ಡಿಸ್ ಲೈಕ್ ಬಟನ್ ಬರ್ತಾಯಿದೆ.. ಬರ್ಲಿ ಬರ್ಲಿ ಬರ್ಲಿ!

ಹ್ಯೂಸ್ಟನ್, ಸೆಪ್ಟೆಂಬರ್, 16 : ಫೇಸ್ ಬುಕ್ ನಲ್ಲಿ ಸಾವಿನ ಸುದ್ದಿಯಿಂದ ಹಿಡಿದು ಮನಕ್ಕೆ ಖುಷಿ ನೀಡುವ ಹಲವಾರು ವೈವಿಧ್ಯಮಯ ಅಂಶಗಳು ಹರಿದಾಡುತ್ತಲೇ ಇರುತ್ತವೆ. ಇದರಲ್ಲಿ ಮನಕ್ಕೆ ನೋವಾದ ಸಂಗತಿಯಾಗಿದ್ದರೂ, ಅಪ್ ಲೋಡ್ ಮಾಡಿದ ಸ್ಟೇಟಸ್ ಇಷ್ಟವಾಗದಿದ್ದರೂ ಕಣ್ಣು ಮುಚ್ಚಿ ಲೈಕ್ ಬಟನ್ ಒತ್ತುತ್ತಿದ್ದೆವು. ಆದರೆ ಇವುಗಳಿಗೆಲ್ಲಾ ಸಂಪೂರ್ಣ ತೆರೆಬೀಳುವ ಕಾಲ ಸನ್ನಿಹಿತವಾಗಿದೆ.

ಕೆಲವೊಮ್ಮೆ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಆಗುವ ಕಾಟಚಾರದ ಪ್ರವೃತ್ತಿಗಳಿಗೆ ಒಲ್ಲದ ಮನಸ್ಸಿನಿಂದ ಲೈಕ್ ಕೊಟ್ಟು, ಕೊಟ್ಟು ಸುಸ್ತಾದ ಮಂದಿ ಇದರಲ್ಲಿ ಡಿಸ್ ಲೈಕ್ ಬಟನ್ ಇದ್ದಿದ್ದರೆ ಎಂದು ಹಲವಾರು ವರ್ಷಗಳಿಂದ ಪರಿತಪಿಸುತ್ತಿದ್ದರು. ಇದೀಗ ಈ ಎಲ್ಲದಕ್ಕೂ ಕಾಲ ಕೂಡಿ ಬಂದಿದ್ದು, ಯದ್ವಾ ತದ್ವಾ ಸ್ಟೇಟಸ್ ಹಾಕುವ ಪ್ರವೃತ್ತಿಗಳಿಗೆ ಕಡಿವಾಣ ಬೀಳುವುದಂತೂ ಖಂಡಿತ.[ರಾಜ್ ಯೂಸ್ಲೆಸ್ ನಟ ಅನ್ನೋಕೆ ಎಷ್ಟು ಧೈರ್ಯ ಇವನಿಗೆ?]

Facebook to introduce 'dislike' button

ನಾವು ನಮ್ಮ ಸ್ನೇಹಿತರ ಎಲ್ಲಾ ಸ್ಟೇಟಸ್ ಓದುತ್ತೇವೋ ಬಿಡುತ್ತೇವೋ ಗೊತ್ತಿಲ್ಲ. ಆದರೆ ನನ್ನದೊಂದು ಲೈಕ್ ಇರಲಿ ಎಂದು ಬಟನ್ ಒತ್ತಿ ಅವರಿಗೆ ನಮ್ಮ ಮೇಲಿರುವ ಭಾವನೆಯನ್ನು ಇಮ್ಮಡಿಗೊಳಿಸಲು ಪ್ರಯತ್ನಿಸುತ್ತಿದ್ದೆವು. ಆ ಸ್ಟೇಟಸ್ ಬಗ್ಗೆ ಇಷ್ಟವಿಲ್ಲದಿದ್ದರೂ, ಇಷ್ಟವಿದೆ ಎಂದು ಫೇಸ್ ಬುಕ್ ನಲ್ಲಿ ನಾಟಕ ವೇದಿಕೆ ನಿರ್ಮಿಸಿದ್ದೆವು.

ಆದರೆ ಇದೀಗ ಇನ್ನುಮುಂದೆ ನಿಮಗೆ ಇಷ್ಟವಿಲ್ಲದ ಸಂಗತಿಯ ಭಾವನೆ ವ್ಯಕ್ತಪಡಿಸಲು, ಸಾವಿನ ನೋವಿನ ಅಳಲನ್ನು ತೋಡಿಕೊಳ್ಳಲು ಫೇಸ್ ಬುಕ್ ಇದೀಗ ಡಿಸ್ ಲೈಕ್ ಬಟನ್ ಜಾರಿಗೆ ತರಲು ಎಲ್ಲಾ ಸಿದ್ಧತೆ ನಡೆಸಿದೆ.

ಡಿಸ್ ಲೈಕ್ ಬಟನ್ ನ ಲಾಭದ ಕುರಿತಾಗಿ ಚಿಂತಿಸಿದ ಸಾವಿರಾರು ಜನರಿಂದ ಅಭಿಪ್ರಾಯ ಸಂಗ್ರಹಿಸಿದ ಮಾರ್ಕ್ ಜುಕರ್ ಬರ್ಗ್ ಹಾಗೂ ಸದಸ್ಯರ ತಂಡ ಇದನ್ನು ಜಾರಿಗೆ ತರಲು ನಿರ್ಣಯ ತೆಗೆದುಕೊಂಡಿದೆ. ಇದರಿಂದ ತಮ್ಮ ಸ್ನೇಹಿತರ ಸ್ಟೇಟಸ್ ತಕ್ಕಂತೆ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶ ಮಾಡಿಕೊಟ್ಟಂತಾಗಿದೆ.

ಡಿಸ್ ಲೈಕ್ ಆಯ್ಕೆಯು ರೆಡಿಟ್ ಶೈಲಿ(Reddit-style)ನ್ನು ಕಡೆಗಣಿಸಿದ್ದು, ಇದು ಕೇವಲ ಅಪ್ ವೋಟಿಂಗ್ ಮತ್ತು ಡೌನ್ ವೋಟಿಂಗ್ ವ್ಯವಸ್ಥೆಯನ್ನು ಮಾತ್ರ ಅನುಸರಿಸಲಿದೆ ಎಂದು ಇದರ ಕಾರ್ಯಶೈಲಿಯ ಕುರಿತಾಗಿ ಜುಕರ್ ಬರ್ಗ್ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+