ಕೊರೊನಾ ಪಕ್ಕಕ್ಕಿಡಿ, ಬೇರೆ ರೋಗಿಗಳ ಪರಿಸ್ಥಿತಿ ಏನಾಗಿದೆ ನೋಡಿ
ಇಡೀ ವಿಶ್ವವನ್ನೇ ಕೊರೊನಾ ವೈರಸ್ ಆತಂಕಕ್ಕೆ ದೂಡಿದೆ. ಎಲ್ಲಾ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರನ್ನು ಹೊರತುಪಡಿಸಿ ಬೇರೆ ಯಾವುದೇ ರೋಗಿಗಳನ್ನು ದಾಖಲಿಸಿಕೊಳ್ಳುತ್ತಿಲ್ಲ.
ಹೀಗಾಗಿ ಕೊರೊನಾ ಸೋಂಕಿತರಿಗಿಂತ ಕೊರೊನಾ ಸೋಂಕಿತರಲ್ಲದ ರೋಗಿಗಳಿಗೆ ಹೆಚ್ಚು ತೊಂದರೆ ಉಂಟಾಗುತ್ತಿದೆ. ಅಪಾಯಿಂಟ್‌ಮೆಂಟ್ ಸಿಗುತ್ತಿಲ್ಲ, ವೈದ್ಯರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ.
ಕೊವಿಡ್ 19 ರೋಗಿಗಳಿರುವ ಆಸ್ಪತ್ರೆಯಲ್ಲಿ ದಾಖಲಾದರೆ ಕೊರೊನಾ ಭಯ, ಹೀಗಾಗಿ ದಾಖಲಾಗಿ ಚಿಕಿತ್ಸೆ ಪಡೆಯಲೂ ಸಾಧ್ಯವಾಗುತ್ತಿಲ್ಲ ಎಂದು ಕೆಲವು ರೋಗಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಎಷ್ಟೋ ಶಸ್ತ್ರ ಚಿಕಿತ್ಸೆಗಳು ಬಾಕಿ ಉಳಿದಿವೆ, ಮಧುಮೇಹ ರೋಗಿಗಳಿದ್ದಾರೆ, ಎಷ್ಟೋ ಮಂದಿಗೆ ಕಿವಿ, ಕಣ್ಣು, ಮೂಗು ಶಸ್ತ್ರ ಚಿಕಿತ್ಸೆ ಆಗುವುದಿದೆ, ನಿತ್ಯ ನೂರಾರು ಕ್ಯಾನ್ಸರ್ ರೋಗಿಗಳು ಬರುತ್ತಿದ್ದಾರೆ, ಅವರಿಗೂ ಸಮರ್ಪಕ ಚಿಕಿತ್ಸೆ ದೊರೆಯುತ್ತಿಲ್ಲ. ಆದರೆ ಕೊರೊನಾ ಸೋಂಕಿನ ಭೀತಿಯಿಂದ ರೋಗಿಗಳು ಬೇರೆ ರೋಗಗಳಿಂದ ಮನೆಗಳಲ್ಲೇ ನರಳುವಂತಾಗಿದೆ.

ಕಳೆದ ನಾಲ್ಕು ವರ್ಷಗಳಿಂದ ಲೇಸರ್ ಟ್ರೀಟ್‌ಮೆಂಟ್
ಲಂಡನ್‌ನಲ್ಲಿ ಕಳೆದ ಮೂರು ವರ್ಷಗಳಿಂದ 40 ವರ್ಷದ ಶಾಮಿರ್ ಖಾನ್ ಎಂಬುವವರು ಮೂರ್‌ಫೀಲ್ಡ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ಡಯಾಬಿಟಿಕ್ ರೆಟಿನೋಪತಿ ಮಾಡಿಸಿಕೊಳ್ಳುತ್ತಿದ್ದಾರೆ. ಮಧುಮೇಹದಿಂದಾಗಿ ಅವರಿಗೆ ದೃಷ್ಟಿ ದೋಷ ಉಂಟಾಗಿತ್ತು.

ಲೇಸರ್ ಚಿಕಿತ್ಸೆ
ಕೆಲವು ತಿಂಗಳುಗಳಿಂದ 20-40 ನಿಮಿಷಗಳ ಕಾಲ ಲೇಸರ್ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಮಧುಮೇಹದಿಂದಾಗಿ ಅವರ ದೃಷ್ಟಿಗೆ ಹೊಡೆತ ಬಿದ್ದಿತ್ತು, ನಿತ್ಯ ಚಿಕಿತ್ಸೆ ಪಡೆಯದಿದ್ದರೆ ಒಂದು ಕಣ್ಣು ಭಾಗಶಃ ಕಾಣಿಸುವುದೇ ಇಲ್ಲ.

ಆಪರೇಷನ್ ದಿನಾಂಕ ಮುಂದಕ್ಕೆ
ಎಲ್ಲಾ ಆಸ್ಪತ್ರೆಗಳಲ್ಲೂ ಕೊರೊನಾ ರೋಗಿಗಳಿರುವ ಕಾರಣ, ಅವರಿಗೆ ತುರ್ತು ಚಿಕಿತ್ಸೆ ನಿಡಬೇಕಾಗಿರುವುದರಿಂದ ಬೇರೆ ರೋಗಿಗಳ ಚಿಕಿತ್ಸೆ ಕಡೆ ಗಮನ ಕಡಿಮೆಯಾಗಿದೆ. ಏಪ್ರಿಲ್ 9ರಂದೇ ಆಪರೇಷನ್ ಆಗಬೇಕಿತ್ತು. ಆದರೆ ಇದುವರೆಗೆ ಯಾವ ದಿನಾಂಕ ಎಂದು ನಿಗದಿ ಮಾಡಿಲ್ಲ. ಈಗಾಗಲೇ ತಿಂಗಳು ಕಳೆಯುತ್ತಾ ಬಂದಿದೆ ಎನ್ನುತ್ತಾರೆ ಖಾನ್. ಹೀಗೆ ದಿನಾಂಕ ಮುಂದೂಡಿದರೆ ನನ್ನ ಪರಿಸ್ಥಿತಿ ಚಿಂತಾಜನಕವಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಯ ಹಾಸಿಗೆಗಳು ಕೊವಿಡ್ 19 ರೋಗಿಗಳಿಗೆ ಮೀಸಲು
ಸುಮಾರು 30 ಸಾವಿರ ಹಾಸಿಗೆಯನ್ನು ಕೊವಿಡ್ 19 ರೋಗಿಗಳಿಗಾಗಿಯೇ ಮೀಸಲಿಡಲಾಗಿದೆ. ತುರ್ತು ಶಸ್ತ್ರ ಚಿಕಿತ್ಸೆಗಳಿದ್ದಲ್ಲಿ ತಪ್ಪದೆ ಮಾಡಲಾಗುತ್ತಿದೆ. ಆದರೆ ಕೊರೊನಾ ಸೋಂಕಿತರು ಹೆಚ್ಚಿರುವ ಕಾರಣ ಅವರ ಬಗ್ಗೆ ಹೆಚ್ಚಿನ ನಿಗಾ ತೆಗೆದುಕೊಳ್ಳಲಾಗುತ್ತಿದೆ. ಆದರೆ ಯಾವುದೇ ರೋಗಿಯನ್ನು ನಿರ್ಲಕ್ಷಿಸಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಪ್ರತಿ ವಾರವು 2300ಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳು ಚಿಕಿತ್ಸೆಗೆಂದು ಬರುತ್ತಾರೆ. ಆದರೆ ಕೊರೊನಾ ಭೀತಿಯಿಂದಾಗಿ ಅವರನ್ನೂ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಾಗುತ್ತಿಲ್ಲ.












Click it and Unblock the Notifications