ನ್ಯೂಯಾರ್ಕ್ ನಗರದಲ್ಲಿ ರೈಲು ದುರಂತ, 4 ಸಾವು
ನ್ಯೂಯಾರ್ಕ್, ಡಿ. 1 : ಮೆಟ್ರೋ-ನಾರ್ತ್ ಪ್ಯಾಸೆಂಜರ್ ರೈಲು ಹಳಿತಪ್ಪಿ ಸಂಭವಿಸಿದ ದುರುಂತದಲ್ಲಿ 4 ಪ್ರಯಾಣಿಕರು ಸತ್ತು 63 ಜನರು ಗಾಯಗೊಂಡ ಘಟನೆ ಭಾನುವಾರ ಬೆಳಗಿನ ಜಾವ ನ್ಯೂಯಾರ್ಕ್ ನಗರದಲ್ಲಿ ಜರುಗಿದೆ. ಗಾಯಗೊಂಡವರಲ್ಲಿ 11 ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ.
ಮೆಟ್ರೋಪಾಲಿಟನ್ ಸಂಚಾರಿ ಪ್ರಾಧಿಕಾರದ ಪ್ರಕಾರ, ಬ್ರಾಂಕ್ಸ್ ನಲ್ಲಿರುವ ಸ್ಪುಟೆನ್ ಡುವಿಲ್ ಸ್ಟೇಷನ್ ಬಳಿ, ಬೆಳಿಗ್ಗೆ 7.20ರ ಸಮಯ ದೊಡ್ಡ ತಿರುವಿನಲ್ಲಿ ಚಲಿಸುತ್ತಿದ್ದಾಗ 8 ಕಾರ್ (ಬೋಗಿ) ಗಳ ಪೈಕಿ 5 ಕಾರ್ ಗಳು ಹಳಿ ತಪ್ಪಿವೆ. ಹಳಿ ತಪ್ಪಿದ ರೈಲಿನಿಂದ ಮೂವರು ಮಹಿಳೆಯರು ರೈಲಿನಿಂದ ಹೊರಕ್ಕೆ ಹಾರಿಬಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಇದೊಂದು ಭಾರೀ ಅಪಾಯಕಾರಿ ತಿರುವು ಎಂದು ತಿಳಿದುಬಂದಿದ್ದು, ಕಳೆದ ಜುಲೈನಲ್ಲಿ ಇದೇ ಸ್ಥಳದಲ್ಲಿ ಮತ್ತೊಂದು ರೈಲು ಹಳಿ ತಪ್ಪಿತ್ತು. ಒಂದು ಬೋಗಿ ಹತ್ತಿರದಲ್ಲಿದ್ದ ನದಿಯ ಬಳಿ ಬಿದ್ದಿದೆ. ಬೋಗಿ ನದಿಯಲ್ಲಿ ಮುಳುಗಿದ್ದರೆ ಇದಕ್ಕಿಂತಲೂ ದೊಡ್ಡ ಅನಾಹುತ ಸಂಭವಿಸುತ್ತಿತ್ತು ಎಂದು ಡಬ್ಲ್ಯೂಎಬಿಸಿ7 ಹೇಳಿದೆ.
ಈ ರೈಲಿನಲ್ಲಿ ಪ್ರತಿವಾರ ಸಂಚರಿಸುವ ಪ್ರಯಾಣಿಕನ ಪ್ರಕಾರ, ರೈಲು ಸಾಮಾನ್ಯ ವೇಗಕ್ಕಿಂತಲೂ ಹೆಚ್ಚು ವೇಗವಾಗಿ ಚಲಿಸುತ್ತಿತ್ತು. ಫೈರ್ ಫೈಟಿಂಗ್ ವಾಹನಗಳು ಸ್ಥಳಕ್ಕೆ ಕೂಡಲೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿವೆ. ಗಾಯಾಳುಗಳಲ್ಲಿ 11 ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications