ಈ 5 ದೇಶಗಳಲ್ಲಿ ಕೊರೊನಾ ಸೋಂಕು ಕಡಿಮೆಯಾಗಲು ಕಾರಣವೇನು?
ಐದು ದೇಶಗಳಲ್ಲಿ ಜುಲೈ ತಿಂಗಳಿನಿಂದ ಕೊರೊನಾ ಸೋಂಕು ಗಣನೀಯವಾಗಿ ಕಡಿಮೆಯಾಗಿದೆ.
Recommended Video
ಅಮೆರಿಕ, ದಕ್ಷಿಣ ಆಫ್ರಿಕ, ರಷ್ಯಾ, ಪಾಕಿಸ್ತಾನ, ಸೌದಿ ಅರೇಬಿಯಾದಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತಿದೆ. ಆದರೆ ಸ್ಪೇನ್, ಇಟಲಿ, ಫ್ರಾನ್ಸ್‌ನಲ್ಲಿ ಸೋಂಕು ಹೆಚ್ಚುತ್ತಿದೆ.
ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಬಾರ್, ಜಿಮ್, ಥಿಯೇಟರ್‌ಗೆ ನಿಷೇಧ ಹೇರಿದ್ದೂ ಕೂಡ ಕೊರೊನಾ ಸೋಂಕಿತರು ಕಡಿಮೆಯಾಗಲು ಒಂದು ಕಾರಣವಾಗಿದೆ.
ಅಮೆರಿಕ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಪಾಕಿಸ್ಥಾನದಲ್ಲಿ ಸೋಂಕು ಕಡಿಮೆಯಾಗುತ್ತಿದೆ. ಜುಲೈ ಮೊದಲ ವಾರದಿಂದ ಆಗಸ್ಟ್ 22ರವರೆಗಿನ ಅಂಕಿ ಅಂಶವನ್ನು ಗಮನಿಸಿದರೆ, ಪ್ರಕರಣಗಳು ಕಡಿಮೆಯಾಗಿವೆ.

ಅಮೆರಿಕದಲ್ಲಿ ಕೊರೊನಾ ಪೀಕ್ ಲೆವೆಲ್‌ಗೆ ಹೋದಾಗ ಜುಲೈ 22 ರಂದು 68,634 ಪ್ರಕರಣಗಳು ದಾಖಲಾಗಿದ್ದವು. ಈಗ ಅದು 43,834ಕ್ಕೆ ಬಂದು ತಲುಪಿದೆ. ಅತಿ ಹೆಚ್ಚು ಕೊರೊನಾ ಸೋಂಕಿತರಿರುವ ದೇಶ ಎನ್ನುವ ಕುಖ್ಯಾತಿಗೆ ಕಾರಣವಾಗಿದೆ. ಸಾವಿನ ಸಂಖ್ಯೆಯೂ ಕೂಡ ಕಡಿಮೆಯಾಗಿದೆ.
ದಕ್ಷಿಣ ಆಫ್ರಿಕಾದಲ್ಲಿ ಜುಲೈ 15 ರಂದು 12,341 ಪ್ರಕರಣಗಳು ಪತ್ತೆಯಾಗಿದ್ದವು, ಈಗ ಅದು 3342ಕ್ಕೆ ಬಂದು ನಿಂತಿದೆ.ರಷ್ಯಾದಲ್ಲಿ ಜುಲೈನಲ್ಲಿ ಆವರೇಜ್ 6 ಸಾವಿರ ಪಪ್ರಕರಣಗಳಿದ್ದವು, ಈಗ ಅದು 5 ಸಾವಿರಕ್ಕೆ ಬಂದಿದೆ.
ಇನ್ನು ಪಾಕಿಸ್ತಾನದಲ್ಲಿ ಜುಲೈನಲ್ಲಿ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಜುಲೈ ತಿಂಗಳಲ್ಲಿ ಕಾಣಿಸಿಕೊಂಡಿದ್ದವು ಅದು ಈಗ 580-620ಕ್ಕೆ ಬಂದು ನಿಂತಿದೆ.ಸೌದಿ ಅರೇಬಿಯಾದಲ್ಲಿ ಜುಲೈನಲ್ಲಿ 3700 ಪ್ರಕರಣಗಳಿದ್ದವು, ಆಗಸ್ಟ್ನಲ್ಲಿ 1200 ಪ್ರಕರಣಗಳು ದಾಖಲಾಗಿವೆ.












Click it and Unblock the Notifications