3ನೇ ಮಹಾಯುದ್ಧ: ರಷ್ಯಾ ತೈಲ ಘಟಕ ಉಡಾಯಿಸಿದ ಉಕ್ರೇನ್?

ಕ್ರಿಮಿಯಾ: ರಷ್ಯಾ ಗಡಿ ಭಾಗದಲ್ಲಿ ದಿಢೀರ್ ಸೂಕ್ಷ್ಮ ಸ್ಥಿತಿ ನಿರ್ಮಾಣ ಆಗಿದೆ, ಉಕ್ರೇನ್ ವಿರುದ್ಧ ನಿನ್ನೆ ರಷ್ಯಾ ಭೀಕರ ವಾಯುದಾಳಿ ನಡೆಸಿ 25ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿದ ನಂತರ ಶಾಕ್ ಸಿಕ್ಕಿದೆ. ರಷ್ಯಾದ ಹಿಡಿತದಲ್ಲಿ ಇರುವ ಕ್ರಿಮಿಯಾ (Crimean) ಮೇಲೆ ಭೀಕರ ಬಾಂಬ್ ದಾಳಿ ನಡೆದಿದೆ. ರಷ್ಯಾಗೆ ಸೇರಿದ ತೈಲ ಘಟಕ ಧಗಧಗ ಹೊತ್ತಿ ಉರಿಯುತ್ತಿದೆ.

ಸೋಷಿಯಲ್ ಮೀಡಿಯದಲ್ಲಿ ಹರಿದಾಡುತ್ತಿರುವ ವಿಡಿಯೋಗಳು ಭಯಾಕನವಾಗಿವೆ. ರಷ್ಯಾ ಕಂಟ್ರೋಲ್‌ನಲ್ಲಿ ಇರುವ ಕ್ರಿಮಿಯಾ ಮೇಲೆ ಡ್ರೋನ್ ದಾಳಿ ನಡೆದಿದೆ ಎಂಬ ಮಾತು ಕೇಳಿಬರುತ್ತಿದೆ. ಇನ್ನೊಂದು ಕಡೆ ಉಕ್ರೇನ್ ಸೇನೆಯೇ ಈ ದಾಳಿ ನಡೆಸಿರಬಹುದು ಎಂಬ ಅನುಮಾನ ರಷ್ಯಾಗೆ ಕಾಡ್ತಿದೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ ರಷ್ಯಾದ ಅಧಿಕಾರಿಗಳು. ಮತ್ತೊಂದು ಕಡೆ ಇದು ಉಕ್ರೇನ್ ನಡೆಸಿರುವ ದಾಳಿ ಎಂಬುದು ಕನ್ಫರ್ಮ್ ಆದರೆ, ರಷ್ಯಾ ಕೂಡ ಭೀಕರ ದಾಳಿ ನಡೆಸುವ ಸಾಧ್ಯತೆ ಇದೆ.

Fuel Depot in Russia controlled Crimea got Huge Fire After a deadly Drone Strike

ರಷ್ಯಾ ಗಡಿಯಲ್ಲಿ ನೆಮ್ಮದಿಯೇ ಇಲ್ಲ

ಕಳೆದ 1 ವರ್ಷದಿಂದ ರಷ್ಯಾ ಗಡಿಯಲ್ಲಿ ನೆಮ್ಮದಿಯೇ ಇಲ್ಲ. ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ಮರುಕ್ಷಣವೇ ಇಲ್ಲಿನ ಜನರ ನೆಮ್ಮದಿ ಹಾರಿಹೋಗಿದೆ. ಪರಿಣಾಮ ಅಲ್ಲಿನ ಜನರು ಕಣ್ಣುಮುಚ್ಚಲು ಹಿಂದೆ-ಮುಂದೆ ಯೋಚಿಸುವ ಪರಿಸ್ಥಿತಿ ಇದೆ. ಯಾವ ಕ್ಷಣದಲ್ಲಿ ಏನಾಗುತ್ತೋ, ಯಾವ ಮಿಸೈಲ್ ಬಂದು ಬಡಿಯುತ್ತೋ ಎಂಬ ಭಯ ಕಾಡುತ್ತಿದೆ. ಈ ಹೊತ್ತಲ್ಲೇ ರಷ್ಯಾ ನೆಲದ ಮೇಲೆ ಭೀಕರ ದಾಳಿ ನಡೆದಿದೆ. ರಷ್ಯಾಗೆ ಸೇರಿದ ತೈಲ ಘಟಕ ಧಗಧಗನೆ ಹೊತ್ತಿ ಉರಿಯುತ್ತಿದ್ದು, ಬೆಂಕಿ ನಂದಿಸಲು ಹಲವು ಗಂಟೆಗಳ ಕಾಲ ಪರದಾಡಬೇಕಾಯಿತು.

ಲಕ್ಷಾಂತರ ಜನರು ಬಲಿ?

ನ್ಯಾಟೋ ಪಡೆಗಳ ಜೊತೆ ಸೇರಿ ರಷ್ಯಾಗೆ ಅಪಾಯ ಮಾಡುತ್ತಿದ್ದಾರೆ ಎಂಬ ಆರೋಪದಡಿ ರಷ್ಯಾ 1 ವರ್ಷದ ಹಿಂದೆ ಉಕ್ರೇನ್ ವಿರುದ್ಧ ಯುದ್ಧ ಆರಂಭಿಸಿತ್ತು. ಆದರೆ ಅದೇ ಯುದ್ಧ ಈಗ ಭೀಕರ ಪರಿಣಾಮ ಬೀರುತ್ತಿದೆ. ಒಂದು ಅಂದಾಜಿನ ಪ್ರಕಾರ ಸುಮಾರು 3 ಲಕ್ಷ 54 ಸಾವಿರಕ್ಕೂ ಹೆಚ್ಚು ಸೈನಿಕರು ಹಾಗೂ ಜನರು ಯುದ್ಧದಲ್ಲಿ ಗಾಯಗೊಂಡಿದ್ದಾರೆ ಅಥವಾ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹಾಗಾದರೆ ಈ ಅಂಕಿ ಅಂಶಗಳನ್ನೇ ಲೆಕ್ಕಹಾಕಿ ಹೇಳುವುದಾದರೆ ಉಕ್ರೇನ್-ರಷ್ಯಾ ಯುದ್ಧದ ಭೀಕರತೆ ತಿಳಿಯುತ್ತದೆ.

ಕ್ಷಿಪಣಿಗಳ ಮಳೆ ಸುರಿಸಿದ ರಷ್ಯಾ

ನಿನ್ನೆ ಮತ್ತೊಂದು ರೌಂಡ್ ಉಕ್ರೇನ್ ಮೇಲೆ ಭೀಕರ ದಾಳಿ ನಡೆಸಲು ರಷ್ಯಾ ಮುಂದಾಗಿದೆ. ಅದರಲ್ಲೂ ರಷ್ಯಾ ಟಾರ್ಗೆಟ್ ಉಕ್ರೇನ್ ರಾಜಧಾನಿ. ಹೀಗೆ ರಷ್ಯಾ ಉಡಾಯಿಸಿರುವ ಕ್ಷಿಪಣಿಗಳ ಪೈಕಿ ಎರಡು ಕ್ಷಿಪಣಿಗಳು ಕೀವ್‌ನ ದಕ್ಷಿಣ ಉಮಾನ್‌ ನಗರದ ಮೇಲೆ ಬಿದ್ದಿದೆ. ಅಲ್ಲಿರುವ 9 ಮಹಡಿ ಅಪಾರ್ಟ್‌ಮೆಂಟ್‌ಗೆ ತಗುಲಿ ಸುಮಾರು 25ಕ್ಕೂ ಹೆಚ್ಚು ಪ್ರಜೆಗಳು ಮೃತಪಟ್ಟಿದ್ದಾರೆ. ಈ ಪೈಕಿ 3 ಮಕ್ಕಳು ಕೂಡ ಸೇರಿದ್ದರು ಎಂಬುದೇ ದುರಂತದ ಸಂಗತಿ. ಇನ್ನೊಂದು ಕಡೆ ರಷ್ಯಾ ನೆಲದ ಮೇಲೂ ಈಗ ದಾಳಿ ನಡೆದಿರುವುದು ಪರಿಸ್ಥಿತಿಯನ್ನ ಇನ್ನಷ್ಟು ಕಗ್ಗಂಟಾಗಿಸಿದೆ.

ನಡುಗುತ್ತಿದ್ದಾರೆ ಉಕ್ರೇನ್ ಜನರು

ಒಂದೆಡೆ 3ನೇ ಮಹಾಯುದ್ಧದ ಮಾತುಗಳು ಮೊಳಕೆಯೊಡೆದು ಜಗತ್ತಿನ ಮೂಲೆ ಮೂಲೆಯಲ್ಲೂ ಆತಂಕ ಆವರಿಸಿದೆ. ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧ ಎಲ್ಲಿ 3ನೇ ಮಹಾಯುದ್ಧವಾಗಿ ಬದಲಾಗುತ್ತದೋ ಎಂಬ ಭಯ ಆಧುನಿಕ ಜಗತ್ತನ್ನು ಕಾಡುತ್ತಿದೆ. ಆದರೆ ಈ ಹೊತ್ತಲ್ಲೇ ರಷ್ಯಾ ಯುದ್ಧ ನಿಲ್ಲಿಸದೆ ನಿರಂತರವಾಗಿ ಉಕ್ರೇನ್ ಮೇಲೆ ದಾಳಿಯನ್ನ ಮಾಡುತ್ತಲೇ ಬಂದಿದೆ. ಈಗಿನ ಪರಿಸ್ಥಿತಿ ನೋಡಿದರೆ ರಷ್ಯಾ ಇನ್ನೂ ಹಲವು ಸುತ್ತಿನ ದಾಳಿ ನಡೆಸುವುದು ಪಕ್ಕಾ ಆಗಿದೆ. ರಷ್ಯಾ ದಾಳಿಯಿಂದ ಉಕ್ರೇನ್ ಪ್ರಜೆಗಳು ಬೆಚ್ಚಿಬಿದ್ದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+