ಕ್ಯಾಲಿಫೋರ್ನಿಯಾ ಮಸೀದಿಯಲ್ಲಿ ಬೆಂಕಿ ಅವಘಡ ಸೃಷ್ಟಿಸಿದ ಆತಂಕ

ಕ್ಯಾಲಿಫೋರ್ನಿಯಾ, ಮಾರ್ಚ್ 25 : ದಕ್ಷಿಣ ಕ್ಯಾಲಿಫೋರ್ನಿಯಾದ ಮಸೀದಿಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಆ ಸ್ಥಳದಲ್ಲಿ ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನಲ್ಲಿ ಇತ್ತೀಚೆಗೆ ನಡೆದ ಹತ್ಯಾಕಾಂಡದ ಬಗ್ಗೆ ಪ್ರಸ್ತಾಪವಿರುವ ಟಿಪ್ಪಣಿಯೊಂದು ಕೂಡ ದೊರಕಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಎಸ್ಕಾಂಡಿಡೋದಲ್ಲಿರುವ ಮಸೀದಿಯಲ್ಲಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಅದೇ ಸ್ಥಳದಲ್ಲಿ ಕ್ರೈಸ್ಟ್ ಚರ್ಚ್ ನಡೆದ ಭೀಕರ ಹತ್ಯಾಕಾಂಡದ ಬಗ್ಗೆ ಚೀಟಿಯೊಂದು ದೊರೆತಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನಲ್ಲಿರುವ ಮಸೀದಿಯಲ್ಲಿ ಗುಂಡಿನ ಸುರಿಮಳೆಗೈದಿದ್ದ ವ್ಯಕ್ತಿಯೊಬ್ಬ 50 ಜನರನ್ನು ನಿರ್ದಯವಾಗಿ ಕೊಂದು ಹಾಕಿದ್ದ. ಆಸ್ಟ್ರೇಲಿಯಾದ ಸಂಜಾತ ಈ ಕೃತ್ಯ ನಡೆಸಿದ್ದಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಆ ಘಟನೆಯನ್ನು ಲೈವ್ ಪ್ರಸಾರ ಮಾಡಿದ್ದ.

Fire accident in a mosque in California

ಇದೀಗ ಕ್ಯಾಲಿಫೋರ್ನಿಯಾದಲ್ಲಿ ನಡೆದಿರುವ ಬೆಂಕಿ ಅವಘಡದ ಹಿಂದೆ ಉಗ್ರರ ಕೈವಾಡವಿರಬಹುದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪಾರ್ಕಿಂಗ್ ಸ್ಥಳವೊಂದರಲ್ಲಿ ಕ್ರೈಸ್ಟ್ ಚರ್ಚ್ ಘಟನೆಯ ಬಗ್ಗೆ ಪ್ರಸ್ತಾಪವಿರುವ ಚೀಟಿ ದೊರೆತಿತ್ತು. ಆದರೆ, ಆ ಚೀಟಿಯಲ್ಲೇನಿದೆ ಎಂಬುದನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ಈ ಬೆಂಕಿ ಅನಾಹುತ ನಡೆದ ಸಂದರ್ಭದಲ್ಲಿ ಮಸೀದಿಯೊಳಗೆ ಏಳು ಜನರಿದ್ದರು. ಅಗ್ನಿ ಶಾಮಕ ದಳ ಬರುವ ಮುನ್ನವೇ ಬೆಂಕಿಯನ್ನು ನಂದಿಸುವಲ್ಲಿ ಅವರು ಯಶಸ್ವಿಯಾಗಿದ್ದರು. ಇದು ಅಂತಹ ದೊಡ್ಡ ಘಟನೆ ಅಲ್ಲದಿದ್ದರೂ ಕ್ರೈಸ್ಟ್ ಚರ್ಚ್ ಘಟನೆಯ ಬಗ್ಗೆ ಚೀಟಿ ಸಿಕ್ಕಿದ್ದರಿಂದ ಗೊಂದಲ ಮತ್ತು ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+