FTX : ಕಾರ್ಪೊರೇಟ್ ನಿಯಂತ್ರಣದ ವೈಫಲ್ಯದಿಂದ ಎಫ್‌ಟಿಎಕ್ಸ್ ಅವನತಿ: ಹೊಸ ಸಿಇಒ ಜಾನ್ ರೇ

ಕಾರ್ಪೊರೇಟ್ ನಿಯಂತ್ರಣದ ಸಂಪೂರ್ಣ ವೈಫಲ್ಯದಿಂದಾಗಿ ಎಫ್‌ಟಿಎಕ್ಸ್ ಅವನತಿಯತ್ತ ಸಾಗಿದೆ ಎಂದು ಎಫ್‌ಟಿಎಕ್ಸ್ ಹೊಸ ಸಿಇಒ ಜಾನ್ ರೇ ಆರೋಪ ಮಾಡಿದ್ದಾರೆ. ಎಫ್‌ಟಿಎಕ್ಸ್‌ನ ಹೊಸ ಸಿಇಒ ಜಾನ್ ರೇ ಅವರು ಗುರುವಾರ ಯುಎಸ್ ನ್ಯಾಯಾಲಯದಲ್ಲಿ ಎಫ್‌ಟಿಎಕ್ಸ್ ಮಾಲೀಕ ಸ್ಯಾಮ್ ಬ್ಯಾಂಕ್‌ಮ್ಯಾನ್ ಫ್ರೈಡ್ ದಿವಾಳಿತನದಿಂದ ಎಫ್‌ಟಿಎಕ್ಸ್‌ ವೈಫಲ್ಯವಾಗಿದೆ ಎಂದು ದೂರಿದ್ದಾರೆ.

ಕ್ರಿಪ್ಟೋ ಎಕ್ಸ್‌ಚೇಂಜ್‌ನಲ್ಲಿ ದೋಷ ಕಂಡುಬಂದಿದೆ ಮತ್ತು ಕಾರ್ಪೊರೇಟ್ ನಿಯಂತ್ರಣದ ಕೊರತೆಯಿಂದ ಎಫ್‌ಟಿಎಕ್ಸ್ ಅಳಿವಿನಂಚಿಗೆ ತಲುಪಿದೆ ಎಂದು ಜಾನ್ ರೇ ಹೇಳಿದ್ದಾರೆ. ಇದಕ್ಕೆ ನೇರ ಹೊಣೆಗಾರ ಎಫ್‌ಟಿಎಕ್ಸ್ ಮಾಲೀಕ ಸ್ಯಾಮ್ ಬ್ಯಾಂಕ್‌ಮ್ಯಾನ್ ಫ್ರೈಡ್ ಎಂದು ರೇ ಆರೋಪಿಸಿದ್ದಾರೆ.

30 ವರ್ಷದ ಎಫ್‌ಟಿಎಕ್ಸ್ ಮಾಲೀಕ ಸ್ಯಾಮ್ ಬ್ಯಾಂಕ್‌ಮ್ಯಾನ್ ಫ್ರೈಡ್ ಎಫ್‌ಟಿಎಕ್ಸ್ ಎಂಬ ಕ್ರಿಪ್ಟೋ ಎಕ್ಸ್‌ಚೇಂಜ್ ಕಂಪನಿ ಸ್ಥಾಪಿಸಿ ವಂಡರ್ ಕಿಡ್ ಎನಿಸಿದ್ದ. ಬೈನಾನ್ಸ್ ಬಿಟ್ಟರೆ ಅತಿದೊಡ್ಡ ಕ್ರಿಪ್ಟೋ ಎಕ್ಸ್‌ಚೇಂಜ್ ಕಂಪನಿ ಅದಾಗಿತ್ತು. ಅದರ ಮೌಲ್ಯ 30 ಬಿಲಿಯನ್ ಡಾಲರ್ (2.4 ಲಕ್ಷ ಕೋಟಿ ರೂಪಾಯಿ) ಎನ್ನಲಾಗಿತ್ತು.

FTX downfall due to complete failure of regulation- CEO John Ray blames

ಆದರೆ, ಯಾವಾಗ ಬೈನಾನ್ಸ್ ಕಂಪನಿ ತನ್ನ ಸಮೀಪ ಸ್ಪರ್ಧಿ ಎಫ್‌ಟಿಎಕ್ಸ್ ಅನ್ನು ಖರೀದಿಸಲು ಮುಂದಾಯಿತೋ ಆಗ ಎಲ್ಲವೂ ಕುಸಿಯಲು ಆರಂಭವಾಯಿತು. ಎಫ್‌ಟಿಎಕ್ಸ್‌ನ ಕರ್ಮಕಾಂಡಗಳ ಬಗ್ಗೆ ವದಂತಿ ರೂಪದಲ್ಲಿ ಸುದ್ದಿಗಳು ಹರಡಲು ಆರಂಭವಾಗಿವೆ. ಎಫ್‌ಟಿಎಕ್ಸ್‌ನಿಂದ ಕ್ರಿಪ್ಟೋ ಹಣವನ್ನು ಲಪಟಾಯಿಸಲಾಗಿದೆ. ಅದರ ಅಂಗ ಸಂಸ್ಥೆಯಾದ ಅಲಾಮೆಡಾ ರೀಸರ್ಚ್ ಕಂಪನಿಗೆ ಫಂಡ್‌ಗಳನ್ನು ರವಾನಿಸಲಾಗಿದೆ ಎಂಬಂತಹ ಸುದ್ದಿ ಬಂದವು.

FTX downfall due to complete failure of regulation- CEO John Ray blames

ಎಫ್‌ಟಿಎಕ್ಸ್‌ನಲ್ಲಿ ತಮ್ಮ ಕ್ರಿಪ್ಟೋ ಹಣವನ್ನು ಜನರು ವಾಪಸ್ ಪಡೆಯಲು ಮುಗಿಬಿದ್ದರು. ಜನರ ಹಣ ಹಿಂದಿರುಗಿಸಲು ಆಗುತ್ತಿಲ್ಲ ಎಂದು ಎಫ್‌ಟಿಎಕ್ಸ್ ಹೇಳುತ್ತಿದೆ. ಫಂಡಿಂಗ್‌ಗಾಗಿ ಹತಾಶೆಯ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಯಾರೂ ಕೂಡ ಎಫ್‌ಟಿಎಕ್ಸ್‌ಗೆ ಫಂಡಿಂಗ್ ಕೊಡಲು ಮುಂದಾಗುತ್ತಿಲ್ಲ.ಪರಿಣಾಮವಾಗಿ, ಅಮೆರಿಕದಲ್ಲಿ ಕಾನೂನು ಕ್ರಮವನ್ನು ಎಫ್‌ಟಿಎಕ್ಸ್ ಎದುರಿಸಬೇಕಾಗುತ್ತದೆ. ಎಫ್‌ಟಿಎಕ್ಸ್ ಕೇಂದ್ರ ಕಚೇರಿ ಬಹಾಮಸ್‌ನಲ್ಲಿದೆ. ರಾಯಲ್ ಬಹಾಮಸ್ ಪೊಲೀಸ್ ಪಡೆ ಎಫ್‌ಟಿಎಕ್ಸ್‌ನ ಹಗರಣದ ತನಿಖೆ ನಡೆಸುತ್ತಿದೆ. ಅಮೆರಿಕದ ನ್ಯಾಯ ಮತ್ತು ಸೆಕ್ಯೂರಿಟಿ ಎಂಡ್ ಎಕ್ಸ್‌ಚೇಂಜ್ ಕಮಿಷನ್ ಇಲಾಖೆ ಕೂಡ ತನಿಖೆ ನಡೆಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+