ವಿಶ್ವದಾದ್ಯಂತ ಕೊರೊನಾಗೆ ಬಲಿಯಾದವರ ಸಂಖ್ಯೆ 2 ಕೋಟಿ ದಾಟಿದೆ!

ನವದೆಹಲಿ, ಜನವರಿ 16: ಜಗತ್ತಿನಾದ್ಯಂತ ಕೋವಿಡ್-19 ಮಹಾಮಾರಿ ಮಾಡಿದ ಅನಾಹುತ ಅಷ್ಟಿಷ್ಟಲ್ಲ. ಇಂದಷ್ಟೇ ಭಾರತದಲ್ಲಿ ಕೋವಿಡ್-19 ಅಭಿಯಾನ ಶುರುವಾಗಬೇಕಿದೆ. ಇಂತಹ ವೇಳೆಯಲ್ಲಿ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ಜಗತ್ತಿನಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 2 ಕೋಟಿ ದಾಟಿದೆ.

ಚೀನಾದ ವುಹಾನ್‌ನಲ್ಲಿ ಆರಂಭಗೊಂಡು ಇಡೀ ವಿಶ್ವವನ್ನೇ ಹರಡಿದ ಕೊರೊನಾವೈರಸ್‌ ಬರೋಬ್ಬರಿ ಎರಡು ಕೋಟಿ ಜನರನ್ನು ಬಲಿ ತೆಗೆದುಕೊಂಡಿದೆ. ಈ ಮಾಹಿತಿಯು ಪ್ರಪಂಚದಾದ್ಯಂತ ಸರ್ಕಾರಿ ಸಂಸ್ಥೆಗಳು ನೀಡಿದ ಮಾಹಿತಿ ಆಧರಿಸಿದ್ದು, ನಿಜವಾದ ಸಂಖ್ಯೆಯು ಇದಕ್ಕಿಂತ ಹೆಚ್ಚಾಗಿರಬಹುದು. ಆರಂಭಿಕ ದಿನಗಳಲ್ಲಿ ಸೋಂಕಿನ ಕುರಿತು ಹೆಚ್ಚಿನ ಮುಂಜಾಗ್ರತೆ ಇಲ್ಲದ ಪರಿಣಾಮ ಮತ್ತು ಅಸಮರ್ಪಕ ಚಿಕಿತ್ಸೆಯಿಂದ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡರು.

covid deaths

ಇನ್ನು ಕೋವಿಡ್-19ಗೆ ಇದುವರೆಗೂ ಮೃತಪಟ್ಟವರ ಒಟ್ಟು ಸಂಖ್ಯೆಯು ಬ್ರುಸೆಲ್ಸ್‌, ಮೆಕ್ಕಾ, ಮಿನ್ಕ್ಸ್ ಅಥವಾ ವಿಯೆನ್ನಾದ ಒಟ್ಟು ಜನಸಂಖ್ಯೆಗಿಂತ ಹೆಚ್ಚಾಗಿದೆ. ಮೊದಲ ಎಂಟು ತಿಂಗಳಿನಲ್ಲಿ 1 ಕೋಟಿ ಜನರು ಕೊರೊನಾಗೆ ಮೃತಪಟ್ಟಿದ್ದಾರೆ, ನಂತರದ ನಾಲ್ಕು ತಿಂಗಳಲ್ಲಿ 1 ಕೋಟಿ ಜನರು ಸಾವನ್ನಪ್ಪಿದ್ದಾರೆ.

ಚೀನಾದಲ್ಲಿ ಮೊದಲು ಕೋವಿಡ್ ಪ್ರಾರಂಭವಾದ ಬಳಿಕ ಇದುವರೆಗೂ 93,518,182 ಜನರಿಗೆ ಇಲ್ಲಿಯವರಿಗೆ ಸೋಂಕು ತಗುಲಿದೆ. ಜಾನ್ ಹಾಪ್ಕಿನ್ಸ್‌ ಯೂನಿವರ್ಸಿಟಿಯ ಪ್ರಕಾರ 2,002,468 ಕೋಟಿ ಜನರು ವೈರಸ್ ಸೋಂಕಿಗೆ ಒಳಗಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+