Robot: ಮಿತಿ ಮೀರಿದ ರೋಬೋಟ್ ವರ್ತನೆ! 16 ವರ್ಷದ ಬಾಲಕಿಗೆ ಅಸಭ್ಯ ಸ್ಪರ್ಶ, ಪೊಲೀಸ್ ವಶಕ್ಕೆ

German Robot: ನಗರದ ಪ್ರಮುಖ ಬೀದಿಗಳಲ್ಲಿ, ಫುಡ್ ಸ್ಟ್ರೀಟ್, ಮಾಲ್‌ಗಳ ಮುಂದೆ ಜನರನ್ನು ಶೇಕ್ ಹ್ಯಾಂಡ್ ಕೊಟ್ಟು ರಂಜಿಸುತ್ತಿದ್ದ ರೋಬೋಟ್ (ಯಂತ್ರಮಾನವ) ಇದೀಗ ಅನುಚಿತವಾಗಿ ವರ್ತಿಸಿದ ಕಾರಣಕ್ಕೆ ಸುದ್ದಿಯಾಗಿದೆ. 16 ವರ್ಷದ ಬಾಲಕಿಯೊಬ್ಬಳನ್ನು ಅಸಭ್ಯವಾಗಿ ಸ್ಪರ್ಶಿಸಿದ ಘಟನೆ ನಡೆದಿದ್ದು, ಪೊಲೀಸರು ರೋಬೋಟ್ ವಶಕ್ಕೆ ಪಡೆದ ಘಟನೆ ಜರ್ಮನ್ ನಲ್ಲಿ ನಡೆದಿದೆ. ಸದ್ಯ ವಿಶ್ವದ ವಿವಿಧ ದೇಶಗಳು ಜರ್ಮನ್‌ ನತ್ತ ನೋಡುವಂತೆ, ರೋಬೋಟ್ ಕುರಿತು ಮತ್ತಷ್ಟು ವಿಷಯಗಳನ್ನು ಗಮನಿಸುವಂತಾಗಿದೆ.

ತನಿಖೆ ಆರಂಭಿಸಿರುವ ಪೊಲೀಸರು ಈ ರೋಬೋಟ್ ಅನ್ನು ಯಾರೋ ಕೊಂಚ ದೂರದಿಂದ ನಿಯಂತ್ರಿಸಿಸುತ್ತಿದ್ದಾರೆ ಎಂದು ಶಂಕಿಸಿದ್ದಾರೆ. ಇಬ್ಬರು ಯುವಕರ ವಿರುದ್ಧ ಜರ್ಮನ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

German Robot Detained

ಕಿರುಚಿ ಓಡಿದ ಬಾಲಕಿ!

ಜರ್ಮನ್ ನ ಕೊಲೊನ್ (Cologne) ನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಫುಡ್ ಸ್ಟ್ರೀಟ್‌ನಲ್ಲಿ ಈ ರೋಬೋಟ್ ಎಂದಿನಂತೆ ಸಾಮಾನ್ಯವಾಗಿರದೇ, 16 ವರ್ಷದ ಬಾಲಕಿಯನ್ನು ಹಿಂದಿನಿಂದ ಅಸಭ್ಯವಾಗಿ ಸ್ಪರ್ಶಿಸಿದೆ. ಇದನ್ನು ಕಂಡು ಬಾಲಕಿ ಆಘಾತಕ್ಕೊಳಗಾಗಿದ್ದಾರೆ. ಕಿರುಚಿಕೊಂಡು ಅಲ್ಲಿಂದ ದೂರು ಹೋಗಿದ್ದಾಳೆ. ಬಳಿಕ ಆಕೆ ಹತ್ತಿರ ಕೊಲೊನ್ ಪೊಲೀಸರಿಗೆ ತಿಳಿಸಿ, ದೂರು ನೀಡಿದ್ದಾಳೆ.

3.9 ಅಡಿ ಎತ್ತರದ ರೋಬೋಟ್

ಸ್ಥಳಕ್ಕೆ ಬಂದ ನಾರ್ತ್ ರೈನ್ ವೆಸ್ಟ್‌ಫಾಲಿಯಾ ಪೊಲೀಸರ ಪ್ರಕಾರ, ಶನಿವಾರ ರಾತ್ರಿ (ಸ್ಥಳೀಯ ಸಮಯ ರಾತ್ರಿ 11 ಗಂಟೆ/23:00) ಬಾಲಕಿ ತನ್ನ ಸ್ನೇಹಿತರೊಂದಿಗೆ ಇಲ್ಲಿಗೆ ಬಂದಿದ್ದಾಳೆ. 120 ಸೆಂ.ಮೀ (3.9 ಅಡಿ) ಎತ್ತರದ ಈ ರೋಬೋಟ್ ಆಕೆಯ ಹಿಂಭಾಗದಿಂದ ಬಂದು ಈ ಕೃತ್ಯ ಎಸಗಿದೆ. ಇಲ್ಲಿನ ಫಾಸ್ಟ್ ಫುಡ್‌ ಮಳಿಗೆ ಮುಂದೆ ಈ ಘಟನೆ ನಡೆದಿದೆ ಎಂದ ತಿಳಿಸಿದರು.

ಈ ರೋಬೋಟ್‌ನ ಮಾಲೀಕರು ಇಬ್ಬರು ಯುವಕರಾಗಿದ್ದಾರೆ. ಇಬ್ಬನಿಗೆ 16 ವರ್ಷದ ಬಾಲಕ ಮತ್ತೊಬ್ಬ 19 ವರ್ಷದವನಿಗಾಗಿ ಹುಡುಕಾಟ ನಡೆದಿದೆ. ಅಲ್ಲದೇ ಬಾಲಕಿಯೊಂದಿಗೆ ವರ್ತಿಸಿದ ಘಟನೆಯ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡಿದ್ದಾರೆ. ಅದಕ್ಕೆ ಬಂದ ಕಾಮೆಂಟ್‌ಗಳನ್ನು ಗಮನಿಸಿ ತನಿಖೆ ಚುರುಕುಗೊಳಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರಿಂದ ಮೊಬೈಲ್, ರೋಬೋಟ್ ವಶಕ್ಕೆ

ಬಾಲಕಿ ತುರ್ತು ಸಂಖ್ಯೆಗೆ ಕರೆ ಮಾಡುತ್ತಿದ್ದಂತೆ ಕೆಲವೇ ಕ್ಷಣಗಳಲ್ಲಿ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಅಷ್ಟರಲ್ಲಾಗಲೇ ರೋಬೋಟ್ ನಿಯಂತ್ರಿಸುತ್ತಿದ್ದ ಇಬ್ಬರು ಆರೋಪಿಗಳು ಘಟನಾ ಸ್ಥಳದಿಂದ ಒಂದು ಬ್ಲಾಕ್ ದೂರದಲ್ಲಿ ಕಾರಿನಲ್ಲಿ ಬಂಗಾರ ಬಣ್ಣದ, ಮೀಸೆ, ಕೊರಳಲ್ಲಿ ಚೈನ್ ಮತ್ತು ಬನಿಯನ್ ಹಾಕಿರುವ ರೋಬೋಟ್ ಮತ್ತು ಮೊಬೈಲ್‌ಗಳನ್ನು ಇಟ್ಟಿದ್ದಾರೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಪೊಲೀಸರು ಕಾರನ್ನು ತಡಕಾಡಿ ರೋಬೋಟ್, ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಮೊಬೈಲ್‌ಗಳನ್ನು ಬಳಸಿಯೇ ರೋಬೋಟ್ ಅನ್ನ ನಿಯಂತ್ರಿಸಲಾಗುತ್ತಿತ್ತು. ಅವರ ಈ ಕೃತ್ಯ ಎಸಗಿದ್ದಾರೆ ಎಂದು ಅನುಮಾನಿಸಿದ್ದಾರೆ. ಇದರ ಹಿಂದೆ ದುರುದ್ದೇಶ ಇತ್ತಾ ಎಂದೆಲ್ಲ ಆಯಾಮಗಳಲ್ಲಿ ತನಿಖೆ ಕೈಗೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+