Ukraine War: ರಷ್ಯಾ ವಿರುದ್ಧ ಮತ್ತೊಂದು ಅಸ್ತ್ರ ಪ್ರಯೋಗ ಮಾಡಿದ ಯುರೋಪ್ ಒಕ್ಕೂಟ!
ರಷ್ಯಾ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಅಸ್ತ್ರ ಪ್ರಯೋಗ ಮಾಡಲು ಪಾಶ್ಚಿಮಾತ್ಯ ದೇಶಗಳು ಮುಂದಾಗುತ್ತಿವೆ. ರಷ್ಯಾ & ಪಾಶ್ಚಿಮಾತ್ಯ ದೇಶಗಳ ನಡುವೆ ದೊಡ್ಡ ತಿಕ್ಕಾಟವೇ ನಡೆಯುತ್ತಾ ಬಂದಿದ್ದು, ಇದಕ್ಕೆ ದೊಡ್ಡ ಇತಿಹಾಸ ಕೂಡ ಇದೆ. ಅದರಲ್ಲೂ ರಷ್ಯಾ ಅಧ್ಯಕ್ಷರಾಗಿ ಈಗಿನ ಪ್ರೆಸಿಡೆಂಟ್ ವ್ಲಾದಿಮಿರ್ ಪುಟಿನ್ ಎಂಟ್ರಿ ಕೊಟ್ಟ ನಂತರ ರಷ್ಯಾ & ಪಾಶ್ಚಿಮಾತ್ಯ ದೇಶಗಳ ನಡುವಿನ ದ್ವೇಷ ಇನ್ನಷ್ಟು ಹೆಚ್ಚಾಗಿದೆ. ಹೀಗಿದ್ದಾಗ 3 ವರ್ಷದ ಹಿಂದೆ ಉಕ್ರೇನ್ ವಿರುದ್ಧ ಯುದ್ಧ ಸಾರಿದ್ದ ರಷ್ಯಾ ವಿರುದ್ಧ ಯುರೋಪ್ ಒಕ್ಕೂಟ ಮತ್ತೊಂದು ಸುತ್ತಿನಲ್ಲಿ ಸೇಡನ್ನು ತೀರಿಸಿಕೊಂಡಿದೆ.
ಉಕ್ರೇನ್ ಪರವಾಗಿ ನಿಂತಿರುವ ಪಾಶ್ಚಿಮಾತ್ಯ ದೇಶಗಳು ಯುದ್ಧದಲ್ಲಿ ರಷ್ಯಾಗೆ ಎದುರೇಟನ್ನು ಕೊಡಲು ಕಾಯುತ್ತಿವೆ. ಸಮಯ ಸಿಕ್ಕಾಗೆಲ್ಲಾ ರಷ್ಯಾ ವಿರುದ್ಧ ಕ್ರಮ ಕೈಗೊಳ್ಳುತ್ತಿರುವ ಇದೇ ಪಾಶ್ಚಿಮಾತ್ಯ ದೇಶಗಳು, ಪದೇ ಪದೇ ಕಿರಿಕ್ ಮಾಡುತ್ತಿವೆ. ಅದರಲ್ಲೂ ಯುದ್ಧ ನಿಲ್ಲಿಸಬೇಕು ಎಂಬ ಒತ್ತಡ ಕೂಡ ಹೇರಲಾಗುತ್ತಿದೆ. ಇಷ್ಟೆಲ್ಲದರ ನಡುವೆ ಇದೀಗ ಯುದ್ಧದ ನೆಪವನ್ನೇ ಮುಂದೆ ಇಟ್ಟುಕೊಂಡು ರಷ್ಯಾಗೆ ಶಾಕ್ ಕೊಡಲಾಗಿದೆ, ಈ ಮೂಲಕ ರಷ್ಯಾ ಮತ್ತೊಂದು ಆಘಾತದ ಸುಳಿಗೆ ಸಿಲುಕಿದೆ.

ಪುಟಿನ್ ಆಡಳಿತಕ್ಕೆ ಯುರೋಪ್ ಶಾಕ್?
ರಷ್ಯಾ ವಿರುದ್ಧ ಮತ್ತೊಂದು ಅಸ್ತ್ರ ಪ್ರಯೋಗ ಮಾಡಿದ ಯುರೋಪ್ ಒಕ್ಕೂಟ ಇದೀಗ ರಷ್ಯಾ ವಿರುದ್ಧ ಇನ್ನೊಂದು ನಿರ್ಬಂಧ ಹೇರಿದೆ. ಉಕ್ರೇನ್‌ನ ವಿರುದ್ಧ ರಷ್ಯಾ ದಾಳಿ ನಡೆಸುತ್ತಿರುವ ಕಾರಣವನ್ನೇ ಮುಂದೆ ಇಟ್ಟುಕೊಂಡು ಇದೀಗ ರಷ್ಯಾದ ವಿರುದ್ಧ ಹೊಸ ನಿರ್ಬಂಧ ವಿಧಿಸಿದೆ ಯುರೋಪ್ ಒಕ್ಕೂಟ. ಹೊಸ ನಿರ್ಬಂಧಗಳ ಅನ್ವಯ, ರಾಸಾಯನಿಕ ಶಸ್ತ್ರಾಸ್ತ್ರ, ಮಾನವ ಹಕ್ಕುಗಳು ಮತ್ತು ಹೈಬ್ರಿಡ್ ಬೆದರಿಕೆ ಸಂಬಂಧ ಕ್ರಮ ಕೈಗೊಳ್ಳಲಾಗಿದೆ.
ಅಲ್ಲದೆ ರಷ್ಯಾ ದೇಶ ಈಗ ನಂಬಿರುವ ತೈಲ ರಫ್ತಿಗೂ ಏಟು ಕೊಡಲು ಇದೀಗ ಯುರೋಪ್ ಒಕ್ಕೂಟ ಮುಂದಾಗಿದೆ. ಇದೀಗ ಕೈಗೊಂಡಿರುವ ನಿರ್ಬಂಧ ಕ್ರಮ ಹಿನ್ನೆಲೆ ರಷ್ಯಾದ ಪ್ರಮುಖ ತೈಲ ಸಂಸ್ಥೆ ಆಗಿರುವ ಸುರ್ಗುಟೆಫೈಗಾಜ್ & ಹಡಗು ವಿಮಾ ಕಂಪನಿಗಳೂ ಸೇರಿದಂತೆ 130ಕ್ಕೂ ಹೆಚ್ಚು ಕಂಪನಿಗಳಿಗೆ ಏಟು ನೀಡುವ ಸಾಧ್ಯತೆ ಇದೆ. ಹೀಗೆ ಜಿ-7 ದೇಶಗಳ ಹಣಕಾಸು ಮಂತ್ರಿಗಳ ಸಭೆಯಲ್ಲಿ ಇನ್ನೊಂದು ಅಸ್ತ್ರ ಪ್ರಯೋಗಕ್ಕೂ ಇದೀಗ ಯುರೋಪ್ ಒಕ್ಕೂಟ ಮುಂದಾಗಿದೆ.
ರಷ್ಯಾದ ತೈಲ ರಫ್ತು ಕಷ್ಟವಾಗುತ್ತಾ?
ಜಿ-7 ದೇಶಗಳ ಹಣಕಾಸು ಮಂತ್ರಿಗಳ ಸಭೆಯಲ್ಲಿ ಮತ್ತಷ್ಟು ನಿರ್ಬಂಧ ಹೇರಿಕೆ ಮಾಡುವುದೂ ಅಲ್ಲದೆ, ರಷ್ಯಾದ ಕಚ್ಚಾ ತೈಲ ರಫ್ತಿಗೆ ಏಟು ಕೊಡಲು ಸಿದ್ಧತೆ ನಡೆಸಲಾಗಿದೆ ಎಂಬ ಮಾಹಿತಿ ಇದೀಗ ಹರಿದಾಡುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಕೆನಡಾದಲ್ಲಿ ನಡೆಯುವ ಜಿ-7 ದೇಶಗಳ ಹಣಕಾಸು ಮಂತ್ರಿಗಳ ಸಭೆಯಲ್ಲಿ ಯುರೋಪ್ ಒಕ್ಕೂಟ ಈ ತೀರ್ಮಾನ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.












Click it and Unblock the Notifications