ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಬಾಲಕಿ ಪೂಜಾ ಚಂದ್ರಶೇಖರ್ ಸಂದರ್ಶನ

|
Google Oneindia Kannada News

ಬೆಂಗಳೂರಿನ ಬಾಲಕಿ ಪೂಜಾ ಚಂದ್ರಶೇಖರ್ ಕಳೆದವಾರ ದೇಶಾದ್ಯಂತ ಸುದ್ದಿ ಮಾಡಿದ್ದಳು. ಅಮೆರಿಕದ ಪ್ರತಿಷ್ಠಿತ ಐವಿ ಲೀಗ್ ವಿಶ್ವವಿದ್ಯಾಲಯ ಸೇರಿದಂತೆ 14 ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದ್ದಳು.

ಪೂಜಾ ಚಂದ್ರಶೇಖರ್ ತಂದೆ-ತಾಯಿ ಬೆಂಗಳೂರಿನವರು. 17 ವರ್ಷದ ಪೂಜಾ ಸದ್ಯ ಥಾಮಸ್ ಜೆಫರ್‌ಸನ್ ಹೈಸ್ಕೂಲ್ ವಿದ್ಯಾರ್ಥಿನಿ. ಉನ್ನತ ವ್ಯಾಸಂಗಕ್ಕಾಗಿ ಐವಿ ಲೀಗ್‌ನ 8 ವಿಶ್ವವಿದ್ಯಾಲಯ ಸೇರಿದಂತೆ 14 ಪ್ರತಿಷ್ಠಿತ ವಿವಿಗಳಲ್ಲಿ ಆಕೆ ಪ್ರವೇಶಕ್ಕಾಗಿ ಅರ್ಹತೆ ಪಡೆದಿದ್ದಾಳೆ.

Pooja Chandrashekar

ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ಕನಸು ಹೊತ್ತಿರುವ ಪೂಜಾ ಚಂದ್ರಶೇಖರ್ ತಮ್ಮ ಅಧ್ಯಯನ, ಕನಸುಗಳ ಬಗ್ಗೆ ಒನ್ ಇಂಡಿಯಾದ ಜೊತೆ ಮಾತನಾಡಿದ್ದಾರೆ. ಪೂಜಾ ಚಂದ್ರಶೇಖರ್ ಸಂದರ್ಶನದ ವಿವರಗಳು ಇಲ್ಲಿವೆ. [ಅಮೆರಿಕದಲ್ಲಿ ಸಾಧನೆ ಮಾಡಿದ ಬೆಂಗಳೂರು ಬಾಲಕಿ]

ನಿಮ್ಮ ಸಾಧನೆಗೆ ಸ್ಫೂರ್ತಿ ಏನು?
ಬದಲಾವಣೆ ತರಬೇಕು ಎಂಬ ನಂಬಿಕೆಯೊಂದಿಗೆ ನಾನು ಕೆಲಸ ಆರಂಭಿಸುತ್ತೇನೆ. ನಾನು ಮಾಡುವ ಕೆಲಸಗಳು ಸಮಾಜದಲ್ಲಿ ಬದಲಾವಣೆ ತರಬೇಕು ಎಂಬುದು ನನ್ನ ಉದ್ದೇಶವಾಗಿದೆ. ಜನರ ಮಾತನಾಡುವ ರೀತಿಯ ಮೂಲಕವೇ ಅವರು ಪಾರ್ಕಿನ್‌ಸನ್ ರೋಗದಿಂದ ಬಳುತ್ತಿದ್ದಾರೆಯೇ? ಎಂಬುದನ್ನು ಪತ್ತೆ ಹಚ್ಚುವ ಅಪ್ಲಿಕೇಶನ್ ಸಿದ್ಧಪಡಿಸುವಾಗಲೂ ನನಗೆ ಇದೇ ರೀತಿಯ ನಂಬಿಕೆ ಇತ್ತು. [ಪೂಜಾ ಚಂದ್ರಶೇಖರ್ ಪರಿಚಯ]

14 ವಿಶ್ವವಿದ್ಯಾಲಯಗಳ ಪೈಕಿ ನಿಮ್ಮ ಆಯ್ಕೆ ಯಾವುದು?
ಯಾವ ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಮೇ 1ರ ಬಳಿಕ ಈ ಕುರಿತು ನಿರ್ಧಾರ ಕೈಗೊಳ್ಳಲಿದ್ದೇನೆ. ಹಾರ್ವಡ್ ಮತ್ತು ಸ್ಟಾನ್‌ಪೋರ್ಡ್‌ ವಿವಿಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದೇನೆ. ಎರಡೂ ವಿವಿಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಿದ್ದೇನೆ.

ಓದು, ಇತರ ಚಟುವಟಿಕೆಗಳಿಗೆ ಸಮಯ ಹೇಗೆ ಸಾಕಾಗುತ್ತದೆ?
ಪ್ರತಿದಿನ ಸಂಜೆ ಮೂರು ಗಂಟೆಗಳ ಅವಧಿಯನ್ನು ಓದು ಮತ್ತು ಹೋಂ ವರ್ಕ್‌ಗಾಗಿ ಮೀಸಲಾಗಿಟ್ಟಿದ್ದೇನೆ. ಬಾಲಕಿಯರು ವಿಜ್ಞಾನ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗ ಮಾಡಲು ಪ್ರೋತ್ಸಾಹಿಸಲು ಅನುಕೂಲವಾಗುವಂತೆ ಸ್ಥಾಪಿಸಿರುವ ಸ್ವಯಂ ಸೇವಾ ಸಂಸ್ಥೆಯ ಕೆಲಸ ಓದಿನ ಜೊತೆಗೆ ಸಾಗುತ್ತಿದೆ. ಬರವಣಿಗೆ, ಟೆನಿಸ್ ಆಡುವುದು, ಸಂಗೀತ ಕೇಳುವುದು ನನ್ನ ಇತರ ಹವ್ಯಾಸಗಳು. ಬಾಲಿವುಡ್ ಸಿನಿಮಾಗಳೆಂದರೆ ನನಗೆ ಅಚ್ಚುಮೆಚ್ಚು.

ನೀವು ಕಂಡುಹಿಡಿದ ಮೊಬೈಲ್ ಅಪ್ಲಿಕೇಶನ್‌ ಬಗ್ಗೆ ಹೇಳಿ?
ಇದು ಜನರು ಪಾರ್ಕಿನ್‌ಸನ್ ರೋಗದಿಂದ ಬಳಲುತ್ತಿದ್ದಾರೆಯೇ? ಎಂಬುದನ್ನು ಪತ್ತೆ ಹಚ್ಚುವ ಅಪ್ಲಿಕೇಶನ್. ಜನರು 10-15 ಸೆಕೆಂಡ್ ಮಾತನಾಡಿದರೆ ಅವರು ರೋಗದಿಂದ ಬಳಲುತ್ತಿದ್ದಾರೆಯೇ ಎಂದು ಶೇ 96ರಷ್ಟು ನಿಖರವಾಗಿ ಪತ್ತೆ ಹೇಳಬಹುದು. ಈ ಅಪ್ಲಿಕೇಶನ್‌ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಮುಂದಿನ ವರ್ಷ ಇದನ್ನು ಡೌನ್‌ಲೋಡ್ ಮಾಡಿಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಸಂದರ್ಶನದ ಪೂರ್ಣ ವಿವರ ಓದಿ

English summary
Pooja Chandrashekar, daughter of IT immigrants to US from Bengaluru, was recently in news all over India. Pooja has earned admission to 14 top US universities, including all eight Ivy League schools considered the most prestigious varsities worldwide. Here is the interview of Pooja Chandrashekhar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X