ಇಂದು ಪಾಕಿಸ್ತಾನ ಚುನಾವಣೆ: ಎಲ್ಲೆಲ್ಲೂ ಬಿಗಿಬಂದೋಬಸ್ತ್
Recommended Video

ಇಸ್ಲಾಮಾಬಾದ್, ಜುಲೈ 25: ಇಡೀ ವಿಶ್ವದ ಕುತೂಹಲವನ್ನೂ ಕೆರಳಿಸಿರುವ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯ ಮತದಾನ ಪ್ರಕ್ರಿಯೆ ಇಂದು(ಜು.25) ನಡೆಯಲಿದೆ.
ಚುನಾವಣೆಯ ಹಿನ್ನೆಲೆಯಲ್ಲಿ ಪಾಕಿಸ್ತಾನದಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ನಿನ್ನೆ(ಜು.24) ಬಹಿರಂಗ ಪ್ರಚಾರ ಅಂತ್ಯಗೊಂಡಿತ್ತು. ಕಳೆದ ಒಂದು ತಿಂಗಳ ಅವಧಿಯಲ್ಲೇ ಪ್ರಚಾರದ ಸಮಯದಲ್ಲಿ ಹಲವೆಡೆ ಹಿಂಸಾಚಾರದ ಘಟನೆಗಳು ವರದಿಯಾಗಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ಪಾಕಿಸ್ತಾನದ ಮಾಜಿ ನಾಯಕ, ಪಿಟಿಐ(ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಹಾಗೂ ಪಿಎಂಎಲ್ ಎನ್ ಪಕ್ಷದ ನವಾಜ್ ಷರೀಫ್ ಅವರ ಸೋದರ ಶಹಬಾಜ್ ಶರೀಫ್ ಅವರ ವಿರುದ್ಧ ನೇರಾನೇರ ಸ್ಪರ್ಧೆ ನಿರೀಕ್ಷಿಸಲಾಗಿದೆ.

ಕೆಳಮನೆಯಲ್ಲಿ 342 ಸ್ಥಾನಗಳಿದ್ದರೆ ನೇರವಾಗಿ ಚುನಾವಣೆ ನಡೆಯುವುದು 272 ಸ್ಥಾನಗಳಿಗೆ ಮಾತ್ರ. ಇಷ್ಟು ಸ್ಥಾನಗಳ ಪೈಕಿ 141 ಸ್ಥಾನಗಳು ಪಾಕಿಸ್ತಾನದಲ್ಲಿರುವ ಪಂಜಾಬ್ ಪ್ರಾಂತ್ಯದಲ್ಲೇ ಬರುತ್ತದೆ. ಇನ್ನು ಸಿಂಧ್ ಪ್ರಾತ್ಯದಲ್ಲಿ 61, ಖೈಬರ್ ಪಖ್ತುನ್ವಾ 39, ಬಲೂಚಿಸ್ತಾನ್ 16, ಎಫ್ ಎಟಿಎ (ಫತಾ) 12, ರಾಜಧಾನಿ (ಇಸ್ಲಾಮಾಬಾದ್ ಭಾಗಕ್ಕೆ) 3 ಸ್ಥಾನಗಳಿವೆ.
17000 ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗುವ ಮತದಾನ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಸುಮಾರು 220 ದಶಲಕ್ಷ ಬ್ಯಾಲೆಟ್ ಪೇಪರ್ ಗಳನ್ನು ಚುನಾವಣೆಗೆ ಬಳಸಲಾಗುತ್ತಿದೆ.
80,0000 ಕ್ಕೂ ಹೆಚ್ಚು ಸೇನಾ ಸಿಬ್ಬಂದಿಗಳನ್ನು ನೇಮಿಸಿ, ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ.












Click it and Unblock the Notifications