ಇರಾನ್‌ಗೆ ದಿಢೀರ್ ಆಘಾತ ನೀಡಿದ ಯುರೋಪಿಯನ್ ಒಕ್ಕೂಟ!

ಇರಾನ್ ಇದೀಗ ಸಾಲು ಸಾಲು ಸಂಕಷ್ಟ ಎದುರಿಸುತ್ತಿದೆ, ಒಂದು ಕಡೆ ಇಸ್ರೇಲ್ ತನ್ನ ಮೇಲೆ ದಾಳಿ ಮಾಡುವ ಭಯ ಕಾಡುತ್ತಿದೆ. ಇನ್ನೊಂದು ಕಡೆ ತನ್ನ ಪರಮಾಣು ಸ್ಥಾವರಗಳ ರಕ್ಷಣೆ ಕೂಡ ಇರಾನ್ ದೇಶಕ್ಕೆ ಕಷ್ಟಕರವಾಗಿದೆ. ಪರಿಸ್ಥಿತಿ ಹೀಗಿದ್ದಾಗಲೇ ಆರ್ಥಿಕವಾಗಿ ಕೂಡ ಈ ದೇಶ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಇಷ್ಟೆಲ್ಲಾ ಒತ್ತಡದ ನಡುವೆ ದಿಢೀರ್ ಯುರೋಪ್ ಒಕ್ಕೂಟ ಇರಾನ್ ದೇಶಕ್ಕೆ ಮತ್ತೊಂದು ಆಘಾತವನ್ನೇ ನಿಡಿದೆ! ಹಾಗಾದ್ರೆ ಯುರೋಪಿಯನ್ ಯೂನಿಯನ್ ಇದೀಗ ಕೈಗೊಂಡಿರುವ ಆ ನಿರ್ಧಾರ ಎಂತಹದ್ದು? ಬನ್ನಿ ತಿಳಿಯೋಣ.

ರಷ್ಯಾ & ಉಕ್ರೇನ್ ಯುದ್ಧ ಶುರುವಾದ ನಂತರ ಉಕ್ರೇನ್ ಪರವಾಗಿ ಅಮೆರಿಕದ ನೇತೃತ್ವದಲ್ಲಿ ನ್ಯಾಟೋ ಒಕ್ಕೂಟ ಬೆಂಬಲ ನೀಡುತ್ತಾ ಬಂದಿದೆ. ಆದರೆ ರಷ್ಯಾ ಪರವಾಗಿ ನಿಂತಿರುವ ಕೆಲವೇ ಕೆಲವು ದೇಶಗಳ ಪೈಕಿ ಇರಾನ್ ಕೂಡ ಒಂದು. ಚೀನಾ, ಉತ್ತರ ಕೊರಿಯಾ, ಇರಾನ್ ಸೇರಿ ಇನ್ನೂ ಕೆಲವು ರಾಷ್ಟ್ರಗಳು ಇದೀಗ ರಷ್ಯಾ ಮಿಲಿಟರಿಗೆ ಗುಟ್ಟಾಗಿ ಸಹಾಯ ಮಾಡುತ್ತಿವೆ ಎಂಬ ಆರೋಪ ಇದೆ. ಇಷ್ಟೆಲ್ಲದರ ನಡುವೆ ಇರಾನ್ ಟಾರ್ಗೆಟ್ ಆಗಿದ್ದು, ಅಮೆರಿಕದ ಪರಮ ಶತ್ರು ಇರಾನ್‌ಗೆ ಇದೀಗ ಯುರೋಪ್ ಒಕ್ಕೂಟ ಆಘಾತ ನೀಡಿದೆ.

European Union Gave Shock To Iran For Transferring Missiles To Russia

ಯುರೋಪಿಯನ್ ದೇಶಗಳು ಒಂದಾಗಿ...

ಇರಾನ್ ಭಾರಿ ದೊಡ್ಡ ಪ್ರಮಾಣದಲ್ಲಿ ರಷ್ಯಾಗೆ ಕ್ಷಿಪಣಿಗಳನ್ನು ಕಳುಹಿಸಿದೆ. ಈ ಮೂಲಕ, ರಷ್ಯಾ ಸೇನೆಗೆ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಇರಾನ್ ಸಹಾಯ ಮಾಡುತ್ತಿದೆ ಎಂಬ ಭಾರಿ ಗಂಭೀರ ಆರೋಪ ಮಾಡಿದೆ ಯುರೋಪ್ ಒಕ್ಕೂಟ. ಇದೇ ಕಾರಣಕ್ಕೆ ಇದೀಗ ಇರಾನ್‌ಗೆ ಆಘಾತ ನೀಡಿದೆ ಯುರೋಪ್ ಒಕ್ಕೂಟ. ಇದರ ಭಾಗವಾಗಿ ಇದೀಗ ಇರಾನ್ ವಿರುದ್ಧ ಹತ್ತಾರು ಹೊಸ ನಿರ್ಬಂಧ ಹೇರಿದೆ ಯುರೋಪ್ ಒಕ್ಕೂಟ. ಇದೀಗ ಯುರೋಪಿಯನ್ ದೇಶಗಳು ಒಂದಾಗಿ ಈ ನಿರ್ಧಾರ ಕೈಗೊಂಡಿವೆ. ಇದು ಭಾರಿ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ.

ಇರಾನ್ ಪರಮಾಣು ಬಾಂಬ್ ಪ್ರಯೋಗ?

ಒಟ್ನಲ್ಲಿ ಮಧ್ಯಪ್ರಾಚ್ಯ ಇದೀಗ ಕಾದ ಕೆಂಡವಾಗಿ ಹೋಗಿದ್ದು, ಪರಿಸ್ಥಿತಿ ಕೈಮೀರಿ ಹೋಗಿದೆ ಎನ್ನಬಹುದು. ಇಂತಹ ಸಮಯದಲ್ಲೇ ಇರಾನ್ ವಿರುದ್ಧ ಮತ್ತೊಂದು ಆರೋಪ ಓಡಾಡ್ತ ಇದ್ದು ಈ ಬಗ್ಗೆ ಅಧಿಕೃತ ಮಾಹಿತಿಗಳು ಹೊರ ಬಿದ್ದಿಲ್ಲ. ಹಾಗೇ ಇನ್ನೊಂದು ಕಡೆ ಇರಾನ್ ಪರಮಾಣು ಬಾಂಬ್ ಪ್ರಯೋಗ ನಡೆಸಿದೆ, ಈ ಮೂಲಕ ಇಸ್ರೇಲ್ ವಿರುದ್ಧ ಬಳಕೆಗೆ ಪ್ಲಾನ್ ಮಾಡಿದೆ ಎಂಬ ಆರೋಪ ಕೂಡ ಕೇಳಿಬಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+