ಆತ್ಮಹತ್ಯೆ ಮಾಡಿಕೊಂಡ 16 ವರ್ಷದ ಬಾಲಕಿಯ ಶವ 7 ಲಕ್ಷಕ್ಕೆ ಮಾರಾಟ... ಯಾಕೆ ಗೊತ್ತಾ?
ಈ ಜಗತ್ತಿನಲ್ಲಿ ದಿನದಿಂದ ದಿನಕ್ಕೆ ವಿಚಿತ್ರ ಘಟನೆಗಳು ಮತ್ತು ಆಘಾತಕಾರಿ ಘಟನೆಗಳು ನಡೆಯುತ್ತಲೇ ಇರುತ್ತವೆ. ಹೀಗೆ ಕಳೆದ ವಾರ ಚೀನಾದಲ್ಲಿ ನಡೆದ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.
ಆತ್ಮಹತ್ಯೆ ಮಾಡಿಕೊಂಡ 16 ವರ್ಷದ ಮಗಳ ಶವವನ್ನು ಚೀನಾದ ದಂಪತಿ ಮಾರಾಟ ಮಾಡಿದ ಆರೋಪ ಕೇಳಿಬಂದಿದೆ. ಬಾಲಕಿಯ ಮೃತ ದೇಹವನ್ನು 'ಪ್ರೇತ ವಧು' ಎಂದು ಮಾರಾಟ ಮಾಡಲಾಗಿದೆ. ಅಂದಹಾಗೆ ದಂಪತಿಗಳು ಈ ಹಿಂದೆ ಮೃತ ಬಾಲಕಿಯನ್ನು ದತ್ತು ಪಡೆದು ಸಾಕಿದ್ದರು. ಅವರ ವಿರುದ್ಧ ಯಾರೋ ಈ ಆರೋಪ ಮಾಡಿದರೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಈ ಘಟನೆಯ ವಿವರ ಇಲ್ಲಿದೆ.....

ಪ್ರಕರಣದ ವಿವರಗಳು
ಕ್ಸಿಯಾಡನ್ (Xiaodan) ಎಂಬ ಬಾಲಕಿ ಆತ್ಮಹತ್ಯಗೆ ಒಳಗಾಗಿದ್ದವಳು. ಈಕೆ ಪೂರ್ವ ಚೀನಾದ ಶಾಂಡಾಂಗ್ ಪ್ರಾಂತ್ಯದ ಸನ್ (Sun) ಎಂಬಾತನ ಮಗಳು. ಆದರೆ ಕ್ಸಿಯಾಡನ್ ತನ್ನನ್ನು ದತ್ತು ಪಡೆದ ಪೋಷಕರಿಂದ ದೀರ್ಘಕಾಲದಿಂದ ಭಾವನಾತ್ಮಕ ನಿಂದನೆಗೆ ಒಳಗಾಗಿದ್ದಳು. ಹೀಗಾಗಿ ಕಳೆದ ಡಿಸೆಂಬರ್‌ನಲ್ಲಿ ತನ್ನ ಮನೆಯ ಒಂಬತ್ತನೇ ಮಹಡಿಯ ಅಪಾರ್ಟ್‌ಮೆಂಟ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಅಷ್ಟಕ್ಕೂ ಕ್ಸಿಯಾಡನ್ ಅವಳನ್ನು ದತ್ತು ನೀಡಿದ್ದಕ್ಕೂ ಒಂದು ಕಾರಣವಿದೆ. ಸನ್ ಹಾಗೂ ಅವರ ಪತ್ನಿ ಚಿಯಾಡೆನ್ 2006 ರಲ್ಲಿ ಕ್ಸಿಯಾಡನ್ ರನ್ನು ದತ್ತು ನೀಡಿದರು. ಏಕೆಂದರೆ ಅವರಿಗೆ ಈಗಾಗಲೇ ಅವಳಿ ಮಕ್ಕಳಿದ್ದರು. ಹೀಗಾಗಿ ಕ್ಸಿಯಾಡನ್‌ಳನ್ನು ಬೆಳೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ಆಕೆಯನ್ನು ದತ್ತು ನೀಡಲಾಗಿತ್ತು. ಆದರೆ ಕ್ಸಿಯಾಡನ್ ಸಾಕು ಪೋಷಕರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಳು.
ಮೃತ ದೇಹಗಳ ಮಾರಾಟ
ಆಕೆಯ ಮರಣದ ನಂತರ ಝಾಂಗ್ (Zhang) ಎಂಬ ಯುವಕನಿಗೆ ದತ್ತು ಪಡೆದ ಪೋಷಕರು ಕ್ಸಿಯಾಡನ್‌ಳನ್ನು ಮದುವೆ ಮಾಡಿದರು. ಪ್ರತಿಯಾಗಿ ವರನಿಗೆ ವಧುವಿನ ಬೆಲೆಯಾಗಿ 66,000-ಯುವಾನ್ (7.75 ಲಕ್ಷ ರೂಪಾಯಿ) ಹಣವನ್ನು ದತ್ತು ಪೋಷಕರು ವರನಿಗೆ ನೀಡಿದ್ದಾರೆ ಎಂದು ಸನ್ ಆರೋಪಿಸಿದ್ದಾರೆ.

ಪ್ರೇತ ವಿವಾಹಗಳು
ಪ್ರೇತ ವಿವಾಹಗಳು ಚೀನಾದಲ್ಲಿ 3,000 ವರ್ಷಗಳ ಇತಿಹಾಸವನ್ನು ಹೊಂದಿವೆ. ಈಗಲೂ ಇನ್ನೂ ಕೆಲವು ಅಭಿವೃದ್ಧಿಯಾಗದ ಗ್ರಾಮೀಣ ಪ್ರದೇಶಗಳಲ್ಲಿ ಆಚರಣೆಯಲ್ಲಿವೆ. ಪುರಾತನ ಚೀನೀ ಸಂಪ್ರದಾಯವು ಅವಿವಾಹಿತರಾಗಿ ಸಾಯುವ ವ್ಯಕ್ತಿಯು ಮೇಲಿನ ಪ್ರಪಂಚದಲ್ಲಿ ಆಶೀರ್ವದಿಸಲ್ಪಡುವುದಿಲ್ಲ ಮತ್ತು ಅವಿವಾಹಿತರಾಗಿ ಮರಣ ಹೊಂದಿದ ಇತರರೊಂದಿಗೆ ಹೊಂದಿಕೊಳ್ಳಲಾಗುವುದಿಲ್ಲ ಎಂದು ಹೇಳುತ್ತದೆ. ಹೀಗಾಗಿ ಅವಿವಾಹಿತರಾಗಿ ಸಾಯುವವರಿಗೆ ಪ್ರೇತ ಮದುವೆ ಎಂದು ಮಾಡುವ ಪದ್ಧತಿ ಇಂದಿಗೂ ಹಲವೆಡೆ ಚೀನಾದಲ್ಲಿದೆ.
ಚೀನೀ ಸಂಪ್ರದಾಯ
ಸಾಂಪ್ರದಾಯಿಕ ಚೀನೀ ವಿವಾಹಗಳಂತೆ ನವವಿವಾಹಿತರ ಕುಟುಂಬಗಳು ವಧು ಮತ್ತು ವರದಕ್ಷಿಣೆ ಎರಡನ್ನೂ ವಿನಿಮಯ ಮಾಡಿಕೊಳ್ಳುತ್ತವೆ. ಆದರೆ ಇದನ್ನು ಕೆಲವರು ದೂರಿದ್ದಾರೆ. 'ಪ್ರೇತ ಹೆಸರಿನ ವಿವಾಹಗಳು ಆಧುನಿಕ ನಾಗರಿಕತೆಗೆ ಅವಮಾನ " ಎಂದು ಆನ್‌ಲೈನ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರೇತ ವಿವಾಹಗಳ ಸಮಸ್ಯೆ
ಇದರಿಂದಾಗಿ ಚೀನಾದಲ್ಲಿ ಹಲವೆಡೆ ಯುವತಿಯರ ಶವಗಳನ್ನು ಅಥವಾ ಮೂಳೆ ಬೂದಿಯನ್ನು ಕದಿಯುವಂತಹ ಅಪರಾಧಗಳು ನಡೆಯುತ್ತವೆ. ಈ ಪದ್ಧತಿ ವಧುವಿಗೆ ಮಾತ್ರವಲ್ಲ ವರನಿಗೂ ಅನ್ವಯಿಸುತ್ತದೆ. ಒಂದು ವೇಳೆ ಯುವಕನೇ ಸತ್ತರೂ ಅವರಿಗೂ ಹೀಗೆ ಮಾಡಲಾಗುತ್ತದೆ. ಸತ್ತ ಯುವಕನಿಗೂ ವಧುವನ್ನು ಮಾರಾಟ ಮಾಡಲಾಗುತ್ತದೆ. ಸತ್ತ ಶವದೊಂದಿಗೆ ಬದುಕಿದವರ ವಿವಾಹ ಮಾಡಲಾಗುತ್ತದೆ.
ಶಿಕ್ಷೆ ಇಲ್ಲ
ಈ ಘಟನೆ ಬಳಿಕ ಕೌಟುಂಬಿಕ ಹಿಂಸಾಚಾರ ಮತ್ತು ಮೃತ ದೇಹಗಳನ್ನು ಅಪವಿತ್ರಗೊಳಿಸಿದ್ದಕ್ಕಾಗಿ ಸಾಕು ಪೋಷಕರನ್ನು ಶಿಕ್ಷಿಸುವಂತೆ ಸನ್ ಅವರು ಪೊಲೀಸರ ಬಳಿ ಹೋದರು. ಕ್ಸಿಯಾಡೆನ್ ಅವರನ್ನು ದತ್ತು ಪಡೆದ ಪೋಷಕರಿಗೆ 66,000-ಯುವಾನ್ ಹಣ ವರ್ಗಾವಣೆಯ ಪುರಾವೆಗಳನ್ನು ನೀಡದ ಹೊರತಾಗಿಯೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರೇತ ವಿವಾಹಗಳಲ್ಲಿ ಭಾಗಿಯಾಗಿರುವವರನ್ನು ಶಿಕ್ಷಿಸಲು ಯಾವುದೇ ಕಾನೂನು ಆಧಾರವಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಶಾಂಘೈ ಅಕಾಡೆಮಿ ಆಫ್ ಸೋಶಿಯಲ್ ಸೈನ್ಸಸ್ ಇನ್‌ಸ್ಟಿಟ್ಯೂಟ್ ಆಫ್ ಲಾ ನಿರ್ದೇಶಕರು, ಚೀನಾದ ಕಾನೂನಿನ ಪ್ರಕಾರ ಪ್ರೇತ ವಿವಾಹಗಳನ್ನು ಏರ್ಪಡಿಸುವುದು ಅಪರಾಧವಲ್ಲ. ಈ ಹಿಂದೆಯೂ ಇಂಥಹ ಪ್ರಕರಣಗಳು ನಡೆದಿವೆ. ಅವುಗಳಲ್ಲಿ ಶವಗಳನ್ನು ಕದಿಯುವುದು ಮತ್ತು ವಿರೂಪಗೊಳಿಸುವಂತಹ ಇತರ ತಪ್ಪುಗಳಿಗೆ ಮಾತ್ರ ಶಿಕ್ಷೆ ನೀಡಲಾಗಿದೆ ಎಂದು ಹೇಳಿದರು.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications