Iran War: ಯುದ್ಧ ನಿಂತು ಹೋಯ್ತು, ಹಾಗಾದ್ರೆ ಇರಾನ್ ಸುಪ್ರೀಂ ಲೀಡರ್ ಈಗ ಎಲ್ಲಿ?

ಇರಾನ್ & ಇಸ್ರೇಲ್ ನಡುವೆ ಶುರುವಾಗಿದ್ದ ರಣಭೀಕರ ಯುದ್ಧಕ್ಕೆ ಬ್ರೇಕ್ ಬಿದ್ದಿದೆ, ಎರಡೂ ದೇಶಗಳನ್ನು ಸೈಲೆಂಟ್ ಮಾಡುವಲ್ಲಿ ಅಮೆರಿಕ ಸಕ್ಸಸ್ ಆಗಿದೆ. ಹೀಗೆ ಮಧ್ಯಪ್ರಾಚ್ಯದಲ್ಲಿ ಹೊತ್ತಿಕೊಂಡ ದೊಡ್ಡ ಕಿಚ್ಚು ತಣ್ಣಗೆ ಆಗಿದೆ. ಇರಾನ್ ಯಾವ ಕ್ಷಣದಲ್ಲಿ ಪರಮಾಣು ಯುದ್ಧಕ್ಕೆ ಸಿದ್ಧವಾಗುತ್ತದೋ ಅನ್ನೋ ಆತಂಕ & ಭಯ ತೀವ್ರವಾಗಿ ಇಡೀ ಜಗತ್ತನ್ನು ಕಾಡುತ್ತಿತ್ತು. ಇಂತಹ ಸಮಯದಲ್ಲೇ ದಿಢೀರ್ ಯುದ್ಧಕ್ಕೆ ಬ್ರೇಕ್ ಬಿದ್ದು ಎಲ್ಲವೂ ಕೂಲ್ ಕೂಲ್ ಆಗಿದೆ. ಹಾಗಾದ್ರೆ ಈಗ, ಇರಾನ್ ಸುಪ್ರೀಂ ಲೀಡರ್ ಎಲ್ಲಿ?

ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಸಾಲು ಸಾಲು ಸಮಸ್ಯೆಯ ಸುಳಿಗೆ ಅಮೆರಿಕ ಸಿಲುಕುತ್ತಿದೆ, ಈ ಮೂಲಕ ಸಿಕ್ಕಾಪಟ್ಟೆ ಸಮಸ್ಯೆ ಸೃಷ್ಟಿಯಾಗುತ್ತಿದೆ ಅನ್ನೋ ಆರೋಪ ಇದೆ. ಹೀಗಿದ್ದರೂ ಅಮೆರಿಕದಲ್ಲಿ 2ನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಡೊನಾಲ್ಡ್ ಟ್ರಂಪ್ ಯಾವುದಕ್ಕೂ ಕೇರ್ ಮಾಡುತ್ತಿಲ್ಲ ಅಂತಾ ಅಲ್ಲಿನ ವಿರೋಧ ಪಕ್ಷದ ನಾಯಕರು ಆರೋಪ ಮಾಡುತ್ತಿದ್ದರು. ಆದರೆ ಹಂಗೋ & ಹಿಂಗೋ ಮಾಡಿ ಇರಾನ್, ಇಸ್ರೇಲ್ ನಡುವೆ ರಾಜಿ ಮಾಡಿಸಿ ಕದನ ವಿರಾಮ ಘೋಷಣೆ ಮಾಡಿಸಿದ್ದಾರೆ ಡೊನಾಲ್ಡ್ ಟ್ರಂಪ್. ಆದರೆ, ಇದೇ ಸಮಯದಲ್ಲಿ ಮಿಲಿಯನ್ ಡಾಲರ್ ಪ್ರಶ್ನೆಯೊಂದು ಕಾಡುತ್ತಿದೆ. ಅದು ಏನಂದ್ರೆ, ಇರಾನ್ ಸುಪ್ರೀಂ ಲೀಡರ್ ಈಗ ಎಲ್ಲಿ?

Explore Where Is Iran Supreme Leader Ali Hosseini Khamenei After The Ceasefire

ಅಲಿ ಖಮೇನಿ ಈಗ ಎಲ್ಲಿ?

ಅಂದಹಾಗೆ ಇರಾನ್ & ಇಸ್ರೇಲ್ ನಡುವೆ ಭೀಕರ ಬಡಿದಾಟ ಶುರುವಾಗಿ, ಒಬ್ಬರು ಮತ್ತೊಬ್ಬರ ಮೇಲೆ ಈ ರೀತಿಯಾಗಿ ಭಾರಿ ಘೋರ ದಾಳಿ ನಡೆಸುವ ಸಮಯದಲ್ಲಿ ಅಲಿ ಖಮೇನಿ ಎಸ್ಕೇಪ್ ಆಗಿದ್ದರು ಎನ್ನಲಾಗಿತ್ತು. ಆದರೆ ಇರಾನ್ ಸುಪ್ರೀಂ ಲೀಡರ್ ಅಲಿ ಖಮೇನಿ ಇರುವ ಜಾಗ ಮಾತ್ರ ಈಗಲೂ ಗುಟ್ಟಾಗಿಯೇ ಇದೆ. ಈ ಹಿನ್ನೆಲೆಯಲ್ಲಿ ಹೊಸ ಚರ್ಚೆ ಕೂಡ ಶುರುವಾಗಿದೆ, ಯುದ್ಧ ನಿಂತು ಹೋಗಿದ್ದರೂ ಅಲಿ ಖಮೇನಿ ಯಾಕೆ ಹೊರಗೆ ಬಂದಿಲ್ಲ? ಅಲಿ ಖಮೇನಿ ಈಗಲೂ ಕಣ್ಮರೆ ಆಗಿರುವುದು ಯಾಕೆ? ಅಂತೆಲ್ಲಾ ಚರ್ಚೆಗಳು ಶುರು ಆಗಿವೆ.

ಅಮೆರಿಕ ದಾಳಿಯಲ್ಲಿ ನಷ್ಟ ಆಗಿದ್ದು ನಿಜ

ಇರಾನ್ ದೇಶದ ಪರಮಾಣು ಸ್ಥಾವರಗಳು ಅಮೆರಿಕದ ಭೀಕರ ದಾಳಿ ನಂತರ ಘೋರವಾಗಿ ಹಾನಿಗೀಡಾಗಿವೆ ಎಂಬುದನ್ನ ಸ್ವತಃ ಇರಾನ್ ದೇಶವೇ ಒಪ್ಪಿಕೊಂಡಿದೆ. ಅಮೆರಿಕದ ಬಿ -2 ಬಾಂಬರ್‌ ಜೆಟ್ ದಾಳಿ ನಂತರ ಇರಾನ್ ದೇಶದ ಪರಮಾಣು ಸ್ಥಾವರಗಳು ದೊಡ್ಡ ಹಾನಿ ಅನುಭವಿಸಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ ಇರಾನ್ ಅಧಿಕಾರಿಗಳು. ಇಷ್ಟೆಲ್ಲಾ ನಡೆದರೂ ಇರಾನ್ ಮಾತ್ರ ತನ್ನ ಪರಮಾಣು ಕಾರ್ಯಕ್ರಮ ನಿಲ್ಲಿಸುವ ಮನಸ್ಸು ಮಾಡಿಲ್ಲ, ಇದರ ಜೊತೆಗೆ ಇಸ್ರೇಲ್ ವಿರುದ್ಧ ಈಗಲೂ ಹಲ್ಲು ಮಸೆಯುತ್ತಿದೆ. ಈಗಾಗಿ ತಕ್ಷಣಕ್ಕೆ ಯುದ್ಧ ನಿಂತಿದ್ದರೂ ಮಧ್ಯಪ್ರಾಚ್ಯದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+