ಕಳೆದ 50 ವರ್ಷಗಳಲ್ಲಿ ಇದೇ ಮೊದಲ ಬಾರಿ ನಾಸಾದಲ್ಲಿ ಇಂಥ ಘಟನೆ...
ವಾಷಿಂಗ್ಟನ್, ಅಗಸ್ಟ್ 29: ಕಳೆದ ಐವತ್ತು ವರ್ಷಗಳಲ್ಲೇ ನಡೆಯದ ಘಟನೆಯೊಂದು ಅಮೆರಿಕದ ಪ್ರತಿಷ್ಠಿತ ಸಂಸ್ಥೆ ನಾಸಾದಲ್ಲಿ ನಡೆದಿದೆ. ನಾಸಾದ ಟ್ರೇನಿ ಗಗನಯಾತ್ರಿಯೊಬ್ಬರು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಸಂಸ್ಥೆಯು ಮಂಗಳವಾರ ಮಾಹಿತಿ ನೀಡಿದೆ.
ರಾಬ್ ಕುಲಿನ್ ರಾಜೀನಾಮೆ ಸಲ್ಲಿಸಿದ್ದು, ಇದೇ ತಿಂಗಳ 31ನೇ ತಾರೀಕಿನಿಂದ ಅನ್ವಯ ಆಗುತ್ತದೆ. ವೈಯಕ್ತಿಕ ಕಾರಣಗಳಿಗಾಗಿ ಈ ಹುದ್ದೆ ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ ಎಂದು ವಕ್ತಾರೆ ಬ್ರಾಂಡಿ ಡೀನ್ ಹೇಳಿದ್ದು, ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ನಾಸಾದಲ್ಲಿ ಅವಕಾಶ ಗಿಟ್ಟಿಸುವುದು ಸಲೀಸಾದ ವಿಷಯವಲ್ಲ. ಪ್ರತಿ ವರ್ಷವು 12 ಹುದ್ದೆಗಳಿಗಾಗಿ 18 ಸಾವಿರ ಮಂದಿಯಷ್ಟು ಅರ್ಜಿ ಹಾಕಿಕೊಳ್ಳುತ್ತಾರೆ. 1968ರ ನಂತರ ಇದೇ ಮೊದಲ ಬಾರಿಗೆ ತರಬೇತಿಯನ್ನು ಅರ್ಧಕ್ಕೆ ಬಿಟ್ಟು, ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ ಕುಲಿನ್.












Click it and Unblock the Notifications