ತಂದೆಯ ಆಹಾರ ಮಗು ಆರೋಗ್ಯವನ್ನು ನಿರ್ಧರಿಸುತ್ತದೆ!

ಹೌದು ಅಪ್ಪನ ಆಹಾರ ಮತ್ತು ಆತನ ದೇಹತೂಕ ತಾಯಿಯಷ್ಟೇ ಪರಿಣಾಮ ಬೀರುತ್ತದೆ ಎಂಬುದು ಇದೀಗ ತಿಳಿದುಬಂದಿದೆ. ದಪ್ಪಗಿನ ಅಪ್ಪ ಮಗುವಿನ ಪ್ಯಾಕ್ರಿಯಾಸ್ (ಮೇದೋಜೀರಕ ಗ್ರಂಥಿ) ಮೇಲೆ ಪರಿಣಾಮ ಬೀರಬಹುದು.
ಮಗುವಿನ ದೇಹತೂಕದ ಮೇಲೂ ಪರಿಣಾಮ ಬೀರಬಲ್ಲದು. ಅಪ್ಪ ದಪ್ಪಗಿದ್ದಾಗ ಮಗು ಮಧುಮೇಹ, ದಢೂತಿ ದೇಹ, ಮಾರಕ ಕಾಯಿಲೆ ವರ್ಗಾವಣೆ ಮತ್ತು ಬೇಗನೇ ವಯಸ್ಸಾಗುವುದು ಕಂಡುಬರುತ್ತದೆ. ( ಹಂದಿ ಮತ್ತು ಚಿಂಪಾಂಜಿ ಸಂತತಿಯೇ ಮನುಷ್ಯ! )
ಗರ್ಭಧರಿಸುವ ಸಂದರ್ಭದಲ್ಲಿ ಮಗುವಿನ ಅಪ್ಪನ ಆಹಾರ ಸೇವನೆ, ದೇಹದ ತೂಕ, ಆರೋಗ್ಯ ಮತ್ತು ಜನನದ ನಂತರ ಮಗುವಿನ ಆರೋಗ್ಯದ ಮಧ್ಯೆ ಜೈವಿಕ ಸಂಬಂಧವಿರುತ್ತದೆ ಎನ್ನುತ್ತದೆ FASEB Journal.
ಈ ತೀರ್ಮಾನಕ್ಕೆ ಬಂದಿದ್ದಾದರೂ ಹೇಗೆ?
ವರದಿಯ ಪ್ರಕಾರ 2 ತಂಡಗಳಲ್ಲಿ ಪುರುಷ ಇಲಿಗಳನ್ನು ಪ್ರಯೋಗಕ್ಕೆ ಒಳಪಡಿಸಲಾಗಿತ್ತು. ಅದರಲ್ಲೊಂದು ಇಲಿ ದಪ್ಪಕ್ಕಿದ್ದು, ಮಧುಮೇಹಯಾಗಿತ್ತು. ಅದಕ್ಕೆ ಮತ್ತಷ್ಟು ಹೆಚ್ಚು ಕೊಬ್ಬಿನಾಂಶದ ಆಹಾರ ನೀಡಲಾಗಿತ್ತು. ಮತ್ತೊಂದು ತಂಡದಲ್ಲಿದ್ದ ಇಲಿ ತೆಳ್ಳಗೆ, ಆರೋಗ್ಯಪೂರ್ಣವಾಗಿತ್ತು. ಅದಕ್ಕೆ ಸಾಮಾನ್ಯ ಆಹಾರ ನೀಡಲಾಗಿತ್ತು.
ಇವೆರಡೂ ತಂಡಗಳಲ್ಲಿದ್ದ ಭಿನ್ನ ಇಲಿಗಳನ್ನು ಸೃಷ್ಟಿ ಕ್ರಿಯೆಯಲ್ಲಿ ತೊಡಗಿಸಲಾಯಿತು. ಮುಂದೆ ಮರಿ ಇಲಿಗಳ ಆರೋಗ್ಯಭಾಗ್ಯವನ್ನು ಸಂಶೋಧನೆಗೊಳಪಡಿಸಲಾಗಿತ್ತು. ದಪ್ಪನೆಯ ಇಲಿಗಳಿಂದ ಗುಟ್ಟಿದ ಮರಿಗಳು ಗ್ಲೋಕೋಸ್ ಟೆಸ್ಟ್ ನಲ್ಲಿ ಅನುತ್ತೀರ್ಣಗೊಂಡವು. ಗಮನಿಸಿ, ಜನನದ ನಂತರ ಉತ್ತಮ/ ಸಮತೋಲಿತ ಆಹಾರ ನೀಡಿದರೂ ಅವುಗಳ ಆರೋಗ್ಯ ಅಷ್ಟಕ್ಕಷ್ಟೇ ಇತ್ತು.
ಮನುಷ್ಯರಲ್ಲಿಯೂ ಇದೇ ಫಲಿತಾಂಶ ಕಂಡುಬರುತ್ತದೆ ಎಂಬುದನ್ನು ಅಧ್ಯಯನಗಳಿಂದ ತಿಳಿದುಕೊಳ್ಳುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿದೆ ಎಂದು FASEB Journal ಪ್ರಧಾನ ಸಂಪಾದಕ Gerald Weissmann ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications