ಪೆರುವಿನ ಚಿನ್ನದ ಗಣಿಯಲ್ಲಿ ಅಗ್ನಿ ದುರಂತ: 27 ಜನ ಸಜೀವ ದಹನ
ಯಾನಾಕ್ವಿಹುವಾ, ಪೆರು ಮೇ 8: ದಕ್ಷಿಣ ಪೆರುವಿನ ದೂರದ ಪ್ರದೇಶದ ಚಿನ್ನದ ಗಣಿಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 27 ಕಾರ್ಮಿಕರು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ. ಇದು ದಕ್ಷಿಣ ಅಮೆರಿಕಾದ ದೇಶದದಲ್ಲಿ ಸಂಭವಿಸಿದ ಇತ್ತೀಚಿನ ಅತ್ಯಂತ ಕೆಟ್ಟ ಗಣಿಗಾರಿಕೆ ದುರಂತವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖಿತ ಸಂಬಂಧಿಕರು ಹೆಚ್ಚಿನ ಮಾಹಿತಿ ಪಡೆಯಲು ಗಣಿ ಬಳಿ ಜಮಾಯಿಸಿದ್ದಾರೆ.
ಘಟನೆಗೆ ಕಾರಣ ಶಾರ್ಟ್ ಸರ್ಕ್ಯೂಟ್ ಎಂದು ಹೇಳಲಾಗುತ್ತಿದೆ. ಇದರಿಂದ ಬಾರೀ ದೊಡ್ಡ ಸ್ಫೋಟ ಸಂಭವಿಸಿದೆ. ಅರೆಕ್ವಿಪಾ ಪ್ರದೇಶದ ಲಾ ಎಸ್ಪೆರಾನ್ಜಾ 1 ಗಣಿಯೊಳಗಿನ ಸುರಂಗಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಸಂಭವಿಸಿದೆ ಎಂದು ಪೊಲೀಸರು ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿ ಖಚಿತಪಡಿಸಿದೆ.

ಘಟನೆಯಿಂದ ಸ್ಥಳೀಯ ಜನ ತುಂಬಾ ಆಘಾತಕ್ಕೊಳಗಾಗಿದ್ದಾರೆ ಎಂದು 51 ವರ್ಷದ ಸಹೋದರ ಫ್ರೆಡೆರಿಕೊ ಎಂಬುವವರನ್ನು ಕಳೆದುಕೊಂಡ ಫ್ರಾನ್ಸಿಸ್ಕೊ ಇಡ್ಮೆ ಮಾಮಾನಿ ಎಂಬುವವರು ಹೇಳಿದರು.ಪಬ್ಲಿಕ್ ಪ್ರಾಸಿಕ್ಯೂಟರ್ ಜಿಯೋವಾನಿ ಮ್ಯಾಟೋಸ್ ಚಾನೆಲ್ ಎನ್ ಟೆಲಿವಿಷನ್‌ಗೆ "ಗಣಿಯಲ್ಲಿ 27 ಮಂದಿ ಸಾವನ್ನಪ್ಪಿದ್ದಾರೆ" ಎಂದು ಖಚಿತಪಡಿಸಿದ್ದಾರೆ.
ಪ್ರಾದೇಶಿಕ ರಾಜಧಾನಿಯಾದ ಅರೆಕ್ವಿಪಾ ನಗರದಿಂದ 10-ಗಂಟೆಗಳ ಪ್ರಯಾಣದ ದೂರದ ಕಾಂಡೆಸುಯೊಸ್ ಪ್ರಾಂತ್ಯದ ಗಣಿಯಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದಿಂದಾಗಿ ಯಾನಾಕ್ವಿಹುವಾ ಪಟ್ಟಣದ ಗಣಿ ಒಳಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಸಾವನ್ನಪ್ಪಿದ ಜನ 100 ಮೀಟರ್ ಆಳದಲ್ಲಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ಪೊಲೀಸರು ಸತ್ತವರ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಕೂಡ ಇದೆ. ಸಂತ್ರಸ್ತರ ಶವಗಳನ್ನು ಹೊರತೆಗೆಯುವ ಮೊದಲು ರಕ್ಷಣಾ ತಂಡಗಳು ಗಣಿ ಭದ್ರತೆಗೆ ಪ್ರಯತ್ನಿಸುತ್ತಿವೆ.
"ಮೃತರು ಇರುವ ಸ್ಥಳವನ್ನು ನಾವು ಸುರಕ್ಷಿತವಾಗಿರಿಸಬೇಕು. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿದ್ದೇವೆ. ಅಗ್ನಿ ದುರಂತ ತೀವ್ರವಾಗಿರುವುದರಿಂದ ಒಳ ಪ್ರವೇಶ ಮಾಡಲು ಸಾಧ್ಯವಾಗಿಲ್ಲ. ಆದರೆಈಗ ರಕ್ಷಣ ಕಾರ್ಯ ಮುಂದುವರೆದಿದೆ. ಮೃತ ದೇಹಗಳನ್ನು ಪಡೆಯುವ ಕೆಲಸ ಮಾಡಲಾಗುತ್ತಿದೆ' ಎಂದು ರಕ್ಷಣಾ ಪಡೆಯ ಅಧಿಕಾರಿ ಮ್ಯಾಟೋಸ್ ಹೇಳಿದರು.
ಬದುಕುಳಿದವರ ಬಗ್ಗೆ ಯಾವುದೇ ವರದಿಗಳಿಲ್ಲ ಅಥವಾ ಬೆಂಕಿಯ ಸಮಯದಲ್ಲಿ ಗಣಿಯಲ್ಲಿ ಎಷ್ಟು ಜನರು ಇದ್ದರು ಎಂಬುದರ ಬಗ್ಗೆ ದೃಢೀಕರಣವಿಲ್ಲ. ಹೆಚ್ಚಿನ ಗಣಿ ಕಾರ್ಮಿಕರು ಉಸಿರುಕಟ್ಟುವಿಕೆ ಮತ್ತು ಸುಟ್ಟಗಾಯಗಳಿಂದ ಸಾವನ್ನಪ್ಪಿದ್ದಾರೆ ಎಂದು ಯಾನಾಕ್ವಿಹುವಾ ಮೇಯರ್ ಜೇಮ್ಸ್ ಕ್ಯಾಸ್ಕ್ವಿನೊ ಆಂಡಿನಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಗಣಿಗಾರಿಕೆ ಅಪಘಾತಗಳು
ಈ ಘಟನೆಯು ಲ್ಯಾಟಿನ್ ಅಮೆರಿಕಾದಲ್ಲಿ ಅತಿ ದೊಡ್ಡ ಚಿನ್ನದ ಉತ್ಪಾದಕ ಪೆರುವಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ಕೆಟ್ಟ ಗಣಿಗಾರಿಕೆ ಅಪಘಾತಗಳಲ್ಲಿ ಒಂದಾಗಿದೆ. ಕುಟುಂಬಸ್ಥರು ತಮ್ಮ ಸಂಬಂಧಿಕರ ಮಾಹಿತಿಗಾಗಿ ಸಮೀಪದ ಪೊಲೀಸ್ ಠಾಣೆಗೆ ತೆರಳಿದ್ದಾರೆ.
Minera Yanaquihua ನಿರ್ವಹಿಸುವ ಗಣಿ ಕಾನೂನುಬದ್ಧ ಉದ್ಯಮವಾಗಿದೆ ಆದರೆ ಈ ಪ್ರದೇಶದಲ್ಲಿ ಅನೇಕ ಅಕ್ರಮ ಗಣಿಗಳಿವೆ. ಕಂಪನಿಯು 23 ವರ್ಷಗಳಿಂದ ಪೆರುವಿನಲ್ಲಿ ಗಣಿಗಳನ್ನು ನಿರ್ವಹಿಸುತ್ತಿದೆ.
ಗಣಿಗಾರಿಕೆಯು ಪೆರುವಿಯನ್ ಆರ್ಥಿಕತೆಯ ಎಂಜಿನ್‌ಗಳಲ್ಲಿ ಒಂದಾಗಿದೆ, ಇದು GDP ಯ ಎಂಟು ಪ್ರತಿಶತಕ್ಕಿಂತ ಹೆಚ್ಚಿನದಾಗಿದೆ. ಗಣಿಗಾರಿಕೆ ಮತ್ತು ಇಂಧನ ಸಚಿವಾಲಯದ ಪ್ರಕಾರ ಕಳೆದ ವರ್ಷ ಗಣಿಗಾರಿಕೆ ಸಂಬಂಧಿತ ಘಟನೆಗಳಲ್ಲಿ 39 ಜನರು ಸಾವನ್ನಪ್ಪಿದ್ದಾರೆ.
2020 ರಲ್ಲಿ, ಅರೆಕ್ವಿಪಾದಲ್ಲಿ ಗಣಿ ಕುಸಿದಾಗ ನಾಲ್ಕು ಕಾರ್ಮಿಕರು ಸಿಕ್ಕಿಬಿದ್ದು ಸಾವನ್ನಪ್ಪಿದ್ದರು. ಅಧಿಕೃತ ಮೂಲಗಳ ಪ್ರಕಾರ ಪೆರು ವಿಶ್ವದ ಎರಡನೇ ಅತಿದೊಡ್ಡ ಬೆಳ್ಳಿ, ತಾಮ್ರ ಮತ್ತು ಸತುವು ಉತ್ಪಾದಕವಾಗಿದೆ.
ಇದು ಲ್ಯಾಟಿನ್ ಅಮೆರಿಕದ ಸತು, ತವರ, ಸೀಸ ಮತ್ತು ಮಾಲಿಬ್ಡಿನಮ್‌ನ ಅಗ್ರ ಉತ್ಪಾದಕವಾಗಿದೆ.












Click it and Unblock the Notifications