ಜರ್ಮನಿ & ರಷ್ಯಾ ನಡುವಿನ ಸ್ನೇಹ ಸಂಬಂಧಕ್ಕೆ ಎಳ್ಳುನೀರು!

ಬರ್ಲಿನ್: ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಿಸಿದ ಬಳಿಕ ಜರ್ಮನಿ ಹಾಗೂ ರಷ್ಯಾ ನಡುವಿನ ಸಂಬಂಧ ಹಾಳಾಗಿ ಹೋಗಿತ್ತು. ಈಗ ಉಳಿದ ಅಲ್ಪಸ್ವಲ್ಪ ಸ್ನೇಹಕ್ಕೂ ಜರ್ಮನಿ ಎಳ್ಳುನೀರು ಬಿಟ್ಟಿದ್ದು, ಜರ್ಮನಿಯಲ್ಲಿನ ರಾಯಭಾರ ಕಚೇರಿ ಮುಚ್ಚಿ ಅಂತಾ ರಷ್ಯಾಗೆ ಜರ್ಮನಿ ಆದೇಶ ನೀಡಿದೆ. ಈ ಮೂಲಕ 2ನೇ ಮಹಾಯುದ್ಧದ ನಂತರ ಜರ್ಮನಿ ಮತ್ತು ರಷ್ಯಾ ಸಂಬಂಧ ಭೀಕರವಾಗಿ ಹಳಸಿ ಹೋಗಿದೆ.

ಯುರೋಪ್ ದೇಶಗಳ ಪೈಕಿ ರಷ್ಯಾ ಜೊತೆಗೆ ಹೆಚ್ಚಿನ ಸಂಬಂಧ ಹೊಂದಿದ್ದು ಜರ್ಮನಿ ಮಾತ್ರ. ಏಕೆಂದರೆ ರಷ್ಯಾದಿಂದಲೇ ಜರ್ಮನಿ ತನಗೆ ಅಗತ್ಯವಿರುವ ತೈಲ ಹಾಗೂ ಗ್ಯಾಸ್ ತರಿಸಿಕೊಳ್ಳುತ್ತಿತ್ತು. ಒಂದು ಲೆಕ್ಕಾಚಾರದ ಪ್ರಕಾರ ಇಡೀ ಯುರೋಪ್ ದೇಶಗಳ ಪೈಕಿ ಜರ್ಮನಿಯೇ ರಷ್ಯಾ ಬಳಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ತೈಲ ಪಡೆಯುತ್ತಿದ್ದ ದೇಶ. ಆದರೆ ಉಕ್ರೇನ್‌ ವಿರುದ್ಧ ರಷ್ಯಾ ಯುದ್ಧಕ್ಕೆ ನಿಂತ ನಂತರ ಎರಡೂ ದೇಶಗಳ ಮಧ್ಯೆ ವ್ಯಾಪಾರ & ವ್ಯವಹಾರ ಕಟ್ ಆಗಿತ್ತು. ಈಗ ದೂತವಾಸ ಕಚೇರಿಯನ್ನೂ ಮುಚ್ಚಿಕೊಂಡು ಹೋಗಿ ಅಂತಾ ಪುಟಿನ್ ಆಡಳಿತಕ್ಕೆ ಜರ್ಮನಿ ಆದೇಶ ನೀಡಿದೆ.

Germany orders Russia

4 ಕಚೇರಿ ಮುಚ್ಚುವಂತೆ ಖಡಕ್ ಆದೇಶ!

ಜರ್ಮನಿಯಲ್ಲಿ ರಷ್ಯಾ ಒಟ್ಟು 4 ದೂತವಾಸ ಕಚೇರಿ ಹೊಂದಿದ್ದು, ಎಲ್ಲವನ್ನೂ ಮುಚ್ಚುವಂತೆ ಜರ್ಮನಿ ಇದೀಗ ಖಡಕ್ ಆದೇಶ ನೀಡಿದೆ. ಈ ಮೂಲಕ ಮೊದಲೇ ಹಳಸಿ ಹೋಗಿದ್ದ ಜರ್ಮನಿ ಮತ್ತು ರಷ್ಯಾ ಸಂಬಂಧಕ್ಕೆ ಬೆಂಕಿ ಹಚ್ಚಿದಂತಾಗಿದೆ. ಇದು ಪುಟಿನ್ ನೇತೃತ್ವದ ರಷ್ಯಾ ಸರ್ಕಾರಕ್ಕೆ ಸಿಕ್ಕಾಪಟ್ಟೆ ಕೋಪ ಕೂಡ ತರಿಸಿದೆ. ಅಲ್ಲದೆ ಭವಿಷ್ಯದಲ್ಲಿ ಜರ್ಮನಿಗೆ ರಷ್ಯಾ ಅಪಾಯ ತಂದೊಡ್ಡುವ ಭಯ ಕೂಡ ಶುರುವಾಗಿದೆ. ಉಕ್ರೇನ್ ಮೇಲಿ ರಷ್ಯಾ ಸೇನೆ ತನ್ನ ದಾಳಿಯನ್ನ ವಿಪರೀತ ಮಾಡಿದ ಹಿನ್ನೆಲೆಯಲ್ಲಿ ಜರ್ಮನಿ ಈ ನಿರ್ಧಾರ ಪ್ರಕಟಿಸಿದೆ ಎನ್ನಲಾಗಿದೆ.

ಹಿಟ್ಲರ್ ಪಡೆಗೆ ಬುದ್ಧಿ ಕಲಿಸಿದ್ದೇ ರಷ್ಯಾ

ಹೌದು, 2ನೇ ಮಹಾಯುದ್ಧದಲ್ಲಿ ಅಮೆರಿಕ ಮತ್ತು ರಷ್ಯಾ ನೇತೃತ್ವದ ಮಿತ್ರಪಡೆಗಳು ಗೆಲುವು ಕಾಣಲು ಪ್ರಮುಖ ಕಾರಣ ಇದೇ ರಷ್ಯಾ. ಅಂದಿನ ಸ್ಟಾಲಿನ್ ಸರ್ಕಾರ ಖಡಕ್ ಆಗಿ ಜರ್ಮನಿಯ ಹಿಟ್ಲರ್ ಸೇನೆ ವಿರುದ್ಧ ಹೋರಾಡಿತ್ತು. ಒಳ್ಳೆ ಪ್ಲ್ಯಾನ್ ಮಾಡಿ ಜರ್ಮನಿ ಸೇನೆಯನ್ನ ಬಗ್ಗುಬಡಿದು 2ನೇ ಮಹಾಯುದ್ಧದಲ್ಲಿ ಗೆಲುವು ಸಾಧಿಸಿತ್ತು. ಆದರೆ ನಂತರ ಜರ್ಮನಿ ಮತ್ತು ರಷ್ಯಾ ನಡುವೆ ಸಂಬಂಧ ಸುಧಾರಿಸಿತ್ತು. ಈಗ ಮತ್ತೊಮ್ಮೆ ಎರಡೂ ರಾಷ್ಟ್ರಗಳ ಮಧ್ಯೆ ಬೆಂಕಿ ಹೊತ್ತಿದೆ. ಈ ಕಿಚ್ಚಿಗೆ ಕಾರಣ ಉಕ್ರೇನ್ ಯುದ್ಧ ಅನ್ನುವುದೇ ದುರಂತದ ಸಂಗತಿ.

Germany orders Russia

ನ್ಯಾಟೋ ಸೇನೆ ಒಗ್ಗಟ್ಟಿನ ಮಂತ್ರ

ರಷ್ಯಾ ವಿರುದ್ಧ ನ್ಯಾಟೋ ರಾಷ್ಟ್ರಗಳು ಕಾಲು ಕೆರೆದುಕೊಂಡು ಜಗಳಕ್ಕೆ ನಿಂತಿವೆ. ಜರ್ಮನಿ ಕೂಡ ಇದೇ ನ್ಯಾಟೋ ಕಂಟ್ರಿ ಲೆಕ್ಕದಲ್ಲೇ ಬರುತ್ತದೆ. ರಷ್ಯಾ & ಉಕ್ರೇನ್ ವಾರ್ ಶುರುವಾಗಿ 461 ದಿನ ಉರುಳಿದೆ, ಆದರೂ ಯುದ್ಧ ನಿಲ್ಲುತ್ತಿಲ್ಲ. ಬದಲಾಗಿ ಈ ಎರಡೂ ದೇಶಗಳ ನಡುವೆ ದ್ವೇಷ ಹೆಚ್ಚಾಗುತ್ತಲೇ ಬಂದಿದೆ. ಹೀಗಾಗಿ ರಷ್ಯಾ & ಉಕ್ರೇನ್ ಯುದ್ಧ (Russia Ukraine War) ಮತ್ತಷ್ಟು ವಿನಾಶಕಾರಿ ಆಗುತ್ತಿದೆ. ಹಾಗೇ ಜರ್ಮನಿ ಸೇನೆ ಉಕ್ರೇನ್‌ಗೆ ಯುದ್ಧದಲ್ಲಿ ಪರೋಕ್ಷ ಸಹಾಯ ಮಾಡುತ್ತಾ, ರಷ್ಯಾ ಸೋಲಿಗೆ ಕಾದು ಕುಳಿತಿದೆ. ಈ ಸಂದರ್ಭದಲ್ಲಿ ರಷ್ಯಾ ಜೊತೆಗಿನ ಸ್ನೇಹವನ್ನೂ ಕಟ್ ಮಾಡಿರುವುದು ಕುತೂಹಲದ ಸಂಗತಿ.

ಉಕ್ರೇನ್ ಜೊತೆ ಅಮೆರಿಕ ದೋಸ್ತಿ!

ಅಮೆರಿಕ ಶತ್ರು ರಷ್ಯಾ ಬಗ್ಗುಬಡಿಯಲು ಎಲ್ಲ ಅಸ್ತ್ರಗಳನ್ನ ಪ್ರಯೋಗಿಸುತ್ತಾ ಬಂದಿದೆ. ಅದ್ರಲ್ಲಿ ಪರೋಕ್ಷವಾಗಿ ಉಕ್ರೇನ್‌ಗೆ ಸಹಾಯ ಮಾಡುವ ವಿಧಾನ ಕೂಡ ಸೇರಿದೆ. ಹೀಗೆ ಉಕ್ರೇನ್‌ಗೆ ಅಮೆರಿಕ ದಾನ ನೀಡಿದ ಗಿಫ್ಟ್ ಪೈಕಿ 'ಯುಎಸ್-ಮೇಡ್ ಪೇಟ್ರಿಯಾಟ್ ಮಿಸೈಲ್ ಡಿಫೆನ್ಸ್' (US-made Patriot missile defense) ಕೂಡ ಇದೆ. ಅಸ್ತ್ರದ ಮೂಲಕ ಕ್ಷಿಪಣಿ ನಿರೋಧಕ ವ್ಯವಸ್ಥೆ ಹೊಂದಬಹುದು & ಶತ್ರುಗಳ ಕ್ಷಿಪಣಿ ಹೊಡೆದು ಹಾಕುವುದು ಕೂಡ ಸುಲಭ. ಮತ್ತೊಂದ್ಕಡೆ ನ್ಯಾಟೋ ರಾಷ್ಟ್ರ ಜರ್ಮನಿ ಕೂಡ ಉಕ್ರೇನ್‌ಗೆ ಬೇಕಾದ ಅಸ್ತ್ರಗಳನ್ನ ಅಮೆರಿಕದ ಆದೇಶದ ಹಿನ್ನೆಲೆಯಲ್ಲಿ ರವಾನೆ ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+