2022ರಲ್ಲಿ ಬಾಹ್ಯಾಕಾಶಕ್ಕೆ ಹಾರಾಲು ಈಗಾಗಲೇ ಟಿಕೆಟ್ ಬುಕ್ಕಿಂಗ್ ಶುರು!

ನ್ಯೂಯಾರ್ಕ್, ಜುಲೈ 12: ಕೋಟ್ಯಧೀಶ ಉದ್ಯಮಿ ರಿಚರ್ಡ್ ಬ್ರಾನ್ಸನ್ ಬಾಹ್ಯಾಕಾಶದಲ್ಲಿ ಹಾರಾಡುವ ಕನಸು ಕಂಡವರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ತಮ್ಮ ಬಾಲ್ಯದ ಕನಸು ನನಸು ಮಾಡಿಕೊಂಡ ರಿಚರ್ಡ್, ಬಾಹ್ಯಾಕಾಶಕ್ಕೆ ಹಾರುವವರಿಗಾಗಿ ಸೂಕ್ತ ಯೋಜನೆಯೊಂದನ್ನು ರೂಪಿಸಲಿದ್ದಾರೆ.

Recommended Video

      ಇಂಗ್ಲೆಂಡಿನ ಕೋಟ್ಯಧಿಪತಿ ಉದ್ಯಮಿ ರಿಚರ್ಡ್ ಬ್ರಾನ್ಸನ್ ತಮ್ಮ ಕನಸನ್ನ ನನಸು ಮಾಡಿಕೊಂಡಿದ್ದು ಹೀಗೆ! | Oneindia

      ಪ್ರತಿವರ್ಷ ಬಾಹ್ಯಾಕಾಶಕ್ಕೆ 400 ಗಗನ ನೌಕೆಗಳು ಹಾರಲಿದ್ದು, 2022ರಿಂದಲೇ ರಿಚರ್ಡ್ ಬ್ರಾನ್ಸನ್ ಹೊಸ ಯೋಜನೆ ಜಾರಿಗೆ ಬರುವ ಸಾಧ್ಯತೆಯಿದೆ. ಈಗಾಗಲೇ ಹಾಲಿವುಡ್ ಸ್ಟಾರ್ ನಟರು ಸೇರಿದಂತೆ 60 ರಾಷ್ಟ್ರಗಳ 600ಕ್ಕೂ ಹೆಚ್ಚು ಮಂದಿ ಬಾಹ್ಯಾಕಾಶ ನೌಕೆಯಲ್ಲಿ ಪ್ರಯಾಣಿಸಲು ಟಿಕೆಟ್ ಬುಕ್ಕಿಂಗ್ ಮಾಡಿದ್ದಾರೆ.

      ಬಾಹ್ಯಾಕಾಶ ನೌಕೆಯಲ್ಲಿ ಪ್ರಯಾಣಿಸುವುದಕ್ಕೆ ಒಂದು ಟಿಕೆಟ್ ಬೆಲೆ 2 ರಿಂದ 2.5 ಲಕ್ಷ ಡಾಲರ್ ನಿಗದಿಪಡಿಸಲಾಗಿದೆ. ರಿಚರ್ಡ್ ಬ್ರಾನ್ಸನ್ ಬಾಹ್ಯಾಕಾಶ ಪ್ರಯಾಣ ಯಶಸ್ವಿಯಾಗುತ್ತಿದ್ದಂತೆ, ಅದನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಲು ಯೋಜನೆ ರೂಪಿಸಲಾಗುತ್ತಿದೆ.

       Every Year 400 Flights Get Ready To Fly; Ticket Booking Started For Space Travel

      ಬಾಹ್ಯಾಕಾಶ ಪ್ರವಾಸದ ಘೋಷಣೆ:

      ವರ್ಜಿನ್​ ಗ್ಯಾಲಕ್ಟಿಕ್ ಸ್ಪೇಸ್​ಫ್ಲೈಟ್​ ಕಂಪನಿಯಲ್ಲಿ ತಮ್ಮ ತಾಯಿ ಹೆಸರಿನಲ್ಲೇ ರಚಿಸಿರುವ ವಿಭಿನ್ನ ಹಾಗೂ ವಿಶಿಷ್ಟವಾದ ವಿಎಸ್ಎಸ್ ಯುನಿಟಿ ಗಗನ ನೌಕೆಯಲ್ಲಿ ತಮ್ಮ ಐದು ಮಂದಿ ತಂತ್ರಜ್ಞರು ಹಾಗೂ ಸಹಚರರೊಂದಿಗೆ ನಡೆಸಿದ ಬಾಹ್ಯಾಕಾಶ ಪ್ರಯಾಣ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಬಾಹ್ಯಾಕಾಶ ಪ್ರವಾಸ ವಲಯದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡುವ ನಿರೀಕ್ಷೆ ಕಂಡು ಬಂದಿದೆ. ಈ ಸಂಬಂಧ ಇನ್ನೊಂದು ತಿಂಗಳಿನಲ್ಲೇ ಯೋಜನೆಯ ಬಗ್ಗೆ ಅಧಿಕೃತವಾಗಿ ಘೋಷಿಸುವ ಸಾಧ್ಯತೆಗಳಿವೆ.

      ಭಾನುವಾರ ನ್ಯೂ ಮೆಕ್ಸಿಕೋ ಮರುಭೂಮಿಯಿಂದ 89 ಕಿಲೋ ಮೀಟರ್ (53 ಮೈಲಿ) ಎತ್ತರಕ್ಕೆ ಹಾರಿದ್ದಾರೆ. ಯಾವುದೇ ಅಡ್ಡಿ ಆತಂಕವಿಲ್ಲದೇ ಪ್ರವಾಸ ಆರಂಭವಾದ ಒಂದು ಗಂಟೆಯ ನಂತರ ಅಂದರೆ ಮೌಂಟೇನ್ ಟೈಮ್ (1540 GMT) ಬೆಳಿಗ್ಗೆ 9:40ಕ್ಕೆ ನಿಗದಿತ ಗುರಿಯನ್ನು ತಲುಪಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+