ಫ್ರಾನ್ಸ್‌ ಗಲಭೆ: 300 ಕ್ಕೂ ಅಧಿಕ ಬಂಧನ, ಪರಿಸ್ಥಿತಿ ವಿಷಮದತ್ತ

ಪ್ಯಾರಿಸ್‌, ಡಿಸೆಂಬರ್ 08: ಫ್ರಾನ್ಸ್‌ ಗಲಭೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಪ್ಯಾರಿಸ್‌ ನಗರದಾದ್ಯಂತ ಬಿಗಿ ಮಿಲಿಟರಿ ಭದ್ರತೆ ಏರ್ಪಿಡಸಲಾಗಿದೆ.

ಸರ್ಕಾರದ ವಿರುದ್ಧ ಜನರು ಪ್ರಾರಂಭಿಸಿದ್ದ 'ಯೆಲ್ಲೋ ವೆಸ್ಟ್‌' (ಹಳದಿ ಕೋಟು) ಅಭಿಯಾನವು ಹಿಂಸಾ ರೂಪ ತಳೆದು ಕಾಳ್ಗಿಚ್ಚಿನಂತೆ ಹಬ್ಬಿದ ಕಾರಣ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಭಾರಿ ಹಾನಿಯಾಗಿದೆ. ಹಲವರು ಜೀವ ಕಳೆದುಕೊಂಡಿದ್ದಾರೆ.

ದೇಶದಾದ್ಯಂತ ಇಂಧನ ಬೆಲೆ ಹೆಚ್ಚಳವಾಗಿದ್ದ ಹುಟ್ಟಿಕೊಂಡ ಈ ಪ್ರತಿಭಟನೆ ಇನ್ನೂ ಬಿಸಿ ಕಳೆದುಕೊಂಡಿಲ್ಲ ಹಾಗಾಗಿ ದೇಶದಾದ್ಯಂತ ಪ್ರತಿಭಟನಾಕಾರರನ್ನು ತಡೆಯಲು 80000 ಪೊಲೀಸರನ್ನು ನಿಯೋಗಿಸಲಾಗಿದೆ. ಪ್ಯಾರಿಸ್ ನಗರ ಒಂದರಲ್ಲಿ ಸುಮಾರು 8000 ಪೊಲೀಸರನ್ನು ನಿಯೋಜಿಸಲಾಗಿದೆ.

France riots: 300 protesters arrest on saturday

ಯೆಲ್ಲೋ ವೆಸ್ಟ್‌ ಚಳವಳಿಯನ್ನು ಹತ್ತಿಕ್ಕಲು ಫ್ರಾನ್ಸ್‌ ಸರ್ಕಾರ ಭಾರಿ ಪ್ರಯತ್ನ ಮಾಡುತ್ತಿದ್ದು, ಶನಿವಾರ ಒಂದೇ ದಿನ 300 ಕ್ಕೂ ಅಧಿಕ ಜನರನ್ನು ಬಂಧಿಸಿದೆ. ಅದರಲ್ಲಿ ಹಲವರು ಮಾಸ್ಕ್‌, ಪೆಟ್ರೋಲ್ ಬಾಂಬ್, ಕಲ್ಲು, ಸುತ್ತಿಗೆಗಳನ್ನು ಹೊಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

France riots: 300 protesters arrest on saturday

ಪ್ರತಿಭಟನೆಯಲ್ಲಿ ನಿರತರಾಗಿರುವ ವಿರುದ್ಧ ಪೊಲೀಸರು ಯಾವುದೇ ಕರುಣೆ ತೋರುವುದಿಲ್ಲ ಎಂದು ಪೊಲೀಸ್ ಇಲಾಖೆ ಹೇಳಿದೆ. ಕಳೆದ ಮೂರು ವಾರಗಳಿಂದ ಪ್ರತಿಭಟನೆ ಹಿಂಸಾ ರೂಪಕ್ಕೆ ತಿರುಗಿರುವುದು ಪೊಲೀಸರಿಗೆ ಸರ್ಕಾರಕ್ಕೆ ತಲೆನೋವು ತರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+