ಥಾಯ್ಲೆಂಡ್ ಗುಹೆಯಿಂದ 8ನೇ ಬಾಲಕ ರಕ್ಷಣೆ, ಕೆಲ ಗಂಟೆಯಲ್ಲಿ ಶುಭ ಸುದ್ದಿ

ಥಾಯ್ಲೆಂಡ್ ನ ಥಾಮ್ ಲೌಂಗ್ ಗುಹೆಯಲ್ಲಿ ಸಿಕ್ಕಿಬಿದ್ದಿರುವ ಬಾಲಕರ ಫುಟ್ ಬಾಲ್ ತಂಡದಿಂದ 8ನೇ ಬಾಲಕನ ರಕ್ಷಣೆ ಮಾಡಲಾಗಿದೆ. ಗುಹೆಯ ಬಳಿಯಿಂದ ಕನಿಷ್ಠ ಎರಡು ಹೆಲಿಕಾಪ್ಟರ್ ಆಸ್ಪತ್ರೆಗೆ ಧಾವಿಸಿವೆ. ಸೋಮವಾರ ರಕ್ಷಣಾ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ.

ರಕ್ಷಣಾ ಕಾರ್ಯಾಚರಣೆ ನೇತೃತ್ವ ಹೊತ್ತಿರುವ ಮುಖ್ಯಸ್ಥರ ಪ್ರಕಾರ, ಆಮ್ಲಜನಕದ ಟ್ಯಾಂಕ್ ಗಳನ್ನು ಬದಲಿಸಲಾಗಿದೆ ಮತ್ತು ಗುಹೆಯಿಂದ ಹೊರಬರುವ ಮಾರ್ಗದುದ್ದಕ್ಕೂ ಹಗ್ಗಗಳನ್ನು ಬಲಗೊಳಿಸಲಾಗಿದೆ. ಗುಹೆಯ ಒಳಗಿನ ನೀರನ್ನು ಹೊರಹಾಕಲು ಹೊಸ ವ್ಯವಸ್ಥೆ ಮಾಡಲಾಗಿದೆ. 8ನೇ ಬಾಲಕನ ರಕ್ಷಣೆ ಕೂಡ ಮಾಡಲಾಗಿದೆ ಎಂಬ ಮಾಹಿತಿ ಬರುತ್ತಿದೆ.

ಇನು ಕೆಲವೇ ಗಂಟೆಗಳಲ್ಲಿ ಗುಹೆಯಲ್ಲಿ ಸಿಕ್ಕಿಬಿದ್ದಿರುವ ಎಲ್ಲರನ್ನೂ ರಕ್ಷಣೆ ಮಾಡುವ ವಿಶ್ವಾಸವನ್ನು ವ್ಯಕ್ತಪಡಿಸಿರುವ ಕಾರ್ಯಾಚರಣೆಯ ಮುಖ್ಯಸ್ಥರು, ಮುಳುಗುತಜ್ಞರು ರಕ್ಷಣೆಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿದ್ದಾರೆ. ಸಲಕರಣೆಗಳು ಸಿದ್ಧವಿವೆ. ಇದರ ಜತೆಗೆ ಬಾಲಕರೂ ಸಿದ್ಧರಿದ್ದಾರೆ ಎಂದು ಅವರು ಹೇಳಿದ್ದಾರೆ.

Fifth boy saved from flooded Thai cave

ಬಾಲಕರ ಫುಟ್ ಬಾಲ್ ತಂಡದ ಜತೆಗೆ ತರಬೇತುದಾರ ಸಹ ಈಚೆಗೆ ಗುಹೆಯೊಳಗೆ ಸಿಕ್ಕಿಬಿದ್ದಿದ್ದರು. 8 ಬಾಲಕರ ರಕ್ಷಣೆ ಮಾಡಿದ್ದು, ಉಳಿದವರು ಇನ್ನೂ ಗುಹೆಯೊಳಗೇ ಸಿಕ್ಕಿಬಿದ್ದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+