ರಷ್ಯಾ ಆಸ್ತಿ ಖತಂ ಮಾಡಲು ಪಾಶ್ಚಿಮಾತ್ಯ ದೇಶಗಳ ಐಡಿಯಾ?
ಹೇಗಾದ್ರೂ ಮಾಡಿ ರಷ್ಯಾ ವಿರುದ್ಧ ಘೋರ ಕ್ರಮ ಕೈಗೊಳ್ಳಬೇಕು, ಈ ಮೂಲಕ ಬುದ್ಧಿಯ ಕಲಿಸಬೇಕು ಅನ್ನೋದು ಪಾಶ್ಚಿಮಾತ್ಯ ದೇಶಗಳ ಐಡಿಯಾ. ಇದೇ ಕಾರಣಕ್ಕೆ ಅಗತ್ಯ ಇರುವ ಎಲ್ಲಾ ತಂತ್ರಗಳನ್ನ ಮಾಡುತ್ತಿವೆ ಪಾಶ್ಚಿಮಾತ್ಯ ದೇಶಗಳು. ಅದರಲ್ಲೂ ಅಮೆರಿಕ ಸೇರಿದಂತೆ ಯುರೋಪ್ ದೇಶಗಳು ರಷ್ಯಾ ದೇಶವನ್ನು ಮುಳುಗಿಸಲು ಹೊಸ ಐಡಿಯಾ ಮಾಡುತ್ತಿವೆ. ಆ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ರಷ್ಯಾ ಯಾವಾಗ ಉಕ್ರೇನ್ ವಿರುದ್ಧ ಯುದ್ಧ ಸಾರಿತ್ತೋ ಅಂದಿನಿಂದ ಜಗತ್ತಿನಲ್ಲಿ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿದೆ. ಯಾಕಂದ್ರೆ ರಷ್ಯಾ ರೀತಿಯ ಒಂದು ಬಲಿಷ್ಠ ದೇಶ ದಿಢೀರ್ ಉಕ್ರೇನ್ ವಿರುದ್ಧ ಯುದ್ಧ ಸಾರಿದ್ದು ಯುರೋಪ್ ದೇಶಗಳನ್ನು ಕಂಗೆಡಿಸಿತ್ತು. ಅಲ್ಲದೆ ಈ ವಿಚಾರ ಅಮೆರಿಕದ ನಿದ್ದೆಗೆಡಿಸಿದೆ. ಇದೇ ಕಾರಣಕ್ಕೆ ಉಕ್ರೇನ್‌ಗೆ ಲಕ್ಷ ಲಕ್ಷ ಕೋಟಿ ರೂಪಾಯಿ ನೆರವು ನೀಡಿತ್ತು ದೊಡ್ಡಣ್ಣ ಅಮೆರಿಕ.

ಅಮೆರಿಕ ಮಾತ್ರವಲ್ಲದೆ, ಯುರೋಪ್ ದೇಶಗಳು ಕೂಡ ಸಾವಿರಾರು ಕೋಟಿ ರೂಪಾಯಿಯ ನೆರವು ನೀಡಿವೆ. ಈ ಮೂಲಕ ಉಕ್ರೇನ್‌ಗೆ ಬೆನ್ನೆಲುಬಾಗಿ ನಿಲ್ಲೋಕೆ ಪ್ರಯತ್ನ ಮಾಡುತ್ತಿವೆ. ಹೀಗಿದ್ದರೂ ಉಕ್ರೇನ್ ಮಾತ್ರ ರಷ್ಯಾ ವಿರುದ್ಧ ಧ್ವನಿ ಎತ್ತಲು ಆಗುತ್ತಿಲ್ಲ. ಹೀಗಾಗಿ ರಷ್ಯಾಗೆ ಬೇರೆ ರೀತಿಯಲ್ಲಿ ಶಾಕ್ ನೀಡಲು ಮುಂದಾಗಿದ್ದಾರೆ ಪಾಶ್ಚಿಮಾತ್ಯ ದೇಶಗಳ ನಾಯಕರು.
ರಷ್ಯಾ ಸೇನೆಗೆ ಆಘಾತಕಾರಿ ಸುದ್ದಿ?
2 ವರ್ಷಗಳ ಹಿಂದೆ ಶುರುವಾದ ರಷ್ಯಾ & ಉಕ್ರೇನ್ ಯುದ್ಧ, ಜಗತ್ತಿನ ಬೆನ್ನಿಗೆ ಚೂರಿ ಹಿರಿದಂತೆ ಕಾಣುತ್ತಿದೆ. ಯಾಕಂದ್ರೆ ಪ್ರತಿದಿನ ಒಂದಲ್ಲ ಒಂದು ಸಮಸ್ಯೆಯ ಈ ಯುದ್ಧವು ಸೃಷ್ಟಿ ಮಾಡ್ತಿದೆ. ಹೀಗೆ ಪರದಾಟ ಕೂಡ ಜಾಸ್ತಿ ಆಗಿದ್ದು ಯಾವ ಕ್ಷಣದಲ್ಲಿ ಏನಾಗುತ್ತೆ? ಅನ್ನೋದೇ ಗೊತ್ತಾಗ್ತಿಲ್ಲ. ಇನ್ನು ರಷ್ಯಾ ಸೇನೆ ಉಕ್ರೇನ್ ವಿರುದ್ಧ ಕೆಂಡವಾಗಲು ಬಲವಾದ ಕಾರಣವೂ ಇದ್ದು, ಯಾವಾಗ ಅಮೆರಿಕ ಪರೋಕ್ಷವಾಗಿ ಉಕ್ರೇನ್‌ಗೆ ಸಹಾಯ ಮಾಡುತ್ತಿತ್ತೋ ಆಗಲೇ ಉಕ್ರೇನ್ ಸೇನೆ ಗ್ರಹಚಾರ ಕೆಟ್ಟಿತ್ತು. ಹೀಗೆ ಅಮೆರಿಕ ವಿರುದ್ಧ ರೊಚ್ಚಿಗೆದ್ದು ರಷ್ಯಾ ಸೇನೆ ಉಕ್ರೇನ್ ವಿರುದ್ಧ ಅಟ್ಯಾಕ್ ಮಾಡುವಾಗ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ.

ರಷ್ಯಾ ಆಸ್ತಿ ಖತಂ ಆಗುತ್ತಾ?
ಜಾಗತಿಕ ಮಟ್ಟದಲ್ಲಿ ರಷ್ಯಾ ಭಾರಿ ದೊಡ್ಡ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿದೆ. ಅಲ್ಲದೆ ರಷ್ಯಾದಲ್ಲಿ ದೊಡ್ಡ ದೊಡ್ಡ ಶ್ರೀಮಂತರು ಇದ್ದು, ಅಮೆರಿಕ & ಯುರೋಪ್ ಸೇರಿ ಹಲವು ಪಾಶ್ಚಿಮಾತ್ಯ ದೇಶಗಳಲ್ಲಿ ರಷ್ಯಾ ಮೂಲದ ಶ್ರೀಮಂತರ ಆಸ್ತಿ ಇದೆ. ಆದರೆ ಇದೀಗ ಅವರ ಆಸ್ತಿಯನ್ನು & ರಷ್ಯಾ ಸೇನೆಗೆ ಯುದ್ಧಕ್ಕೆ ಸಹಾಯ ಮಾಡುತ್ತಿರುವವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಜಿ7 ದೇಶಗಳು ಚಿಂತನೆ ನಡೆಸುತ್ತಿವೆ. ಈ ಬಗ್ಗೆ, ಶೀಘ್ರದಲ್ಲೇ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications