3ನೇ ಮಹಾಯುದ್ಧ ಶುರು... ಇರಾನ್ ವಿರುದ್ಧ ಅಮೆರಿಕ ಭೀಕರ ದಾಳಿ ಮಾಡಿದ್ದರ ಪರಿಣಾಮ ಏನಾಗಬಹುದು?

ಎಲ್ಲವೂ ಹಾಳಾಗಿ ಹೋಗುತ್ತಿದೆ, 1ನೇ ಮಹಾಯುದ್ಧ & 2ನೇ ಮಹಾಯುದ್ಧದ ನಂತರ ಈ ಭೂಮಿ ಮೇಲೆ ಮತ್ತೊಂದು ಮಹಾಯುದ್ಧ ನಡೆಯಬಾರದು ಅಂತಾ ಮನುಷ್ಯರು ಮಾಡಿದ್ದ ಶಪಥ ಕೊನೆಯಾಗಿದೆ. ಈ ಸಮಯದಲ್ಲಿ ಇರಾನ್ & ಇಸ್ರೇಲ್ ನಡುವಿನ ಯುದ್ಧದಲ್ಲಿ ಅಮೆರಿಕ ಎಂಟ್ರಿ ಕೊಟ್ಟಿದ್ದೇ ತಡ ಅಧಿಕೃತವಾಗಿ ಈ ಯುದ್ಧ ಇನ್ನಷ್ಟು ಭಯ ಹುಟ್ಟಿಸಿದೆ. ಇದರ ಜೊತೆಗೆ 3ನೇ ಮಹಾಯುದ್ಧಕ್ಕೂ ಇಲ್ಲಿಂದಲೇ ರಣಕಹಳೆ ಮೊಳಗಿದಂತೆ ಕಾಣುತ್ತಿದೆ. ಹಾಗಾದ್ರೆ, ಇರಾನ್ ವಿರುದ್ಧ ಅಮೆರಿಕ ಭೀಕರ ದಾಳಿ ಮಾಡಿದ್ದರ ಪರಿಣಾಮ ಏನಾಗಬಹುದು?

ಯುದ್ಧ.. ಯುದ್ಧ.. ಎಲ್ಲಿ ನೋಡಿದರೂ ಬರೀ ಯುದ್ಧದ ವಿಷಯ ಚರ್ಚೆಗೆ ಬರುತ್ತಿದೆ. ಈ ರೀತಿಯಾಗಿ ಭಾರಿ ಘೋರವಾಗಿ ಯುದ್ಧಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ಕೂಡ ಎಲ್ಲೆಲ್ಲೂ ಮನೆ ಮಾಡಿದೆ. ಒಂದು ಕಡೆ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಪ್ರಯತ್ನ ಮಾಡುತ್ತಿರುವ ಅಮೆರಿಕ ಇದೀಗ ಇರಾನ್ ವಿರುದ್ಧ ಭೀಕರ ದಾಳಿ ಶುರು ಮಾಡಿದೆ. ಇಸ್ರೇಲ್ ಜೊತೆಗೆ ಕೈಜೋಡಿಸಿ ಅಮೆರಿಕ ಹೀಗೆ ದಾಳಿ ಶುರು ಮಾಡಿರುವುದು ಭಾರಿ ಆತಂಕ ಸೃಷ್ಟಿ ಮಾಡಿದೆ. ಯಾಕಂದ್ರೆ, ಅಮೆರಿಕ ದಾಳಿ ಮಾಡಿರುವ ಕೋಪಕ್ಕೆ ಇದೀಗ ಇರಾನ್ ಪರಮಾಣು ಬಾಂಬ್ ಬಳಕೆ ಮಾಡುತ್ತಾ? ಎಂಬ ಅನುಮಾನ ಮೂಡಿದೆ.

Explore What Can Happen Next In Middle East After America Entry In Iran Matter

3ನೇ ಮಹಾಯುದ್ಧ ಶುರು?

ಅಮೆರಿಕ & ಇರಾನ್ ನಡುವೆ ದ್ವೇಷ ಶುರುವಾಗಿ ಹಲವು ದಶಕಗಳೇ ಕಳೆದು ಹೋಗಿವೆ. ಆದರೆ ಈ ದ್ವೇಷ ಕಡಿಮೆ ಆಗುವ ಬದಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗಿತ್ತು. ಮತ್ತೊಂದು ಕಡೆ ಯಾವಾಗ ಇದೇ ಇರಾನ್ ಪರಮಾಣು ಬಾಂಬ್ ಪರೀಕ್ಷೆ ಮಾಡಲು ಮುಂದಾಗಿತ್ತೋ ಆಗಲೇ ನೋಡಿ ಜಗಳ ಜೋರಾಗಿದ್ದು, ಬಡಿದಾಟ ಹೆಚ್ಚಾಗಿದ್ದು.

ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಬಾಂಬ್ ಪಡೆಯಬಾರದು ಎಂಬ ಶಪಥ ಮಾಡಿರುವ ಅಮೆರಿಕ ತೊಡೆತಟ್ಟಿ ನಿಂತಿದೆ. ಅಲ್ಲದೆ, ಮತ್ತೊಂದು ಕಡೆ ಇವರ ನಡುವಿನ ತಿಕ್ಕಾಟ ಜೋರಾಗಿ, ಇದೀಗ ಇಸ್ರೇಲ್ ಕೂಡ ಭಾರಿ ದೊಡ್ಡ ಪ್ರಮಾಣದ ದಾಳಿ ಮಾಡಿತ್ತಿತ್ತು. ಇಂತಹ ಸೂಕ್ಷ್ಮ & ಸಂದಿಗ್ಧ ಪರಿಸ್ಥಿತಿಯಲ್ಲಿ ಇರಾನ್ ವಿರುದ್ಧ ನೇರವಾಗಿ ದಾಳಿ ಶುರು ಮಾಡಿದೆ ಅಮೆರಿಕ ಸೇನೆ.

ಯುದ್ಧಕ್ಕೆ ರಷ್ಯಾ ಎಂಟ್ರಿ ಕೊಡುತ್ತಾ?

ರಷ್ಯಾ & ಅಮೆರಿಕ ಹೊಡೆದಾಡುತ್ತಾ ಬಂದಿದ್ದು, ಹಾವು & ಮುಂಗುಸಿ ರೀತಿ ಎರಡೂ ದೇಶಗಳು ಫೈಟಿಂಗ್ ಮಾಡುತ್ತಿವೆ. ಹೀಗಾಗಿ ಅಮೆರಿಕದ ಶತ್ರು ದೇಶಗಳ ಜೊತೆಗೆ ರಷ್ಯಾ ಸಂಬಂಧ ಬೆಳೆಸುತ್ತಿದ್ದು, ಅಮೆರಿಕದ ಶತ್ರು ದೇಶಗಳಿಗೆ ಬೆಂಬಲ ನೀಡುತ್ತಿದೆ ರಷ್ಯಾ. ಇಂತಹ ಸಮಯದಲ್ಲೇ, ರ‍ಷ್ಯಾ ದೇಶದ ಗೆಳೆಯ ಇರಾನ್ ವಿರುದ್ಧ ಇಸ್ರೇಲ್ ಯುದ್ಧ ಸಾರಿದ್ದು ಇದೇ ಸಮಯದಲ್ಲೇ ಮತ್ತೊಂದು ದೊಡ್ಡ ಅನುಮಾನ ಕಾಡುತ್ತಿದೆ! ಅದು ಏನೆಂದರೆ ಅಮೆರಿಕ ಶತ್ರು ರಷ್ಯಾ ಕೂಡ ಇರಾನ್ ಪರವಾಗಿ ಯುದ್ಧದ ಅಖಾಡಕ್ಕೆ ಪ್ರವೇಶ ಮಾಡುತ್ತಾ? ಎಂಬ ಪ್ರಶ್ನೆ ಕಾಡುತ್ತಿದೆ. ಈಗಾಗಲೇ ಅಮೆರಿಕ ವಿರುದ್ಧ ಈ ವಿಚಾರದಲ್ಲಿ ರಷ್ಯಾ ವಾರ್ನಿಂಗ್ ಕೊಟ್ಟಿದ್ದು, ಈಗಿರುವ ಪರಿಸ್ಥಿತಿಯಲ್ಲಿ ರಷ್ಯಾ ಎಂಟ್ರಿ ಕೊಡುವುದು ಕೂಡ ಅನುಮಾನ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+