ಫ್ಲೋರಿಡಾ: Rapper ‍‍‍XXXTenstation ಗುಂಡಿಗೆ ಬಲಿ

ಫ್ಲೋರಿಡಾ, ಜೂನ್ 19: ಇಲ್ಲಿನ ಡೀರ್ ಫೀಲ್ಡ್ ಕಡಲ ತೀರದ ಬಳಿ ಗಾಯಕ XXXTenstation ಅವರನ್ನು ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದು ಹಾಕಿದ್ದಾರೆ.

ಗಾಯಕನ ಮೇಲೆ ಕುಟುಂಬ ಕಲಹ, ಸಹ ಗಾಯಕರೊಡನೆ ಕಿತ್ತಾಟ ಸೇರಿದಂತೆ ಅನೇಕ ಕೇಸುಗಳಿವೆ. 2013ರಲ್ಲಿ ಸಂಗೀತ ಲೋಕಕ್ಕೆ ಕಾಲಿಟ್ಟ ಎಕ್ಸ್ ಟೆಟಾಸಿಯನ್ ( ‍‍‍XXXTenstation ) 2016 ಹೊತ್ತಿಗೆ ಸ್ಟಾರ್ Rapper ಆಗಿ ಜನಪ್ರಿಯತೆ ಗಳಿಸಿದ್ದರು. ಲುಕ್ ಅಟ್ ಮೀ ಆಲ್ಬಂ ಬಿಲ್ಬೋರ್ಡ್ ಹಾಟ್ 100 ಪಟ್ಟಿಯಲ್ಲಿ 34ನೇ ಸ್ಥಾನ ಗಳಿಸಿತ್ತು.

Florida : Rapper XXXTenstation shot dead

ವೃತ್ತಿ ವೈಷ್ಯಮ್ಯದಿಂದ ಈ ಕೃತ್ಯ ಎಸಗಿರಬಹುದು. ಗಾಯಕನ ಜತೆಗಿದ್ದ ಇನ್ನಿಬ್ಬರಿಗೂ ತೀವ್ರಗಾಯಗಳಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. 20 ವರ್ಷ ವಯಸ್ಸಿನ ವ್ಯಕ್ತಿ ಇದ್ದ ಕಾರಿನ ಮೇಲೆ ಗುಂಡಿನ ಮಳೆಗೆರೆಯಲಾಗಿದೆ ಎಂಬ ಸುದ್ದಿ ಬಂದಿತ್ತು.

Florida : Rapper XXXTenstation shot dead

ಘಟನಾ ಸ್ಥಳಕ್ಕೆ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಕಾರಿನಲ್ಲಿದ್ದವರು ಬಿದ್ದಿದ್ದರು. ಮೃತರನ್ನು ಗಾಯಕ ಎಂದು ಗುರುತಿಸಲಾಯಿತು ಎಂದು ಬ್ರೋವಾರ್ಡ್ ಕೌಂಟಿ ಪೊಲೀಸರು ಹೇಳಿದ್ದಾರೆ.

ಸಾಯುವುದಕ್ಕೂ ಮುನ್ನ ಸ್ನಾಪ್ ಚಾಟ್ ನಲ್ಲಿ ತನ್ನ ಮೇಲೆ ಹಲ್ಲೆಯಾಗುವುದರ ಬಗ್ಗೆ ಗಾಯಕ ಹೇಳಿದ್ದು ಈಗ ವೈರಲ್ ಆಗಿದೆ.

ಗಾಯಕನ ದುರಂತ ಅಂತ್ಯಕ್ಕೆ ಸಂಗೀತ ಲೋಕದ ಅನೇಕ ಮಂದಿ, ಅಭಿಮಾನಿಗಳು ಕಂಬನಿ ಮಿಡಿದಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+