ನೇಪಾಳ ಪ್ರವಾಹದಲ್ಲಿ ಕನಿಷ್ಠ 47 ಮಂದಿ ಸಾವು, ಹತ್ತಾರು ಮಂದಿ ನಾಪತ್ತೆ

ನೇಪಾಳದಲ್ಲಿ ಕಳೆದ ಮೂರು ದಿನಗಳ ದಿಢೀರ್ ಪ್ರವಾಹ ಹಾಗೂ ಭೂ ಕುಸಿತಕ್ಕೆ ಸಾವಿನ ಸಂಖ್ಯೆ ಭಾನುವಾರದಂದು 47ಕ್ಕೆ ತಲುಪಿದೆ. ಹತ್ತಾರು ಮಂದಿ ನಾಪತ್ತೆಯಾಗಿದ್ದು, ಕೆಲವರು ಗಾಯಾಳುಗಳಾಗಿದ್ದಾರೆ ಎಂದು ನೇಪಾಳದ ಸರಕಾರ ಮಾಹಿತಿ ನೀಡಿದೆ. ದೊಡ್ಡ ಮಟ್ಟದಲ್ಲಿ ಭೂಪ್ರದೇಶ ಜಲಾವೃತವಾಗಿದೆ. ಮುಂಗಾರು ಮಳೆಗೆ ದೇಶದಾದ್ಯಂತ ಸೇತುವೆಗಳು ಹಾಗೂ ರಸ್ತೆಗಳಿಗೆ ಹಾನಿಯಾಗಿವೆ. ಮನೆಗಳು ಕೂಡ ನಾಶವಾಗಿವೆ.

ಗೃಹ ಸಚಿವಾಲಯದ ಮೂಲಗಳ ಪ್ರಕಾರ, ನಲವತ್ತೇಳು ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ ಹಾಗೂ ಇಪ್ಪತ್ತೆಂಟು ಮಂದಿ ಗಾಯಗೊಂಡಿದ್ದಾರೆ. 29 ಮಂದಿ ನಾಪತ್ತೆ ಆಗಿದ್ದಾರೆ. ಟೀವಿ ಚಾನೆಲ್ ಗಳಲ್ಲಿ ಪ್ರಸಾರ ಆಗುತ್ತಿರುವ ದೃಶ್ಯಾವಳಿಗಳಲ್ಲಿ ಕಂಡುಬರುವಂತೆ, ಮನೆಯ ಛಾವಣಿಗಳು ನೀರಿನಲ್ಲಿ ಮುಳುಗಿವೆ. ತಮ್ಮ ಮನೆಯ ಅಗತ್ಯ ವಸ್ತುಗಳನ್ನು ತಲೆ ಮೇಲಿಟ್ಟುಕೊಂಡು ಎದೆಯ ಮಟ್ಟದ ನೀರಿನಲ್ಲಿ ಜನರು ನಡೆದು ಸಾಗುತ್ತಿದ್ದಾರೆ.

Flash flood in Nepal; death toll rise to 47

ಕೆಲವು ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ. ಆದರೆ ದೇಶದ ಪೂರ್ವ ಭಾಗ ಈಗಲೂ ನೆರೆ ಮಟ್ಟಕ್ಕಿಂತ ಎತ್ತರದಲ್ಲೇ ಇದೆ. ಸ್ಥಳೀಯರು ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಭಾರತದ ಬಿಹಾರದಲ್ಲೂ ಹರಿಯುವ ಕೋಸಿ ನದಿಯು ಪ್ರವಾಹ ಮಟ್ಟವನ್ನೂ ಮೀರಿ ಹರಿಯುತ್ತಿದೆ.

ಕಳೆದ ರಾತ್ರಿ ಕೋಸಿ ನದಿಯ ಎಲ್ಲ ಬ್ಯಾರೆಜ್ ಗಳನ್ನು ಆರು ಗಂಟೆಗಳ ಕಾಲ ತೆರೆಯಲಾಗಿತ್ತು. ಕಳೆದ ಹದಿನೈದು ವರ್ಷದಲ್ಲೇ ಅತ್ಯಂತ ಹೆಚ್ಚಿನ ಮಟ್ಟದ ನೀರು ಸಂಗ್ರಹ ಆಗಿತ್ತು ಎಂದು ನೇಪಾಳ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಭಾರತ ಹಾಗೂ ನೇಪಾಳ ಎರಡೂ ದೇಶಗಳ ಪಾಲಿಗೆ ಕೋಸಿ ನದಿ ಗಂಭೀರವಾದ ಸಮಸ್ಯೆ ತಂದೊಡ್ಡಿದೆ. ಇದರಿಂದ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಮಂದಿಗೆ ಬಿಹಾರದಲ್ಲಿ ತೊಂದರೆ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+