40 ದೇಶದ ಪ್ರವಾಸಿಗರಿಗೆ ಇ-ವೀಸಾ ಭಾಗ್ಯ

ನವದೆಹಲಿ, ನ. 24: ಜರ್ಮನಿ, ಯುಎಸ್, ಇಸ್ರೇಲ್ ಸೇರಿದಂತೆ ಸುಮಾರು 40 ದೇಶಗಳ ಪ್ರವಾಸಿಗರಿಗೆ ಎಲೆಕ್ಟ್ರಾನಿಕ್ ವೀಸಾ ನೀಡುವ ಕಾರ್ಯಕ್ಕೆ ನವೆಂಬರ್ 27 ರಂದು ಚಾಲನೆ ನೀಡಲಾಗುವುದು.

ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿರುವ ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮಾ, ಇ-ವೀಸಾ ಸೌಲಭ್ಯ ಜಾರಿಗೆ ಗೃಹ ಸಚಿವ ರಾಜನಾಥ್ ಸಿಂಗ್ ಜತೆ ಚರ್ಚೆ ಮಾಡಲಾಗಿದೆ. ಅಲ್ಲದೇ ರಷ್ಯಾ, ಬ್ರೇಜಿಲ್, ಥೈಲ್ಯಾಂಡ್, ಯುಎಇ, ಜೋರ್ಡನ್, ನಾರ್ವೆ ದೇಶದ ನಾಗರಿಕರಿಗೂ ಈ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದ್ದಾರೆ.[40 ಲಕ್ಷ ವಲಸಿಗರಿಗೆ ಬರಾಕ್ ಒಬಾಮಾ ಅಭಯ ಹಸ್ತ]

visa

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇದೊಂದು ಮೈಲಿಗಲ್ಲಾಗಲಿದ್ದು ಬೆಳವಣಿಗೆಗೆ ಹೆಚ್ಚಿನ ನೆರವು ನೀಡಲಿದೆ. ಮೆಕ್ಸಿಕೋ, ಫಿಜಿ, ಕೀನ್ಯಾದ ಪ್ರವಾಸಿಗರಿಗೂ ಇ-ವೀಸಾ ನೀಡಲಾಗುವುದು ಎಂದು ಶರ್ಮಾ ತಿಳಿಸಿದ್ದಾರೆ.

ವೀಸಾ ನೀಡಿಕೆ ಸಂಬಂಧ ಎಲ್ಲ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ದೇಶದ 9 ವಿಮಾನ ನಿಲ್ದಾಣಗಳಲ್ಲಿ ಇ-ವೀಸಾ ನೀಡಿಕೆ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ದೆಹಲಿ, ಮುಂಬೈ, ಚೆನ್ನೈ, ಹೈದ್ರಾಬಾದ್, ಕೊಲ್ಕತ್ತಾ, ಬೆಂಗಳೂರು, ಕೊಚ್ಚಿ, ತಿರುವನಂತಪುರ ಮತ್ತು ಗೋವಾ ವಿಮಾನ ನಿಲ್ದಾಣಗಳಲ್ಲಿ ಅಳವಡಿಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.[ಒಂದೇ ವೀಸಾದಡಿ ಇಂಗ್ಲೆಂಡ್-ಐರ್ಲೆಂಡ್ ಪ್ರವಾಸ ಭಾಗ್ಯ]

ವೀಸಾ ಪಡೆಯುವುದು ಹೇಗೆ?
ಎಲೆಕ್ಟ್ರಾನಿಕ್ ವೀಸಾ ಪಡೆಯುವ ವಿಧಾನ ತುಂಬಾ ಸರಳವಾಗಿದೆ. ಸರ್ಕಾರ ಸೂಚಿಸಿದ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಿದ 96 ಗಂಟೆಯೊಳಗಾಗಿ ವೀಸಾ ಕೈ ಸೇರುವುದು. ಸರ್ಕಾರದ ನಿರ್ದೇಶನದ ಮೇರೆಗೆ ಪಟ್ಟಿಗೆ ಇನ್ನಷ್ಟು ದೇಶಗಳು ಸೇರ್ಪಡೆಯಾಗುವ ನಿರೀಕ್ಷೆಯಿದೆ. ಆದರೆ ಪಾಕಿಸ್ತಾನ, ಅಪಘಾನಿಸ್ತಾನ, ಸೂಡಾನ್, ಇರಾನ್ , ಇರಾಕ್ ನಂಥ ದೇಶಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+