆ. ಮೈಕ್ರೋಸಾಫ್ಟ್ ಕೈಕೊಟ್ಟ ಪರಿಣಾಮ ಪ್ರಯಾಣಿಕರನ್ನು ವ್ಯಕ್ತಿಗತವಾಗಿ ಪರಿಶೀಲನೆ ಮಾಡಲಾಗುತ್ತಿದ್ದು, ಪ್ರಯಾಣಿಕರಿಗೆ ವಿಳಂಬವಾಗುತ್ತಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೂ ವ್ಯವಸ್ಥೆಗಳು ಸ್ಥಗಿತಗೊಂಡಿದ್ದು ಏನೆಲ್ಲಾ ಸಮಸ್ಯೆಯಾಗಿದೆ ಎನ್ನುವುದು ಇನ್ನೂ ತಿಳಿಯಬೇಕಿದೆ.
ಜಗತ್ತಿನಾದ್ಯಂತ ಸಮಸ್ಯೆ
ಹಾನಿಗೊಳಗಾದ ದೇಶಗಳಲ್ಲಿ ಆಸ್ಟ್ರೇಲಿಯಾ ಕೂಡ ಇದೆ. ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪ್ರಕಾರ, ಸ್ಥಗಿತವು ಎಬಿಸಿ ನ್ಯೂಸ್ 24 ಅನ್ನು ಸ್ಥಗಿತಗೊಳಿಸಿದೆ. ಸುದ್ದಿ ಪ್ಯಾಕೇಜ್‌ಗಳನ್ನು ಪ್ಲೇ ಮಾಡಲು ಸಮಸ್ಯೆಯಾಗಿದೆ. ವೂಲ್‌ವರ್ತ್ಸ್ ಸೂಪರ್‌ಮಾರ್ಕೆಟ್‌ಗಳಲ್ಲಿ ಕೂಡ ಕಂಪ್ಯೂಟರ್ ಕೈಕೊಟ್ಟ ಕಾರಣ ಚೆಕ್‌ಔಟ್ ವ್ಯವಸ್ಥೆಗಳು ಕ್ರ್ಯಾಶ್ ಆಗಿದ್ದವು. ಹಲವಾರು ಗ್ರಾಹಕರು ತಮ್ಮ ಕಾರ್ಡ್‌ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರಿದರು. ಪೊಲೀಸ್ ವ್ಯವಸ್ಥೆ ಕೂಡ ಕುಸಿದಿದೆ ಎಂದು ವರದಿಯಾಗಿದೆ.
ಜಾಗತಿಕ ತಂತ್ರಜ್ಞಾನ ಸಮಸ್ಯೆಯಿಂದಾಗಿ ಹಲವಾರು ವಿಮಾನಯಾನ ಸಂಸ್ಥೆಗಳ ಚೆಕ್-ಇನ್ ಪ್ರಕ್ರಿಯೆಯು ಪರಿಣಾಮ ಬೀರುತ್ತದೆ ಎಂದು ಮೆಲ್ಬೋರ್ನ್ ವಿಮಾನ ನಿಲ್ದಾಣವು ಹೇಳಿಕೆಯಲ್ಲಿ ತಿಳಿಸಿದೆ. ಸಿಡ್ನಿ ವಿಮಾನ ನಿಲ್ದಾಣಕ್ಕೆ ಎಲ್ಲಾ ವಿಮಾನಗಳು ಬರುವುದನ್ನು ಮತ್ತು ಹೋಗುವುದನ್ನು ಸ್ಥಗಿತಗೊಳಿಸುವುದನ್ನು ತಡೆಯುತ್ತಿದೆ ಎಂದು ವರ್ಜಿನ್ ಆಸ್ಟ್ರೇಲಿಯಾ ಹೇಳಿದೆ.
ಲಂಡನ್ ಸ್ಟಾಕ್ ಎಕ್ಸ್‌ಚೇಜ್ ಕೂಡ ಮೈಕ್ರೋಸಾಫ್ಟ್ ಸ್ಥಗಿತದಿಂದ ಪ್ರಭಾವಿತವಾಗಿದೆ. ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್, ಡೆಲ್ಟಾ, ಯುನೈಟೆಡ್ ಮತ್ತು ಅಮೇರಿಕನ್ ಏರ್ಲೈನ್ಸ್ ಸೇರಿದಂತೆ ಹಲವಾರು ಪ್ರಮುಖ ಯುಎಸ್ ಏರ್ ಲೈನ್ಸ್‌ಗಳ ಎಲ್ಲಾ ವಿಮಾನಗಳನ್ನು ಸಂವಹನ ಸಮಸ್ಯೆಯಿಂದಾಗಿ ರದ್ದುಗೊಳಿಸಲಾಗಿದೆ ಎಂದು ಯುಎಸ್‌ನ ಹಲವಾರು ರಾಜ್ಯಗಳಲ್ಲಿ 911 ತುರ್ತು ಸೇವೆಗಳು ಸಹ ಹಾನಿಗೊಳಗಾಗಿವೆ. ಬ್ರಿಟಿಷ್ ಸುದ್ದಿ ವಾಹಿನಿ ಸ್ಕೈ ನ್ಯೂಸ್ ಪ್ರಸಾರ ಕೂಡ ಸ್ಥಗಿತವಾಗಿದೆ.
ಸಿಸ್ಟಂಗಳು ಸ್ಥಗಿತಗೊಂಡಂತೆ, "ನಿಮ್ಮ ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್ ಸಮಸ್ಯೆಗೆ ಸಿಲುಕಿದೆ ಮತ್ತು ಮರುಪ್ರಾರಂಭಿಸಬೇಕಾಗಿದೆ. ನಾವು ಕೆಲವು ದೋಷದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ ಮತ್ತು ನಂತರ ನಾವು ನಿಮಗಾಗಿ ಮರುಪ್ರಾರಂಭಿಸುತ್ತೇವೆ." ಪರದೆಯ ಮೇಲಿನ ಸಂದೇಶ ಬರುತ್ತದೆ.
ಮೈಕ್ರೋಸಾಫ್ಟ್ 365 ಅವರು ಸಮಸ್ಯೆಯನ್ನು ತನಿಖೆ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದು, ಕೆಲವು ಕ್ಷಣಗಳಲ್ಲೇ ಸಮಸ್ಯೆ ಬಗೆಹರಿಯುವ ಭರವಸೆ ನೀಡಿದೆ.












Click it and Unblock the Notifications