ಇಸ್ರೇಲ್ ಮತ್ತು ಹಿಜ್ಬುಲ್ಲಾ ಬಡಿದಾಟಕ್ಕೆ ಬ್ರೇಕ್ ಹಾಕಲು ಅಮೆರಿಕ ಹಾಗೂ ಫ್ರಾನ್ಸ್ ಪರದಾಟ!
3ನೇ ಮಹಾಯುದ್ಧ ಬೇಡ ಅಂತಾ ಸುಮ್ಮನೆ ಇರುವ ಮನುಷ್ಯರಿಗೆ ಯುದ್ಧದ ರುಚಿ ತೋರಿಸಿ, ತೋರಿಸಿ ಮತ್ತೆ ಹಳ್ಳಕ್ಕೆ ಬೀಳುವಂತೆ ಮಾಡಲಾಗುತ್ತಿದೆ. 1ನೇ, 2ನೇ ಮಹಾಯುದ್ಧ ಯುರೋಪ್ ಖಂಡದಲ್ಲಿ ಆರಂಭವಾಗಿ, ಇಡೀ ಜಗತ್ತನ್ನೇ ವಿನಾಶದ ಅಂಚಿಗೆ ಕರೆದುಕೊಂಡು ಹೋಗಿದ್ದವು. ಆದರೆ ಈ ಬಾರಿ ಮಹಾಯುದ್ಧ ನಡೆದರೆ ಅದು ಮಧ್ಯಪ್ರಾಚ್ಯ ಭಾಗದಿಂದ ಎಂಬ ಆರೋಪ ಕೇಳಿಬರುತ್ತಿದೆ. ಯಾಕಂದ್ರೆ ಉಗುರಲ್ಲಿ ಹೋಗುವುದಕ್ಕೂ ಬಾಂಬ್ & ಮಿಸೈಲ್ ಮೂಲಕವೇ ಉತ್ತರ ನೀಡುತ್ತಿವೆ ಮಧ್ಯಪ್ರಾಚ್ಯ ದೇಶಗಳು. ಹೀಗೆ ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಅಮೆರಿಕ & ಫ್ರಾನ್ಸ್ ಏನು ಮಾಡಲು ಮುಂದಾಗಿವೆ ಗೊತ್ತಾ?
ಇಸ್ರೇಲ್‌ಗೆ ನೆಮ್ಮದಿಯೇ ಇಲ್ಲ, ಯಾಕಂದ್ರೆ ಇಸ್ರೇಲ್ ಒಂದಲ್ಲ ಒಂದು ಸಮಸ್ಯೆಗೆ ಸಿಲುಕುತ್ತಿದೆ, ಯಾಕಂದ್ರೆ ಗಾಜಾ ಪಟ್ಟಿ ಯುದ್ಧದೊಂದಿಗೆ ಹಿಜ್ಬುಲ್ಲಾ ಜತೆಗೂ ಕಿರಿಕ್ ಶುರುವಾಗಿದೆ. ಒಂದು ಕಡೆ ಲೆಬನಾನ್ ಮೂಲಕ ಹಿಜ್ಬುಲ್ಲಾ ಬಂಡುಕೋರರು ಇಸ್ರೇಲ್ ದೇಶದ ವಿರುದ್ಧ ಅಟ್ಯಾಕ್ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಇಸ್ರೇಲ್ ಕೂಡ ತನ್ನ ದಾಳಿಯನ್ನ ಮತ್ತಷ್ಟು ಹೆಚ್ಚು ಮಾಡುತ್ತಿದೆ. ಲೆಬನಾನ್ ದೇಶದ ನೂರಾರು ಜಾಗಗಳನ್ನು ಟಾರ್ಗೆಟ್ ಮಾಡಿ ಇಸ್ರೇಲ್ ದಾಳಿ ಮಾಡುತ್ತಿದೆ. ಹಿಜ್ಬುಲ್ಲಾ ಸದಸ್ಯರು ಹಾಗೂ ಮುಖಂಡರ ಕಥೆ ಮುಗಿಸಲು ಇದೀಗ ಇಸ್ರೇಲ್ ಸಜ್ಜಾದಂತೆ ಕಾಣುತ್ತಿದೆ. ಇದಕ್ಕೆ ಪ್ರತಿಯಾಗಿ ಹಿಜ್ಬುಲ್ಲಾ ಕೂಡ ಮಿಸೈಲ್ ದಾಳಿ ಮಾಡ್ತಿದೆ. ಹೀಗೆ ಇಬ್ಬರೂ ಜಂಗಿ ಕುಸ್ತಿ ಆಡುವಾಗಲೇ ದೊಡ್ಡಣ್ಣ ಅಮೆರಿಕ & ಫ್ರಾನ್ಸ್ ಎಂಟ್ರಿಯಾಗಿದೆ!

21 ದಿನಗಳ ಕದನ ವಿರಾಮ?
ಅಂದಹಾಗೆ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ನಡೆಯುತ್ತಿರುವ ಘೋರ ಕಾಳಗಕ್ಕೆ ಬ್ರೇಕ್ ಹಾಕಲು, ಈ ಮೂಲಕ ತಾತ್ಕಾಲಿಕವಾಗಿ ಶಾಂತಿ ಮೂಡಿಸಲು ಫ್ರಾನ್ಸ್ ಹಾಗೂ ಅಮೆರಿಕ ಈ ಸಮಯದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿವೆ. ಈ ಕುರಿತು ಮಾತನಾಡಿ ಮಾಹಿತಿ ಕೂಡ ತಿಳಿಸಿರುವ ಫ್ರಾನ್ಸ್ ವಿದೇಶಾಂಗ ಸಚಿವ ಜೀನ್-ನೊಯೆಲ್ ಬ್ಯಾರಟ್, ಇಸ್ರೇಲ್ & ಹಿಜ್ಬುಲ್ಲಾ ನಡುವೆ 21 ದಿನಗಳ ಕದನ ವಿರಾಮ ಘೋಷಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈಗಾಗಲೇ, ಈ ಪ್ರಸ್ತಾವದ ಬಗ್ಗೆ ಫ್ರಾನ್ಸ್ & ಅಮೆರಿಕ ಮಾತುಕತೆ ಆರಂಭಿಸಿವೆ ಎಂದಿದ್ದಾರೆ.












Click it and Unblock the Notifications