ಇರಾನ್ & ಇಸ್ರೇಲ್ ಯುದ್ಧ ನಿಲ್ಲಿಸಿದಂತೆ ಉಕ್ರೇನ್ & ರಷ್ಯಾ ಯುದ್ಧಕ್ಕೂ ಬ್ರೇಕ್?
ಬರೀ ಹೊಡೆದಾಟ, ಬಡಿದಾಟದ ಜೊತೆಗೆ ಹಿಂಸಾಚಾರದ ಬಲೆಯಲ್ಲಿ ಸಿಲುಕಿ ನಲುಗಿ ಹೋಗಿರುವ ಉಕ್ರೇನ್ ದೇಶದ ಜನರಿಗೆ ಈಗ ನೆಮ್ಮದಿ ಬೇಕಿದೆ. ಯುದ್ಧ ನಿಲ್ಲಿಸಲು ರಷ್ಯಾ ಜೊತೆಗೆ ಒಪ್ಪಂದ ಮಾಡಿಕೊಂಡು & ಆ ಮೂಲಕ ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡಬೇಕಿದೆ. ಆದರೂ ಅದು ಸಾಧ್ಯವಾಗುತ್ತಿಲ್ಲ, ಕಳೆದ 3 ವರ್ಷಗಳಿಂದಲೂ ನಿರಂತರವಾಗಿ ಬಡಿದಾಟ ನಡೆಯುತ್ತಿದ್ದು ಇದೀಗ 4ನೇ ವರ್ಷ ಮುಗಿಸಲು ಕೂಡ ಮುಂದೆ ನುಗ್ಗುತ್ತಿದೆ ರಷ್ಯಾ & ಉಕ್ರೇನ್ ವಾರ್. ಇಂತಹ ಸಮಯದಲ್ಲೇ ಯುದ್ಧಕ್ಕೆ ಬ್ರೇಕ್ ಹಾಕಲು ಮಾಸ್ಟರ್ ಪ್ಲಾನ್ ಮಾಡಿದೆಯಂತೆ ಅಮೆರಿಕ ಸರ್ಕಾರ!
ಹೌದು, ರಷ್ಯಾ & ಉಕ್ರೇನ್ ಯುದ್ಧ ಶುರುವಾದ ನಂತರ ಜಗತ್ತಿನಲ್ಲಿ ನೆಮ್ಮದಿಯೇ ಇಲ್ಲ. ಯಾಕಂದ್ರೆ ಈ ಯುದ್ಧ ಶುರುವಾದ ನಂತರ ಸಾಲು ಸಾಲು ಗಲಾಟೆಗಳು ಎದುರಾಗಿವೆ. ಈ ಮೂಲಕ ಹೊಸ ಹೊಸದಾಗಿ ತಿಕ್ಕಾಟ ಜೋರಾಗಿ ಯುದ್ಧಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಹೀಗಿದ್ದಾಗಲೇ ಮೊನ್ನೆ ಮೊನ್ನೆ ಇಸ್ರೇಲ್ & ಇರಾನ್ ಕೂಡ ಜೋರಾಗಿ ಬಡಿದಾಡಿಕೊಂಡವು. ಹಾಗೇ ಒಬ್ಬರ ಮೇಲೆ ಮತ್ತೊಬ್ಬರು ಪರಮಾಣು ಬಾಂಬ್ ಹಾಕುವ ಹಂತಕ್ಕೆ ಕೂಡ ಬಂದು ನಿಂತಿದ್ದರು. ಹೀಗಿದ್ದಾಗಲೇ ಭರ್ಜರಿ ಸುದ್ದಿಯೊಂದು ಈಗ ಸಿಗುತ್ತಿದ್ದು, ರಷ್ಯಾ ಮತ್ತು ಉಕ್ರೇನ್ ಬಡಿದಾಟಕ್ಕೆ ಬ್ರೇಕ್ ಬೀಳುವುದು ಬಹುತೇಕ ಗ್ಯಾರಂಟಿ ಆಗಿದೆ.

ಶಾಂತಿ... ಶಾಂತಿ... ಶಾಂತಿ...
ಟ್ರಂಪ್ ಅವರಿಗೆ ಒಂದಾದ ನಂತರ ಒಂದು ತಲೆನೋವು ಎದುರಾಗುತ್ತಿದ್ದು, ಚಿಂತೆ ಕೂಡ ಜೋರಾಗಿದೆ. ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಸಾಲು ಸಾಲು ಸಮಸ್ಯೆಯ ಸುಳಿಗೆ ಅಮೆರಿಕ ಸಿಲುಕುತ್ತಿದೆ, ಈ ಮೂಲಕ ಸಿಕ್ಕಾಪಟ್ಟೆ ಸಮಸ್ಯೆ ಸೃಷ್ಟಿಯಾಗುತ್ತಿದೆ ಅನ್ನೋ ಆರೋಪ ಇದೆ. ಹೀಗಿದ್ದರೂ ಅಮೆರಿಕದಲ್ಲಿ 2ನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಡೊನಾಲ್ಡ್ ಟ್ರಂಪ್ ಯಾವುದಕ್ಕೂ ಕೇರ್ ಮಾಡುತ್ತಿಲ್ಲ ಅಂತಾ ಅಲ್ಲಿನ ವಿರೋಧ ಪಕ್ಷದ ನಾಯಕರು ಆರೋಪ ಮಾಡುತ್ತಿದ್ದರು.
ಆದರೆ ಹಂಗೋ & ಹಿಂಗೋ ಮಾಡಿ ಇರಾನ್, ಇಸ್ರೇಲ್ ನಡುವೆ ರಾಜಿ ಮಾಡಿಸಿ ಕದನ ವಿರಾಮ ಘೋಷಣೆ ಮಾಡಿಸಿದ್ದಾರೆ ಡೊನಾಲ್ಡ್ ಟ್ರಂಪ್. ಹೀಗಿದ್ದಾಗ, ಉಕ್ರೇನ್ & ರಷ್ಯಾ ಬಡಿದಾಟಕ್ಕೂ ಬ್ರೇಕ್ ಹಾಕಿಸುತ್ತಾರಾ? ಅನ್ನೋ ಚರ್ಚೆ ಶುರುವಾಗಿದೆ. ಈ ಚರ್ಚೆಗೆ ಒಂದು ರೀತಿಯಲ್ಲಿ ಉತ್ತರ ಕೂಡ ಸಿಗುತ್ತಿದ್ದು, ಅಮೆರಿಕದ ಅಧಿಕಾರಿಗಳು ಯುದ್ಧ ನಿಲ್ಲಿಸಲು ಮಾಸ್ಟರ್ ಪ್ಲಾನ್ ಮಾಡಿದ್ದಾರಂತೆ.
ಯುದ್ಧ ನಿಲ್ಲಿಸಲು ಟ್ರಂಪ್ ಮಾಸ್ಟರ್ ಪ್ಲಾನ್?
ಅಂದಹಾಗೆ ರಷ್ಯಾ & ಉಕ್ರೇನ್ ನಡುವಿನ ಭೀಕರ ಯುದ್ಧ ನಿಲ್ಲಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದೀಗ ಭಾರಿ ಭರ್ಜರಿ ದೊಡ್ಡ ಪ್ಲಾನ್ ಮಾಡಿದ್ದಾರಂತೆ. ಈಗಾಗಲೇ ಈ ವಿಚಾರವಾಗಿ ಅಮೆರಿಕ ಸರ್ಕಾರದ ಅಧಿಕಾರಿಗಳು ಮಾತುಕತೆ ಮುಂದುವರಿಸಿದ್ದು, ಇರಾನ್ & ಇಸ್ರೇಲ್ ರೀತಿಯಲ್ಲೇ ಉಕ್ರೇನ್ & ರಷ್ಯಾ ಯುದ್ಧಕ್ಕೂ ಬ್ರೇಕ್ ಹಾಕುವುದು ಬಹುತೇಕ ಗ್ಯಾರಂಟಿ ಎನ್ನಲಾಗುತ್ತಿದೆ. ಇನ್ನು 2 ಅಥವಾ 3 ತಿಂಗಳ ಒಳಗೆ ಈ ಯುದ್ಧಕ್ಕೆ ಬ್ರೇಕ್ ಬೀಳುವ ನಿರೀಕ್ಷೆ ದಟ್ಟವಾಗಿದೆ.












Click it and Unblock the Notifications