ಯಶಸ್ವಿ ಜಿ20 ಶೃಂಗಸಭೆ ಮುಗಿಸಿ ಭಾರತದತ್ತ ಮೋದಿ

ಒಸಾಕಾ, ಜೂನ್ 29: ಜಪಾನ್‌ನ ಒಸಾಕಾದಲ್ಲಿ ನಡೆದ ಮಹತ್ವದ ಜಿ 20 ಶೃಂಗಸಭೆ ಮುಗಿಸಿ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಭಾರತಕ್ಕೆ ಹಿಂದಿರುಗಿದ್ದಾರೆ.

ಈ ಶೃಂಗಸಭೆಯಲ್ಲಿ ಮೋದಿ ಅವರು ಅಮೆರಿಕದೊಂದಿಗೆ ಮಹತ್ವವಾದ ದ್ವಿಪಕ್ಷೀಯ ಮಾತುಕತೆಯನ್ನು ಮುಗಿಸಿದ್ದು, ವ್ಯಾಪಾರದ ಸಂಬಂಧ ಎರಡು ರಾಷ್ಟ್ರಗಳ ನಡುವೆ ಇತ್ತೀಚೆಗೆ ಉಲ್ಬಣಿಸಿದ್ದ ಬಿಕ್ಕಟ್ಟುಗಳನ್ನು ನಿವಾರಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಚೀನಾ-ಅಮೆರಿಕ-ಭಾರತ ಮೂರು ದೇಶಗಳು ಸಹ ಸಭೆ ನಡೆಸಿ ಭಯೋತ್ಪಾದನೆ ವಿರುದ್ಧ ಹೋರಾಡುವ ನಿರ್ಣಯ ಪ್ರಕಟಿಸಿದೆ. ಅಲ್ಲದೆ ಮೋದಿ ಅವರು ವಿಶೇಷವಾಗಿ ಭಯೋತ್ಪಾದನೆ ವಿರುದ್ಧ ಸಂದೇಶವನ್ನು ನೀಡಿದ್ದಾರೆ.

Fruifull G20 summit for India, Modi leaves for India

ಆದರೆ ಶೃಂಗಸಭೆಯಲ್ಲಿ ಭಾರತವು, ಜಪಾನ್‌ ಮಂಡಿಸಿದ್ದ ಡಿಎಫ್‌ಎಫ್‌ಟಿ (ಡಾಟಾ ಫ್ರೀ ಫ್ಲೋ ಟ್ರಸ್ಟ್‌) ಇಂದ ಹೊರಗೆ ಉಳಿಯಲು ನಿರ್ಧರಿಸಿದ್ದು, ತನ್ನ ನಿಲುವನ್ನು ಭಾರತವು ಸಮರ್ಥಿಸಿಕೊಂಡಿದೆ.

ಶೃಂಗಸಭೆಯ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ, ಡಾಟಾ ಸಂಬಂಧಿಸಿದಂತೆ ನಿಯಮಗಳನ್ನು ವಿಶ್ವ ವ್ಯಾಪಾರ ಸಂಸ್ಥೆಯ ಅಡಿಯಲ್ಲಿ ರೂಪಿಸುವುದು, ಜಿ20 ಯಲ್ಲಿ ರೂಪಿಸುವುದಕ್ಕಿಂತಲೂ ಉತ್ತಮ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+