ಮತ್ತೆ ಫ್ರಾನ್ಸ್‌ನಲ್ಲಿ ಗುಂಡಿನ ಮೊರೆತ, ಬಾಂಬ್ ಸ್ಫೋಟ
ಪ್ಯಾರಿಸ್, ಜ. 8: ಫ್ರಾನ್ಸ್‌ನ ವಿಶ್ವವಿಖ್ಯಾತ ಪ್ರವಾಸಿ ಸ್ಥಳ ಪ್ಯಾರಿಸ್‌ನ ಚಾರ್ಲಿ ಹೆಬ್ಡೊ ಪತ್ರಿಕಾ ಕಚೇರಿ ಮೇಲೆ ಬುಧವಾರ ದಾಳಿ ನಡೆಸಿ 12 ಜನರ ಹತ್ಯೆಗೈದಿದ್ದ ಉಗ್ರರು, ಗುರುವಾರ ಮತ್ತೆ ಆರ್ಭಟ ಮುಂದುವರಿಸಿದ್ದಾರೆ.
ಪೊಲೀಸರು ಇಬ್ಬರು ಶಂಕಿತರ ಫೋಟೊ ಬಿಡುಗಡೆ ಮಾಡಿದ ಬೆನ್ನಲ್ಲಿಯೇ ಉಗ್ರರು ಆಟೋಮ್ಯಾಟಿಕ್ ರೈಫಲ್ ಮೂಲಕ ಪೊಲೀಸರ ಮೇಲೆ ಗುಂಡಿನ ಮಳೆಗರೆದಿದ್ದಾರೆ. ಈಸಂದರ್ಭ ಇಬ್ಬರು ಪೊಲೀಸರು ಗಂಭೀರ ಗಾಯಗೊಂಡಿದ್ದಾರೆ. [ತಾನಾಗಿಯೇ ಪೊಲೀಸ್ ಠಾಣೆಗೆ ಬಂದು ಶರಣೆಂದ ಉಗ್ರ]

ಇದರ ಬೆನ್ನಲ್ಲಿಯೇ ಫ್ರಾನ್ಸ್‌ನ ವಿಲ್ಲೆಫ್ರೆಂಚಿ-ಸುರ್-ಸಾವೊನ್ ನಗರದಲ್ಲಿರುವ ಲಿಯಾನ್ ಮಸೀದಿ ಪಕ್ಕದಲ್ಲಿರುವ ಕಬಾಬ್ ಅಂಗಡಿಯಲ್ಲಿ ಬಾಂಬ್ ಸ್ಫೋಟಗೊಂಡಿದೆ. ಅದೃಷ್ಟವಶಾತ್ ಈ ಸಂದರ್ಭ ಯಾರಿಗೂ ಗಾಯವಾಗಿಲ್ಲ. [ವ್ಯಂಗ್ಯಚಿತ್ರ ಪತ್ರಿಕಾ ಕಚೇರಿಯಲ್ಲಿ ಹತ್ಯಾಕಾಂಡ]
ಬುಧವಾರ ಚಾರ್ಲಿ ಹೆಬ್ಡೊ ಪತ್ರಿಕಾ ಕಚೇರಿ ಮೇಲೆ ಬುಧವಾರ ದಾಳಿ ನಡೆಸಿದ್ದ ಉಗ್ರರು 10 ಪತ್ರಕರ್ತರು ಹಾಗೂ ಇಬ್ಬರು ಪೊಲೀಸರು ಸೇರಿದಂತೆ ಒಟ್ಟು 12 ಜನರನ್ನು ಹತ್ಯೆಗೈದಿದ್ದರು.












Click it and Unblock the Notifications